Asianet Suvarna News Asianet Suvarna News

ನಾಗರಹೊಳೆಯಲ್ಲಿ ಆನೆಗಳ ಕಾಳಗ : 35 ವರ್ಷದ ಗಂಡಾನೆ ಸಾವು

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಆನೆಗಳ ಕಾಳಗದಲ್ಲಿ ಗಂಡಾನೆಯೊಂದು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದೆ. 

35 year Old Elephant Dies in Nagarahole snr
Author
Bengaluru, First Published May 3, 2021, 7:08 AM IST

ಹುಣಸೂರು (ಮೇ.03): ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅನೆಚೌಕೂರು ವನ್ಯಜೀವಿ ವಲಯದಲ್ಲಿ ಕಾಡಾನೆಗಳ ಕಾಳಗದಲ್ಲಿ 35 ರಿಂದ 40 ವರ್ಷದ ವಯಸ್ಸಿನ ಗಂಡು ಆನೆ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

 ಚೆನ್ನಂಗಿ ಶಾಖೆಯ ಅಬ್ಬೂರು ಗಸ್ತಿನ ಅನಂತರಾಮ ತೋಟದ ಅರಣ್ಯ ಗಡಿ ಭಾಗದಲ್ಲಿ ಗಾಯಗೊಂಡ ಆನೆ ಕೆರೆಯಲ್ಲಿ ಮೃತಪಟ್ಟಿದೆ.

ನಾಗರಹೊಳೆ ಅಭಯಾರಣ್ಯ : ವನ್ಯಜೀವಿ ಪ್ರಿಯರ ಕಣ್ಣಿಗೆ ಈಗ ಹಬ್ಬ! .

ಮತ್ತಿಗೋಡು ಆನೆ ಶಿಬಿರದ ಸಾಕಾನೆಗಳಾದ ಅಭಿಮನ್ಯು ಹಾಗೂ ಮಹೇಂದ್ರ ಸಹಾಯದಿಂದ ಮೃತಪಟ್ಟಆನೆಯ ಕಳೆಬರಹವನ್ನು ಕೆರೆಯಿಂದ ಹೊರ ತೆಗೆಯಲಾಗಿದೆ. 

ಮರಣೋತ್ತರ ಪರೀಕ್ಷೆಯನ್ನು ವನ್ಯ ಜೀವಿ ಪಶುವೈದ್ಯ ಡಾ.ಮುಜಿಬ್‌ ನಡೆಸಿದರು.

Follow Us:
Download App:
  • android
  • ios