Asianet Suvarna News Asianet Suvarna News

ಕೂಡಲಸಂಗಮದಲ್ಲಿ ಜ.12ರಿಂದ 36ನೇ ಶರಣ ಮೇಳ ಆಯೋಜನೆ: ಮಾತೆ ಗಂಗಾದೇವಿ

ಕಳೆದ ವರ್ಷ ಕೋವಿಡ್‌ ಕಾರಣದಿಂದ ಶರಣ ಮೇಳ ನಡೆದಿಲ್ಲ ಈ ವರ್ಷ ಜ.12ರಂದು ಪ್ರಾರ್ಥನೆ, ಪೂಜೆ ನಡೆಯುವುದು. 13ರಂದು ಉದ್ಘಾಟನೆ, 14ರಂದು ಪಥ ಸಂಚಲನ ನಡೆಯಲಿದೆ. ರಾಜಕೀಯ ಧುರಿಣರು, ಅನೇಕ ಗಣ್ಯರು ಭಾಗವಹಿಸುವರು ಎಂದು ತಿಳಿಸಿದ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ 

36th Sharan Mela Organized at Kudalasangam from 12th Jan Says Mate Gangadevi grg
Author
First Published Dec 28, 2022, 2:30 PM IST

ಬೀದರ್‌(ಡಿ.28): ಕೂಡಲಸಂಗಮದಲ್ಲಿ ಜನವರಿ 12ರಿಂದ 14ರ ವರೆಗೆ 36ನೇ ಶರಣ ಮೇಳ ಆಯೋಜಿಸಲಾಗಿದೆ ಎಂದು ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದರು. ಇಲ್ಲಿನ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಕೋವಿಡ್‌ ಕಾರಣದಿಂದ ಶರಣ ಮೇಳ ನಡೆದಿಲ್ಲ ಈ ವರ್ಷ ಜ.12ರಂದು ಪ್ರಾರ್ಥನೆ, ಪೂಜೆ ನಡೆಯುವುದು. 13ರಂದು ಉದ್ಘಾಟನೆ, 14ರಂದು ಪಥ ಸಂಚಲನ ನಡೆಯಲಿದೆ. ರಾಜಕೀಯ ಧುರಿಣರು, ಅನೇಕ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.

ಮಾತೆ ಮಹಾದೇವಿ ಅವರು ಲಿಂಗೈಕ್ಯರಾದ ನಂತರ ಅವರ ಹೆಸರಿನಲ್ಲಿ ಬಸವಾತ್ಮಾಜೆ ಎಂಬ ರು.51 ಸಾವಿರ ನಗದು ಸಹಿತ ಪ್ರಶಸ್ತಿ ಪ್ರದಾನ ನಡೆಯಲಿದೆ. ಈಗಾಗಲೇ ಬಿ.ಟಿ.ಲಲಿತಾ ನಾಯಕ, ಸುಶೀಲಮ್ಮ ಅವರಿಗೆ ನೀಡಲಾಗಿದೆ. ಇದು 3ನೇ ಪ್ರಶಸ್ತಿಯಾಗಿದೆ. ಇನ್ನು ಶರಣ ಮೇಳದಲ್ಲಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ಮಾತಾಜಿ ತಿಳಿಸಿದರು.
ಇದು ಅಧಿಕೃತವಾಗಿ ನಡೆಯುತ್ತಿರುವ ಶರಣ ಮೇಳವಾಗಿದೆ. ಹೀಗಾಗಿ ಬೇರೆಯವರು ಶರಣ ಮೇಳ ನಡೆಸುತ್ತಿರುವದಕ್ಕೆ ನಮ್ಮದ್ಯಾವ ಅಭ್ಯಂತರವಿಲ್ಲ. ಅಲ್ಲಿನ ಗ್ರಾಮಸ್ಥರು ಬೇರೆವರಿಗೆ ಅವಕಾಶ ನೀಡಲ್ಲ ಎಂದಿದ್ದಾರೆ ಎಂದು ಮಾತಾಜಿ ಸ್ಪಷ್ಟಪಡಿಸಿದರು.

ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ರಾಜ್ಯಪಾಲ ಗೆಹ್ಲೋಟ್‌

ಸಮಾಜದಲ್ಲಿ ಗೊಂದಲ ಎಬ್ಬಿಸುವುದು ಸರಿಯಲ್ಲ:

ಚೆನ್ನಬಸವಾನಂದ ಸ್ವಾಮಿ ಅವರು ಸಮಾಜದಲ್ಲಿ ಗೊಂದಲ ಎಬ್ಬಿಸುತ್ತಿರುವುದು ಸರಿಯಲ್ಲ ಎಂದು ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದರು. ವಚನಾಂಕಿತ ಕುರಿತು ಲಿಂಗೈಕ್ಯ ಮಾತೆ ಮಹಾದೇವಿ ಅವರು ಸುಪ್ರೀಂಕೋರ್ಚ್‌ನ ತೀರ್ಪಿಗೆ ತಲೆ ಬಾಗಿದ್ದರು. ಆದರೆ, ಮಾತಾಜಿ ಅವರ ನಿರ್ಣಯಕ್ಕೆ ಚೆನ್ನಬಸವಾನಂದ ಸ್ವಾಮಿ ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲ. ಇದು ಸರಾಸರಿ ಸುಪ್ರೀಂಕೋರ್ಟನ ನಿಂದನೆ ಮಾಡುವಂತಹ ಕೆಲಸಕ್ಕೆ ಮುಂದಾದಂತಾಗಿದೆ ಎಂದರು.

ಬಸವ ಧರ್ಮ ಕಟ್ಟಿದ ಮಾತೆ ಮಹಾದೇವಿ ಅವರ ಸಮಾಜ ಒಡೆಯುವ ಕೆಲಸ ಮಾಡುತ್ತ ಸಮಾಜದಲ್ಲಿ ಗೊಂದಲ ಮೂಡಿಸುತಿದ್ದಾರೆ ಎಂದು ಬಸವರಾಜ ಧನ್ನೂರ್‌ ಅಸಮಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಬಸವಕೇಂದ್ರದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಗಂದಗೆ, ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ್‌, ಕುಶಾಲರಾವ್‌ ಪಾಟೀಲ್‌ ಖಾಜಾಪೂರ, ರಾಜೇಂದ್ರ ಜೋನ್ನಿಕೇರಿ, ಕಂಟೆಪ್ಪ ಗಂದಿಗುಡೆ, ಶಾಂತಮ್ಮ ಬಿರಾದಾರ, ಸುನೀಲ ಸ್ವಾಮಿ, ರವಿ ಪಾಪಡೆ, ಮಹಾಲಿಂಗ ಸ್ವಾಮಿ, ಪಂಚಾಕ್ಷರಿ ಇದ್ದರು.

Follow Us:
Download App:
  • android
  • ios