Asianet Suvarna News

'ಡ್ರಗ್ಸ್‌ ದಂಧೆಯಲ್ಲಿರುವ ರಾಜಕಾರಣಿಗಳ ಪಟ್ಟಿ ಕೊಡ್ತೀ​ನಿ'

ನನ್ನ ಬಳಿ ಡ್ರಗ್ಸ್ ದಂಧೆಯಲ್ಲಿರುವ ರಾಜಕಾರಣಿಗಳ ಪಟ್ಟಿಯೇ ಇದೆ. ಇದನ್ನು ನಾನು ಸಚಿವರಿಗೆ ಕೊಡುತ್ತೇನೆ ಹೀಗೆಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

32 Politicians Involved in Drug Mafia Says Pramod Muthalik
Author
Bengaluru, First Published Sep 11, 2020, 10:21 AM IST
  • Facebook
  • Twitter
  • Whatsapp

ಮೈಸೂರು (ಸೆ.11): ಡ್ರಗ್ಸ್‌ ದಂಧೆಯಲ್ಲಿ ಎಲ್ಲಾ ಪಕ್ಷದ ರಾಜಕಾರಣಿಗಳು ಶಾಮೀಲಾಗಿದ್ದು, ನನ್ನ ಬಳಿ ಸುಮಾರು 32 ರಾಜಕಾರಣಿಗಳ ಪಟ್ಟಿಯನ್ನು ನಾಳೆ ಬೆಂಗಳೂರಿನಲ್ಲಿ ಗೃಹ ಸಚಿವರಿಗೆ ನೀಡುತ್ತೇನೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ.

ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ನ ಅನೇಕ ರಾಜಕಾರಣಿಗಳು, ಪಬ್‌, ಬಾರ್‌ ಮಾಲಿಕರು ಇದ್ದಾರೆ. ಅವರೆಲ್ಲರೂ ಗಾಂಜಾ ವ್ಯವಹಾರದಲ್ಲಿ ತೊಡಗಿದ್ದು, ನನ್ನ ಬಳಿ ಇರುವ 32 ರಾಜಕಾರಣಿಗಳ ಹೆಸರುಗಳನ್ನು ಗೃಹ ಸಚಿವರನ್ನು ಭೇಟಿ ಮಾಡಿ ನೀಡುತ್ತೇನೆ ಎಂದಿದ್ದಾರೆ.

'ಸಂಜನಾ, ರಾಗಿಣಿ ಇವ್ರು ನಟಿಯರಾ? ರಾಗಿಣಿಯನ್ನು ಒದ್ದು ಓಳಗೆ ಹಾಕಿ' ... Read more at: https://kannada.asianetnews.com/video/crime/pramod-mutalik-on-drug-mafia-qg4tmx

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಡ್ರಗ್ಸ್‌ ದಂಧೆಯ ಮೂಲ ರೂವಾರಿ. ಗುಜರಾತ್‌, ಗೋವಾ, ಪಂಜಾಬ್‌ ಮೂಲಕ ಡ್ರಗ್ಸ್‌ ದೇಶವನ್ನು ಪ್ರವೇಶಿಸುತ್ತಿದೆ ಎಂದು ದೂರಿದ್ದಾರೆ.

ಈ ಹಿಂದೆಯೂ ಕೂಡ ಡ್ರಗ್ಸ್ ದಂಧೆ ವಿರುದ್ಧ ಕೆಂಡ ಕಾರಿದ್ದ ಪ್ರಮೋದ್ ಮುತಾಲಿಕ್ ಇದೀಗ ಮತ್ತೊಂದ ಬಾಂಬ್ ಸಿಡಿಸಿದ್ದಾರೆ. ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೂ ಡ್ರಗ್ಸ್‌ಗೂ ಸಂಬಂಧ ಇರುವುದಾಗಿಯೂ ಮುತಾಲಿಕ್ ಹೇಳಿದ್ದರು. ಇದೀಗ ಮತ್ತೊಮ್ಮೆ ಈ ವಿಚಾರ ಪ್ರಸ್ತಾಪಿಸಿದ್ದಾರೆ.

Follow Us:
Download App:
  • android
  • ios