ಗದಗ ವಿಧಾ​ನ​ಸಭಾ ಕ್ಷೇತ್ರಕ್ಕೆ .35 ಕೋಟಿ ಅನು​ದಾ​ನ ಸುದ್ದಿಗೋ​ಷ್ಠಿ​ಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾ​ಟೀಲ ಹೇಳಿ​ಕೆ

ಗದಗ (ಅ.30) : ಸತತ ಮಳೆಯಿಂದಾಗಿ ನಗರದ ರಸ್ತೆಗಳು ಹಾನಿಗೊಳಗಾಗಿದ್ದು, ರಸ್ತೆ​ಗಳ ಸುಧಾ​ರ​ಣೆ​ಗಾಗಿ ಗದಗ ವಿಧಾ​ನ​ಸಭಾ ಕ್ಷೇತ್ರಕ್ಕೆ ಅಂದಾ​ಜು .35 ಕೋಟಿ ಅನು​ದಾನ ಬಿಡು​ಗ​ಡೆ​ಯಾ​ಗಿ​ರು​ತ್ತ​ದೆ. ರಸ್ತೆಗಳ ದುರಸ್ತಿ ಕಾಮಗಾರಿಗಳು ಶೀಘ್ರವೇ ಪ್ರಾರಂಭಗೊಳ್ಳಲಿವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿ​ದ​ರು.

Gadag: ಚುನಾವಣೆಯಲ್ಲಿ ನಿನ್ನ ಅಂಹಕಾರ ಇಳಿಸುತ್ತಾರೆ: ಸಿದ್ದು ವಿರುದ್ಧ ಏಕವಚನದಲ್ಲೇ ಶ್ರೀರಾಮುಲು ವಾಗ್ದಾಳಿ

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸತತ ಮಳೆಯಿಂದಾಗಿ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಸದ್ಯ ಮಳೆ ಪ್ರಮಾಣ ಕಡಿಮೆಯಾದ ಕಾರಣ ಶೀಘ್ರವೇ ರಸ್ತೆ ಸುಧಾರಣಾ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದ​ರು.

.3.60 ಕೋಟಿ ಅನುದಾನದಡಿ ಚೆನ್ನಮ್ಮ ವೃತ್ತದಿಂದ ಭೂಮರೆಡ್ಡಿ ಸರ್ಕಲ್‌ ವರೆಗೆ ರಸ್ತೆ ಸುಧಾರಣೆ, .9 ಕೋಟಿ ಅನುದಾನದ ಅಡಿ ಹಳೆ ಡಿಸಿ ಆಫೀಸ್‌ನಿಂದ ಅಂಬೇಡ್ಕರ್‌ ನಗರದ ವರೆಗೆ ರಸ್ತೆ ಕಾಮಗಾರಿ, .10 ಕೋಟಿ ಅನುದಾನಡಿ ಗದಗ- ಅಡವಿಸೋಮಾಪುರ- ಲಕ್ಕುಂಡಿ ರಸ್ತೆ ಅಭಿವೃದ್ಧಿ ಕಾಮಗಾರಿ, .8 ಕೋಟಿ ಅನುದಾನದಡಿ ಗದಗ- ಕಳಸಾಪುರ ರಸ್ತೆ ಅಭಿವೃದ್ಧಿ, ರೋಣದಿಂದ ಬೆಟಗೇರಿಯ ವರೆಗಿನ ರಸ್ತೆಯ ಮರುಡಾಂಬರೀಕರಣಕ್ಕೆ .10 ಕೋಟಿ ಹಾಗೂ ಗದಗ ಹೊನ್ನಾಳಿಯ ವರೆಗಿನ ರಸ್ತೆ ಕಾಮಗಾರಿಗೆ .805 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಶೀಘ್ರದಲ್ಲಿಯೇ ಎಲ್ಲ ಕಾಮಗಾರಿಗಳು ಪ್ರಾರಂಭಗೊಳ್ಳಲಿವೆ. ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿಯೇ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಪಾಟೀಲ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು

ಗದಗ- ಲಕ್ಷ್ಮೇ​ಶ್ವರ ರಸ್ತೆ ಸುಧಾ​ರಣೆಗೆ ಅಂದಾಜು .10 ಕೋಟಿ ಅನು​ದಾನ ಬಿಡು​ಗ​ಡೆ ಮಾಡು​ವು​ದಾ​ಗಿ ಲೋಕೋ​ಪ​ಯೋಗಿ ಸಚಿವ ಸಿ.ಸಿ. ​ಪಾ​ಟೀಲ ಇದೇ ವೇಳೆ ಭರ​ವಸೆ ನೀಡಿ​ದ​ರು.

ಈ ಸಂದ​ರ್ಭ​ದ​ಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್‌.ವಿ. ಸಂಕನೂರ, ಎಂಸಿಎದ ಅಧ್ಯಕ್ಷ ಎಂ.ಎಸ್‌. ಕರಿಗೌಡ್ರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಸಭೆ ಸದಸ್ಯರು, ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್‌ ಎಂಜನೀಯರ್‌ ವಿ.ಎನ್‌. ಪಾಟೀಲ, ಅಸಿಸ್ಟಂಟ್‌ ಎಕ್ಸಿಕ್ಯೂಟಿವ್‌ ಎಂಜನೀಯರ್‌ ರಾಘವೇಂದ್ರ, ಅಸಿಸ್ಟಂಟ್‌ ಎಂಜನೀಯರ್‌ ಬಸವರಾಜ ಮುಂದಿನಮನಿ, ನಗರಸಭೆ ಸದಸ್ಯರು ಸೇರಿದಂತೆ ಗಣ್ಯರು, ಮತ್ತಿತರರು ಇದ್ದರು.

ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌- ಜೆಡಿಎಸ್‌ಗೆ ಕಸಿವಿಸಿ

ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ ಜೆಡಿಎಸ್‌ಗೆ ಕಸಿವಿಸಿಯಾಗಿದೆ. ನಮಗೆ ಮಾಡಲು ಆಗದೇ ಇರುವುದನ್ನು ಬಿಜೆಪಿ ಮಾಡಿದೆ ಎಂದು ಈಗ ಮಾತನಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಹೇಳಿದರು. ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಶನಿವಾರ ರಾತ್ರಿ ಆಯೋಜಿಸಲಾಗಿದ್ದ ಪರಿಶಿಷ್ಟಪಂಗಡಗಳ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಸ್ವಂತ ನೀರು ತಂದು ಜಳಕ (ಸ್ನಾನ) ಮಾಡಬೇಕು, ಬೇರೆಯವರು ಸ್ನಾನ ಮಾಡುವಾಗ ಅವರ ಕೆಳಗೆ ಕೂತು ಸ್ನಾನ ಮಾಡಬಾರದು. ಮೀಸಲಾತಿ ಮಾಡಿದ್ದು ಬಿಜೆಪಿ, ಮೀಸಲಾತಿ ಮಾಡಿದ್ದು ಬಿಎಸ್‌ವೈ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದಕ್ಕೆ ಬೆನ್ನೆಲುಬಾಗಿ ನಿಂತಿದ್ದು ಶ್ರೀರಾಮುಲು ಹಾಗೂ ಸಚಿವ ಸಂಪುಟದ ಎಲ್ಲ ಸದಸ್ಯರು, ಇದು ಐತಿಹಾಸಿಕ ನಿರ್ಣಯವಾಗಿದೆ. ಆದರೆ, ಇಂದು ಮೀಸಲಾತಿ ಕೀರ್ತಿಗಾಗಿ ಕಾಂಗ್ರೆಸ್‌, ಜೆಡಿಎಸ್‌ ಗುದ್ದಾಡುತ್ತಿವೆ. ಕೀರ್ತಿ ಬೇಕಾದರೆ, ನಿಮ್ಮ ಸರ್ಕಾರ ಇದ್ದಾಗ ನಿವ್ಯಾಕ ನಿರ್ಧಾರ ತೆಗೆದುಕೊಳ್ಳಲಿಲ್ಲ? ನಾವು ನಿರ್ಧಾರ ತೆಗೆದುಕೊಂಡಾಗ ಅದರ ಲಾಭ ಪಡಿಬೇಡಿ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ.

ಎಸ್‌.ಸಿ, ಎಸ್‌.ಟಿ ಜನಾಂಗದವರು ಮುಗ್ಧರು ಇರಬಹುದು. ಆದರೆ ಹುಚ್ಚರು, ಬುದ್ಧಿಗೇಡಿಗಳಲ್ಲ ಎಂಬುದು ನೆನಪಿರಲಿ ನಿಮಗೆ. ಹಿಂದುಳಿದ ವರ್ಗದ ಜನರನ್ನು ತಮ್ಮ ಮತ ಬ್ಯಾಂಕ್‌ ಮಾಡಿಕೊಂಡು ಆಸೆ- ಆಮಿಷಗಳನ್ನು ತೋರಿಸುತ್ತಾ ಚುನಾವಣೆಯಲ್ಲಿ ಮತ ಹಾಕಿಸಿಕೊಂಡು ಆ ಸಮುದಾಯಕ್ಕೆ ಯಾವೊಂದು ಕೆಲಸವನ್ನು ಮಾಡಲಿಲ್ಲ ಎನ್ನುವುದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಮುಂಬರುವ ಚುನಾವಣೆಯಲ್ಲಿ ಮತದಾನದ ಮೂಲಕ ಉತ್ತರಿಸುತ್ತಾರೆ ಎಂದರು.

ಕಾಂಗ್ರೆಸ್‌ ಮುಖಂಡ ಎಚ್‌.ಕೆ.ಪಾಟೀಲ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು

ಅಧ್ಯಕ್ಷತೆ ವಹಿಸಿದ್ದ ಸಚಿವ ಶ್ರೀರಾಮುಲು ಮಾತನಾಡಿ, ಮೀಸಲಾತಿ ಕುರಿತು ಸರ್ಕಾರದ ನಿರ್ಧಾರದ ಕುರಿತು ವಿವರಿಸಿದರು. ರೋಣ ಶಾಸಕ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್‌.ವಿ. ಸಂಕನೂರ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಎಂಸಿಎ ಅಧ್ಯಕ್ಷ ಎಂ.ಎಸ್‌. ಕರಿಗೌಡ್ರ, ಪ್ರಶಾಂತ ನಾಯ್ಕರ ಸೇರಿದಂತೆ ಜಿಲ್ಲೆಯ ಎಸ್ಟಿವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕಾರ್ಯಕರ್ತರು ಹಾಜರಿದ್ದರು.