ಚಾಮರಾಜನಗರ: ಮಹದೇಶ್ವರ ಬೆಟ್ಟದಲ್ಲಿ ಕಾಡಾನೆ ದಾಳಿಗೆ ಮಾದಪ್ಪನ ಭಕ್ತ ಬಲಿ

ಗೋವಿಂದರಾಜು ಮತ್ತು ಆತನ ಸ್ನೇಹಿತ ಲೋಕೇಶ್‌ ಇಬ್ಬರು ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ದಿಢೀರನೆ ಪ್ರತ್ಯಕ್ಷವಾದ ಕಾಡಾನೆ ಗೋವಿಂದರಾಜು ಮೇಲೆ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  

38 Year Old Man Dies Due to Elephant Attack in Chamarajanagara grg

ಹನೂರು(ಆ.21):  ಕಾಡಾನೆ ದಾಳಿಯಿಂದ ಮಾದಪ್ಪನ ಭಕ್ತನೊಬ್ಬ ಬಲಿಯಾದ ಘಟನೆ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಶನಿವಾರ ಜರುಗಿದೆ. 

ಬೆಂಗಳೂರು ಮೂಲದ ಜೋಗಿಪಾಳ್ಯದ ಗೋವಿಂದರಾಜು (38) ಆನೆ ದಾಳಿಯಿಂದ ಮೃತಪಟ್ಟ ದುರ್ದೈವಿಯಾಗಿದ್ದಾನೆ. 

ಬಹಿರ್ದೆಸೆಗೆ ತೆರಳಿದ್ದ ಯುವಕನ ಮೇಲೆ ಕಾಡಾನೆ ದಾಳಿ: ದೂರು ನೀಡಿದರೂ ಸ್ವೀಕರಿಸದ ಅರಣ್ಯಾಧಿಕಾರಿಗಳು

ಮಲೆ ಮಹದೇಶ್ವರ ಬೆಟ್ಟವನ್ಯ ಜೀವಿಯ ವಿಭಾಗದ ಗೋಪಿನಾಥಂ ವಲಯದ ಇಂಡಿಗನತ್ತ-ನಾಗಮಲೆ ಗ್ರಾಮಗಳ ಮಧ್ಯೆ ಬರುವ ಅರಣ್ಯ ಪ್ರದೇಶದಲ್ಲಿ ಶನಿವಾರ ರಾತ್ರಿ 11:30 ರಲ್ಲಿ ಗೋವಿಂದರಾಜು ಮತ್ತು ಆತನ ಸ್ನೇಹಿತ ಲೋಕೇಶ್‌ ಇಬ್ಬರು ನಾಗಮಲೆಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ದಿಢೀರನೆ ಪ್ರತ್ಯಕ್ಷವಾದ ಕಾಡಾನೆ ಗೋವಿಂದರಾಜು ಮೇಲೆ ದಾಳಿ ಮಾಡಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಲೋಕೇಶ್‌ ಸ್ವಲ್ಪ ಅಂತರದಲ್ಲಿಯೇ ಪ್ರಾಣಾಪಾಯದಿಂದ ಪಾರಾರಿಯಾಗಿದ್ದಾರೆ.

Latest Videos
Follow Us:
Download App:
  • android
  • ios