ಚಾಮರಾಜನಗರ(ಫೆ.29): ಹನೂರು-ಕೊಳ್ಳೇಗಾಲ ಸರ್ಕಾರಿ ಸಾರಿಗೆ ಬಸ್‌ಗಳ ದರದಲ್ಲಿ ಅವೈಜ್ಞಾನಿಕವಾಗಿ ದರ ನಿಗದಿ ಮಾಡಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ಬಸ್‌ಗಳ ಟಿಕೆಟ್ ದರವನ್ನು ಸರ್ಕಾರ ಮಂಗಳವಾರ ಮಧ್ಯ ರಾತ್ರಿಯಿಂದಲೇ ಶೇಕಡ 12ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ.ರಾ.ನಿ.ಸ.ನಿ ವಿಭಾಗದಿಂದ ಸಂಚಾರಿಸುವ ಸಾರಿಗೆ ಬಸ್‌ಗಳಲ್ಲಿ ಅವೈಜ್ಞಾನಿಕವಾಗಿ ನಿಗದಿ ಮಾಡಿರುವ ದರಕ್ಕಿಂತ ದುಪ್ಪಟ್ಟು ಪ್ರಯಾಣಿಕರಿಂದ ಪಡೆಯಲಾಗುತ್ತಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

KSRTC ದುಬಾರಿ: ಮಂಗಳೂರಿಂದ ಎಲ್ಲೆಲ್ಲಿಗೆ, ಎಷ್ಟೆಷ್ಟು ದರ..?

ಕೊಳ್ಳೇಗಾಲ ಪಟ್ಟಣದಿಂದ ಹನೂರು ಪಟ್ಟಣಕ್ಕೆ ಬರಲು ಅಜ್ಜೀಪುರ ಗ್ರಾಮದ ಮುರುಡೇಶ್ವರ ಸ್ವಾಮಿ, ಹನೂರು ವೀರಶೈವ ಮಹಾಸಭಾ ನಿರ್ದೇಶಕರಾದ ಜಗದೀಶ್, ಆನಾಪುರ ಉಮೇಶ್, ಉದ್ದನೂರು ಪ್ರಸಾದ್ ಸಾರಿಗೆ ವಾಹನದಲ್ಲಿ ಕೊಳ್ಳೇಗಾಲದಿಂದ ಹನೂರು ಪಟ್ಟಣಕ್ಕ ಟಿಕೆಟ್ ಪಡೆದಿದ್ದಾರೆ.

ಖಡಕ್ ಅಧಿಕಾರಿ ಇಶಾ ಪಂತ್ ವರ್ಗಾವಣೆ ರದ್ದು

ಸಾರಿಗೆ ನಿಯಮದಂತೆ ಇಂದಿನ ದರ 26 ರು. ಹೊಸ ದರ 34 ರಿಂದ 30 ರು.ಗಳು ಏರಿಕೆಯಾಗಬೇಕಾಗಿದೆ. ಆದರೆ ಕೊಳ್ಳೇಗಾಲ ಸಾರಿಗೆ ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಶೇಕಡ 24ರಷ್ಟು 24ರ ಬದಲು 34 ರು. ಟಿಕೆಟ್ ನೀಡಿ ಪ್ರಯಾಣಿಕರಿಗೆ ಸಾರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕ್ರಮಕ್ಕೆ ಒತ್ತಾಯ:

ಕರ್ನಾಟಕ ರಾಜ್ಯ ಸಾರಿಗೆ ವರ್ಷದಿಂದ ವರ್ಷಕ್ಕೆ ಪ್ರಯಾಣಿಕರ ದರ ಏರಿಕೆ ಮಾಡೋತ್ತಲೇ ಇದೆ. ಆದರೆ  ಮಂಗಳವಾರ ಮಧ್ಯರಾತ್ರಿ ಸಾರಿಗೆ ವಾಹನ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಶೇಕಡ 12ರಷ್ಟು ಸಾರಿಗೆ ದರ ಪಡೆಯುವ ಬದಲು ಹೆಚ್ಚು ವರಿಯಾಗಿ ಶೇಕಡ 24ರಷ್ಟು ಟಿಕೆಟ್ ದರ ಏರಿಕೆ ಮಾಡಿರುವುದು ಅವೈಜ್ಞಾನಿಕವಾಗಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕೂಡ ಲೇ ಗಮನಹರಿಸಿ ಪ್ರಯಾಣಿಕರಿಗೆ ಆಗುತ್ತಿರುವ  ತೊಂದರೆಯಾಗುತ್ತಿದ್ದು, ಇದರ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.