ನಾಗರಹೊಳೆ ಅಭಯಾರಣ್ಯ : ವನ್ಯಜೀವಿ ಪ್ರಿಯರ ಕಣ್ಣಿಗೆ ಈಗ ಹಬ್ಬ!
ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಇತ್ತೀಚೆಗೆ ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಹಾಗೂ ಚಿರತೆಗಳ ದರ್ಶನ ಆಗುತ್ತಿದೆ. ನಿನ್ನೆಯಷ್ಟೇ ಛಾಯಾಗ್ರಾಹಕ ಅನುರಾಜ್ ಬಸವರಾಜ್‌ಗೆ ಅವರ ಕ್ಯಾಮರಾದಲ್ಲಿ ಹುಲಿಯೊಂದು ಕಾಡು ಹಂದಿಯನ್ನು ಭೇಟಿಯಾಡುತ್ತಿದ್ದ ದೃಶ್ಯ ಸೆರೆಯಾಗಿದೆ.
ನಾಗರಹೊಳೆ ಅಭಯಾರಣ್ಯದಲ್ಲಿ ವನ್ಯಜೀವಿ ಪ್ರಿಯರಿಗೆ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ಸಫಾರಿಗೆ ತೆರಳುವ ಪ್ರವಾಸಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಹಾಗೂ ಚಿರತೆಗಳ ದರ್ಶನ ಆಗುತ್ತಿದೆ.
ಛಾಯಾಗ್ರಾಹಕ ಅನುರಾಜ್ ಬಸವರಾಜ್ ಕ್ಯಾಮರಾದಲ್ಲಿ (ಕನ್ನಡಪ್ರಭ ಫೋಟೋಗ್ರಾಫರ್) ಹುಲಿಯೊಂದು ಕಾಡು ಹಂದಿಯನ್ನು ಬೇಟೆಯಾಡುತ್ತಿದ್ದ ದೃಶ್ಯ ಸೆರೆಯಾಗಿದೆ.
2 ನಿಮಿಷಗಳ ರೋಚಕ ಹಣಾಹಣಿಯಲ್ಲಿ ಕಾಡು ಹಂದಿಯನ್ನು ಅಟ್ಟಿಸಿಕೊಂಡು ಹೊದ ಹುಲಿಗೆ ಕೊನೆಗೂ ನಿರಾಸೆಯಾಗಿದೆ.
ಹಂದಿಯನ್ನು ಹಿಡಿಯಲು ಯತ್ನಿಸಿದ ದೃಶ್ಯ ಬಸವರಾಜ್ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಜೊತೆಗೆ ಬಿಸಿಲ ಬೇಗೆ ತಣಿಸಿಕೊಳ್ಳುತ್ತಿರುವ ಹುಲಿರಾಯ
ನೀರಿನಲ್ಲಿ ಬೇಗೆ ತಣಿಸಿಕೊಳ್ಳುತ್ತಿರುವ ಹುಲಿ
ನೀರು ಕುಡಿದು ದಣಿವಾರಿಸಿಕೊಳ್ಳುತ್ತಿರುವ ವ್ಯಾಘ್ರ
ಕಾಡು ಹಂದಿಯ ಬೇಟೆಗೆ ನುಗ್ಗುತ್ತಿರುವ ಹುಲಿ
ಇನ್ನೇನು ಕಾಡು ಹಂದಿ ಸಿಕ್ಕೇಬಿಟ್ಟಿತು ಎನ್ನುವಷ್ಟು ಸಮೀಪದಲ್ಲಿ ಹುಲಿ
ಬೇಟೆಯಲ್ಲಿ ಕೊನೆಗೂ ಸೋತು ನಿರಾಸೆಗೊಂಡ ಹುಲಿ