ಬೆಂಗ್ಳೂರಲ್ಲಿ ಕೊರೋನಾರ್ಭಟ: 4 ತಿಂಗಳ ಬಳಿಕ ಗರಿಷ್ಠ ಕೇಸ್‌..!

ರಾಜಧಾನಿಯಲ್ಲಿ ಒಂದೇ ದಿನ 3,509 ಹೊಸ ಕೇಸ್‌ ಪತ್ತೆ| 4.5 ಲಕ್ಷದತ್ತ ಒಟ್ಟು ಸೋಂಕಿತರ ಸಂಖ್ಯೆ| 24,600 ತಲುಪಿದ ಸಕ್ರಿಯ ಕೇಸ್‌| ಬೆಂಗಳೂರು ನಗರದ 16 ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಒಟ್ಟು 1,177 ಹಾಸಿಗೆ ನಿಗದಿ| 
 

3509 Coronavirus New Cases in Bengaluru on April 02nd grg

ಬೆಂಗಳೂರು(ಏ.03): ರಾಜಧಾನಿಯಲ್ಲಿ ಮಹಾಮಾರಿ ಕೊರೋನಾರ್ಭಟ ಜೋರಾಗಿದ್ದು, ಶುಕ್ರವಾರ ಒಂದೇ ದಿನ 3,509 ಹೊಸ ಪ್ರಕರಣ ದಾಖಲಾಗಿವೆ. ಈ ವರ್ಷದಲ್ಲಿ ದಿನವೊಂದರಲ್ಲಿ ದಾಖಲಾದ ಗರಿಷ್ಠ ಪ್ರಕರಣ ಇದಾಗಿದೆ.

ಈ ಹೊಸ ಪ್ರಕರಣಗಳೊಂದಿಗೆ ನಗರದಲ್ಲಿ ಈವರೆಗೆ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 4,41,242ಕ್ಕೆ ಏರಿಕೆಯಾಗಿದೆ. ಇನ್ನು ಐವರು ಸೋಂಕಿಗೆ ಬಲಿಯಾಗಿದ್ದು, ಈವರೆಗೆ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 4,635ಕ್ಕೆ ಏರಿಕೆಯಾಗಿದೆ. ಈ ನಡುವೆ ಶುಕ್ರವಾರ ಒಂದೇ ದಿನ 693 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 4,12,006ಕ್ಕೆ ಏರಿಕೆಯಾಗಿದೆ.

ಇದೇ ವೇಳೆ ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 24,600ಕ್ಕೆ ಏರಿಕೆಯಾಗಿದೆ. ಈ ಪೈಕಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ 130 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕೊರೋನಾ ಕಂಟ್ರೋಲ್‌ಗೆ ಟಫ್ ರೂಲ್ಸ್;  ಜಿಮ್, ಈಜುಕೋಳ ಬ್ಯಾನ್, ಬಾರ್‌ಗೂ ಹೋಗಂಗಿಲ್ಲ!

10 ವರ್ಷದೊಳಗಿನ 98 ಮಕ್ಕಳಿಗೆ ಸೋಂಕು

ಶುಕ್ರವಾರ ನಗರದಲ್ಲಿ ವರದಿಯಾಗಿರುವ 3,509 ಪ್ರಕರಣಗಳ ಪೈಕಿ 10 ವರ್ಷದೊಳಗಿನ 98 ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ವಯಸ್ಸಿನ ಮಕ್ಕಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. 10-19 ವರ್ಷದೊಳಗಿನ 315, 20-29 ವಷದೊಳಗಿನ 760, 30-39 ವರ್ಷದೊಳಗಿನ 793, 40-49 ವರ್ಷದೊಳಗಿನ 557, 50-59 ವರ್ಷದೊಳಗಿನ 465, 60-69 ವರ್ಷದೊಳಗಿನ 314, 70 ವರ್ಷ ಮೇಲ್ಪಟ್ಟ207 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 30-39 ವರ್ಷದೊಳಗಿನವರ ಸಂಖ್ಯೆ ಹೆಚ್ಚಿದೆ.

