ಜನವರಿವರೆಗೆ ತಪ್ಪೋಲ್ಲ ಲೋಕ ಕಂಟಕ, ದೇಹಗಳು ದಾರಿಯಲ್ಲೇ ಬಿದ್ದು ಸಾಯುತ್ವೆ; ಕೋಡಿಶ್ರೀ ಭವಿಷ್ಯ ಬಾಂಬ್!

ಸ್ಪೋಟಕ ಭವಿಷ್ಯ ನುಡಿದ ಅರಸೀಕೆರೆಯ ಕೋಡಿಶ್ರೀಗಳು
ಕಾರ್ತಿಕದಿಂದ ಆರಂಭವಾಗಿ ಜನವರಿವರೆಗೆ ಲೋಕ ಕಂಟಕ
ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗ್ತಾರೆ
ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು

Kodi Mutt Seer Predicts heavy destruction in the world till January skr

ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ

ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಕಾರ್ತಿಕ ಮಾಸದಿಂದ ಜನವರಿವರೆಗೆ ಲೋಕ ಕಂಟಕವಿದೆ, ದೇಹ ಅಶಕ್ತಿಯಿಂದ ಬಿದ್ದು ಸಾಯುತ್ತವೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. 'ಮಧ್ಯಬಾಗಿಲಿನಿಂದ ಪ್ರಾರಂಭವಾಗಿ ಕಾರ್ತಿಕ ಮಾರ್ಗಶಿರ, ಜನವರಿ ಪ್ರಥಮದಲ್ಲಿಯೂ ಲೋಕ‌ ಕಂಟಕವಿದೆ. ಆ ಕಂಟಕ  ಪ್ರಾಕೃತಿಕವಾಗಿ, ಪ್ರಾದೇಶಿಕವಾಗಿ ಇರಬಹುದು, ಭೂಕಂಟಕ ಇರಬಹುದು, ರಾಜಬೀದಿ ಇರಬಹುದು' ಎಂದಿದ್ದಾರೆ.

'ಬಾಂಬ್‌ಗಳು, ಭೂಕಂಪ, ಯುದ್ದಭೀತಿ, ಜನ ಜನಗಳ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುವುದು, ದೇಹ ಅಶಕ್ತಿಯಿಂದ ದಾರಿಯಲ್ಲಿ ಬಿದ್ದು ಸಾಯುವುದು. ದೇಹ ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತವೆ' ಎಂದು ಕೋಡಿಶ್ರೀ ನುಡಿದಿದ್ದಾರೆ. ಮುಂದೆ ಜಾಗತಿಕ ದೋಷ, ರಾಷ್ಟ್ರೀಯ ದೋಷವೂ ಹೆಚ್ಚಾಗಲಿದೆ. ಎರಡು, ಮೂರು ತಿಂಗಳು ಮನುಷ್ಯರು ದೈವ ಭಕ್ತಿಯಿಂದ ನಂಬಿಕೆಯಿಂದ ಇರುವುದು ಬಹಳ ಮುಖ್ಯ ಎಂದು ಸಲಹೆ ನೀಡಿದ್ದಾರೆ. ಅಲ್ಲದೇ ಕಾರ್ತಿಕದವರೆಗೂ ಮಳೆ ಇರುತ್ತೆ ಎಂದು‌ ಸಹ ಭವಿಷ್ಯ ನುಡಿದಿದ್ದಾರೆ. ಲೋಕಕಲ್ಯಾಣಾರ್ಥ ಮಠದಲ್ಲಿ ಮಹಾರುದ್ರಜಪವನ್ನು ಪ್ರಾರಂಭ ಮಾಡತ್ತಿದ್ದೀವಿ ಎಂದು ಕೋಡಿಶ್ರೀಗಳು ತಿಳಿಸಿದ್ದಾರೆ.

ಈ ಹಿಂದಿನ ಭವಿಷ್ಯ: ಈ ಹಿಂದೆ ಅಕ್ಟೋಬರ್ ಆರಂಭದಲ್ಲಿ ಧಾರವಾಡದಲ್ಲಿ ಮಾತನಾಡಿದ್ದ ಶ್ರೀಗಳು, ರಾಜ್ಯದಲ್ಲಿ ಕಾರ್ತಿಕ ಮಾಸದಿಂದ ಯುಗಾದಿವರೆಗೆ ಸಾವು ನೋವುಗಳು ಹೆಚ್ಚಾಗಲಿವೆ ಎಂದಿದ್ದರು. ಜನರಿಗೆ ನೋವನ್ನ‌ ಕೊಡುತ್ತೆ ಕಾರ್ತಿಕ ಮಾಸ, ಭಾರತೀಯ ಸಂಸ್ಕಾರದಲ್ಲಿ ಸಂವತ್ಸರಗಳು ಒಂದೊಂದು ವರ್ಷದ ಫಲಾಫಲಗಳನ್ನು ನಿರ್ಧರಿಸುತ್ತವೆ. ಅದೆ ರೀತಿ ಕೆಡಕು ಆಗುತ್ತಲೇ ಬಂದಿದೆ. ಆದರೆ ಸದ್ಯ ಯಾವುದು ಒಳ್ಳೆಯದು ಆಗ್ತಿಲ್ಲ, ಕೇವಲ‌ ಕೆಟ್ಟದಾಗುತ್ತಾ ಬಂದಿದೆ. ಆದರೆ ಜನರು ಇದಕ್ಕೆಲ್ಲಾ ಗಟ್ಟಿಯಾಗಿರಬೇಕು. ಇದು ಶುಭಕೃತನಾಮ ಸಂವತ್ಸರ. ಆದರೆ ಈ ವರ್ಷ ಕಡೆಯವರೆಗೆ ಅಶುಭವನ್ನು ಕೊಡುತ್ತಾ ಬಂದಿದೆ. ಮುಂದೆನೂ ಅಶುಭವನ್ನೇ ಕೊಡುತ್ತೆ ಎಂದವರು ಹೇಳಿದ್ದರು. 

