Asianet Suvarna News Asianet Suvarna News

ಆನೇಕಲ್: ಟಿಪ್ಪರ್ ಲಾರಿಗೆ ಮತ್ತೊಬ್ಬ ಬೈಕ್ ಸವಾರ ಬಲಿ..!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ಬಳಿ ಘಟನೆ ನಡೆದಿದೆ. ಟಿಪ್ಪರ್ ಲಾರಿಗಳ ಹಾವಳಿಗೆ ಇನ್ನೆಷ್ಟು ಬಲಿಯಾಗಬೇಕೋ ಗೊತ್ತಿಲ್ಲ. ಬೈಕ್‌ ಮೇಲೆ ಟಿಪ್ಪರ್ ಲಾರಿ ಹರಿದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

35 Years Old Young Man Killed due to Tipper Truck Bike Accident at Anekal in Bengaluru Rural grg
Author
First Published Jun 8, 2024, 11:10 PM IST

ಆನೇಕಲ್(ಜೂ.08): ಟಿಪ್ಪರ್ ಲಾರಿಗೆ ಮತ್ತೊಬ್ಬ ಬೈಕ್ ಸವಾರ ಬಲಿಯಾಗಿದ್ದಾರೆ. ಹೌದು, ದ್ವಿಚಕ್ರ ವಾಹನದ ಮೇಲೆ ಟಿಪ್ಪರ್ ಲಾರಿ ಹರಿದ ಪರಿಣಾಮ ಮೋಹನ್(35) ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸರ್ಜಾಪುರ ಪೊಲೀಸ್ ಠಾಣೆ ಬಳಿ ದುರ್ಘಟನೆ ನಡೆದಿದೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ಬಳಿ ಘಟನೆ ನಡೆದಿದೆ. ಟಿಪ್ಪರ್ ಲಾರಿಗಳ ಹಾವಳಿಗೆ ಇನ್ನೆಷ್ಟು ಬಲಿಯಾಗಬೇಕೋ ಗೊತ್ತಿಲ್ಲ. ಬೈಕ್‌ ಮೇಲೆ ಟಿಪ್ಪರ್ ಲಾರಿ ಹರಿದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

ಕಲಬುರಗಿ: ಬಸ್‌ಗೆ ತ್ರಿಬಲ್‌ ರೈಡಿಂಗ್‌ ಬೈಕ್‌ ಡಿಕ್ಕಿ, ಮೂವರು ಯುವಕರ ದುರ್ಮರಣ

ಮೃತ ಮೋಹನ್(35) ಆನೇಕಲ್ ತಾಲೂಕಿನ ಸೊಳ್ಳೆಪುರದವನಾಗಿದ್ದಾನೆ. ಆನೇಕಲ್ ತಾಲೂಕಿನಲ್ಲಿ ಕಳೆದ ಎರಡು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದವೆ. ಬೈಕ್ ಸವಾರರು ಪದೇ ಪದೇ ಟಿಪ್ಪರ್ ಲಾರಿಗಳಿಗೆ ಬಲಿಯಾಗುತ್ತಿದ್ದಾರೆ. ನಿನ್ನೆ ಕೂಡ ನೀರಿನ ಟ್ಯಾಂಕ್ ಡಿಕ್ಕಿಯಾಗಿ ಅಕ್ಕ ತಮ್ಮ ಮೃತಪಟ್ಟಿದ್ದರು.. ಇಂದು ಸರ್ಜಾಪುರದಲ್ಲಿ ಬೈಕ್ ಸವಾರ ಟಿಪ್ಪರ್ ಗೆ ಬಲಿಯಾಗಿದ್ದಾನೆ. 

Latest Videos
Follow Us:
Download App:
  • android
  • ios