144 ವಾರ್ಡಲ್ಲಿ ಹೆಚ್ಚಿನ ಕೇಸ್‌

ಪಾಲಿಕೆ 198 ವಾರ್ಡ್‌ಗಳ ಪೈಕಿ 144 ವಾರ್ಡ್‌ಗಳಲ್ಲಿ 50ಕ್ಕಿಂತ ಹೆಚ್ಚಿನ ಸೋಂಕು ಪ್ರಕರಣಗಳಿವೆ. ಮಾಚ್‌ರ್‍ ಕೊನೆಯ ವಾರದಿಂದ ಸೋಂಕು ಪ್ರಕರಣಗಳು ದಿಢೀರ್‌ ಏರಿಕೆಯಾಗಿದ್ದು, ಪಾಸಿಟಿವಿಟಿ ಪ್ರಮಾಣ ಶೇ.5.41ರಷ್ಟಿದೆ. ಸೋಂಕಿನ ಸಕ್ರಿಯ ಸೋಂಕಿನ ಪ್ರಮಾಣ ಶೇ.5.58ರಷ್ಟಿದೆ. ಸೋಂಕಿತರ ಸಾವಿನ ಪ್ರಮಾಣ ಶೇ.0.14ರಷ್ಟಿದೆ.

ಲಾಕ್‍ಡೌನ್, ನೈಟ್ ಕರ್ಫ್ಯೂ; ಸರ್ಕಾರದ ಕಡೆಯಿಂದ ಸ್ಪಷ್ಟ ಮಾಹಿತಿ

ಶೇ.80 ಸೋಂಕಿತರು ಹೋಂ ಐಸೊಲೇಷನ್‌

ಪಾಲಿಕೆಯ 8 ವಲಯಗಳ ಪೈಕಿ ಕಳೆದ ಏಳು ದಿನಗಳಲ್ಲಿ ದಕ್ಷಿಣ ವಲಯದಲ್ಲಿ 2,832, ಬೊಮ್ಮನಹಳ್ಳಿ 2,490, ಪೂರ್ವ ವಲಯ 2,351, ಪಶ್ಚಿಮ 2,012, ಮಹದೇವಪುರ 1,789, ಆರ್‌.ಆರ್‌.ನಗರ 1,677, ಯಲಹಂಕ 1,258, ದಾರಹಳ್ಳಿ 425 ಪ್ರಕರಣ ಪತ್ತೆಯಾಗಿವೆ. ಈ ಪೈಕಿ ಶೇ.80ರಷ್ಟು ಸೋಂಕಿತರು ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ಶೇ.20ರಷ್ಟು ಮಂದಿ ಆಸ್ಪತ್ರೆಗಳು ಹಾಗೂ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಬಹುತೇಕ ಹಾಸಿಗೆ ಭರ್ತಿ

ನಗರದ 16 ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಒಟ್ಟು 1,177 ಹಾಸಿಗೆ ನಿಗದಿಪಡಿಸಲಾಗಿದೆ. ಈ ಪೈಕಿ 907 ಹಾಸಿಗೆ ಭರ್ತಿಯಾಗಿದ್ದು, 270 ಹಾಸಿಗೆಗಳು ಮಾತ್ರ ಲಭ್ಯವಿದೆ. ಇನ್ನು ಪಾಲಿಕೆ ಹಜ್‌ಭವನ ಮತ್ತು ಎಚ್‌ಎಎಲ್‌ನಲ್ಲಿ ಆರಂಭಿಸಿರುವ ಎರಡು ಕೋವಿಡ ಕೇರ್‌ ಸೆಂಟರ್‌ಗಳಲ್ಲಿ 278 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ 208 ಹಾಸಿಗೆಗಳು ಭರ್ತಿಯಾಗಿದ್ದು, 170 ಹಾಸಿಗೆಗಳು ಲಭ್ಯವಿದೆ. ನಗರದಲ್ಲಿ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಆಸ್ಪತ್ರೆಗಳು ಹಾಸಿಗೆಗಳು ಇನ್ನೂ ಕೆಲವೇ ದಿನಗಳಲ್ಲಿ ಭರ್ತಿಯಾಗಲಿವೆ. ಪಾಲಿಕೆ ಆಸ್ಪತ್ರೆಗಳಲ್ಲಿ ಕೋವಿಡ್‌ ವಿಭಾಗದಲ್ಲಿ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡದಿದ್ದರೆ ಸಮಸ್ಯೆಯಾಗಲಿದೆ.
 

Latest Videos
Follow Us:
Download App:
  • android
  • ios