ರಾಜ್ಯದಲ್ಲಿ ಯುಗಾದಿವರೆಗೂ ಹೆಚ್ಚುವ ಸಾವು ನೋವು, ತಪ್ಪಿದ್ದಲ್ಲ ರಾಜಕೀಯ ಅಸ್ಥಿರತೆ; ಮತ್ತೆ ಕೋಡಿಶ್ರೀ ಕರಾಳ ಭವಿಷ್ಯ

'ಶುಭವನ್ನ‌ ಕೊಡುತ್ತಿಲ್ಲ, ಮಳೆ ಗಾಳಿ, ಭೂಕಂಪಗಳು, ಮತಾಂಧತೆಗಳು, ಸಾವು ನೋವುಗಳು, ಇವಲ್ಲವೂ ಹೆಚ್ಚಾಗ್ತಿವೆ. ಭೂಕಂಪ ಆಗುತ್ತೆ, ಮಳೆ‌, ಬೆಂಕಿಯಿಂದ ಅನಾಹುತ ರೋಗರುಜಿನಗಳು ಹೆಚ್ಚಾಗುತ್ತೆ, ಪ್ರಾಣಿ ಪಕ್ಷಗಳು ಸಾಯುತ್ತವೆ ಎಂದು ಭವಿಷ್ಯ ನುಡಿದರು. ಈ ಬಾರಿ ಇನ್ನೂ ಹಾನಿಯಾಗೋದೇ ಹೆಚ್ಷಿದೆ, ಸಾವು ನೋವು ಆಗೋ ಲಕ್ಷಣಗಳಿವೆ' ಎಂದು ಸ್ವಾಮೀಜಿ ಹೇಳಿದ್ದರು. 

'ರಾಜಕೀಯ ಅಸ್ಥಿರತೆ ಇದೆ, ಎಲ್ಲವೂ ವಿಭಾಗ ಆಗುವ ಲಕ್ಷಣಗಳು ಇವೆ, ಮೂರು ಪಕ್ಷದಲ್ಲಿ ವಿಭಾಗಗಳು ಆಗುತ್ತವೆ. ಎಲ್ಲ ಪಕ್ಷದಲ್ಲಿ ವಿಭಾಗಗಳು ಆಗುತ್ತವೆ, ರಾಜಕೀಯದಲ್ಲಿ ಯಾರನ್ನೂ ತೃಪ್ತಿ ಪಡಿಸಲು ಆಗಲ್ಲ. ನಾನು ಯಾವುದೆ ವ್ಯಕ್ತಿ ಬಗ್ಗೆ ಹೇಳಲ್ಲ. ನಾನು ಸನ್ಯಾಸಿ ಇದೇನಿ, ಯಾವ ವ್ಯಕ್ತಿ ಬಗ್ಗೆ ಮಾತನಾಡಲ್ಲ. ಮಳೆಗಾಲ ಹೀಗೆ ಮುಂದುವರೆಯುತ್ತೆ , ಹಿಂಗಾರು ಬೆಳೆ‌ ಅನ್ನದಾತರ ಕೈಗೆ ಸೇರುತ್ತೆ. ಯಾರಿಗೂ ನೂವಾಗುವಂತ ಪ್ರಸಂಗ ಏನೆಂದು ನಾನು ಹೇಳಲ್ಲ. ಆದರೆ ಕಾರ್ತಿಕ ಮಾಸದಿಂದ ಈ ಬಾರಿನೂ ಯುಗಾದಿವರೆಗೆ ರಾಜ್ಯಕ್ಕೆ ಕಂಟಕ ಕಾದಿದೆ' ಎಂದು ಧಾರವಾಡದಲ್ಲಿ ಕೋಡಿಶ್ರಿ ಭವಿಷ್ಯ ನುಡಿದಿದ್ದರು.

Latest Videos
Follow Us:
Download App:
  • android
  • ios