Asianet Suvarna News Asianet Suvarna News

ಬೆಂಗ್ಳೂರಲ್ಲಿ ನಿನ್ನೆ 37.2 ಡಿಗ್ರಿಗೆ ಜಿಗಿದ ಬಿಸಿಲು: ಮೂರು ವರ್ಷಗಳಲ್ಲೇ ದಾಖಲೆ..!

ಏಪ್ರಿಲ್‌ನ ವಾಡಿಕೆ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್‌ ಆಗಿದ್ದು, ವಾಡಿಕೆ ಪ್ರಮಾಣಕ್ಕಿಂತ 3.2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿನ ಉಷ್ಣಾಂಶ ಮಂಗಳವಾರ ದಾಖಲಾಗಿದೆ. ಈ ಮೂಲಕ ಮೂರು ವರ್ಷದ ಹಿಂದಿನ ಏಪ್ರಿಲ್‌ ತಿಂಗಳಿನ ಗರಿಷ್ಠ ಉಷ್ಣಾಂಶ ದಾಖಲೆಯನ್ನು ಸರಿಗಟ್ಟಿದೆ. 2021ರ ಏಪ್ರಿಲ್‌ 1ರಂದು ಸಹ 37.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. 2016ರಲ್ಲಿ 39.2 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾರ್ವಕಾಲಿಕ ದಾಖಲೆ ಆಗಿತ್ತು. 

37.2 Degree Temperature in Bengaluru on April 2nd grg
Author
First Published Apr 3, 2024, 5:00 AM IST

ಬೆಂಗಳೂರು(ಏ.03):  ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಗರಿಷ್ಠ ಉಷ್ಣಾಂಶ 37.2 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಬಿಸಿಲ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದೊಂದು ವಾರದಿಂದ ನಗರದಲ್ಲಿ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿದೆ. ಭಾನುವಾರ 36.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಇದೀಗ ಮಂಗಳವಾರ ದಾಖಲೆಯ 37.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ನಗರದಲ್ಲಿ ಏಪ್ರಿಲ್‌ನ ವಾಡಿಕೆ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್‌ ಆಗಿದ್ದು, ವಾಡಿಕೆ ಪ್ರಮಾಣಕ್ಕಿಂತ 3.2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಿನ ಉಷ್ಣಾಂಶ ಮಂಗಳವಾರ ದಾಖಲಾಗಿದೆ. ಈ ಮೂಲಕ ಮೂರು ವರ್ಷದ ಹಿಂದಿನ ಏಪ್ರಿಲ್‌ ತಿಂಗಳಿನ ಗರಿಷ್ಠ ಉಷ್ಣಾಂಶ ದಾಖಲೆಯನ್ನು ಸರಿಗಟ್ಟಿದೆ. 2021ರ ಏಪ್ರಿಲ್‌ 1ರಂದು ಸಹ 37.2 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. 2016ರಲ್ಲಿ 39.2 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗುವ ಸಾರ್ವಕಾಲಿಕ ದಾಖಲೆ ಆಗಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ 37.3 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ, ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ 35.3, ಜಿಕೆವಿಕೆಯಲ್ಲಿ 36 ಡಿಗ್ರಿಸೆಲ್ಸಿಯಸ್‌ ದಾಖಲಾಗಿದೆ.

ಮಾರ್ಚ್‌ನಲ್ಲಿ ಬಾರದ ಮಳೆ: ಭಾರೀ ಬಿಸಿಲಿನಿಂದ ಕಾದ ಕಾವಲಿಯಂತಾದ ಬೆಂಗ್ಳೂರು..!

ಕನಿಷ್ಠ ಉಷ್ಣಾಂಶದಲ್ಲೂ ಹೆಚ್ಚಳ:

ಗರಿಷ್ಠ ಉಷ್ಣಾಂಶದಲ್ಲಿ ಮಾತ್ರವಲ್ಲ, ಕನಿಷ್ಠ ಉಷ್ಣಾಂಶದಲ್ಲಿಯೂ ಏರಿಕೆ ಉಂಟಾಗಿದೆ. ಮಂಗಳವಾರ 24.5 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಇದು ವಾಡಿಕೆ ಪ್ರಮಾಣಕ್ಕಿಂತ 2.7 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ.
ಹಿಂದಿನ ವರ್ಷಗಳ ಏಪ್ರಿಲ್‌ ತಿಂಗಳಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ

ವರ್ಷ ದಿನಾಂಕ ಗರಿಷ್ಠ ಉಷ್ಣಾಂಶ

2021 ಏ.1 37.2
2020 ಏ.6 36.4
2019 ಏ.28 37.0
2018 ಏ.30 34.9
2017 ಏ.26 37.0
2016 ಏ.25 39.2
2015 ಏ.6 36.5
2014 ಏ.29 36.7
2013 ಏ.8 36.8
2012 ಏ.25 37.5

Follow Us:
Download App:
  • android
  • ios