Asianet Suvarna News Asianet Suvarna News

ಅದಮ್ಯ ಚೇತನ ಸಂಸ್ಥೆಯಿಂದ 301ನೇ ಹಸಿರು ಭಾನುವಾರ ಆಚರಣೆ

  • ಅದಮ್ಯ ಚೇತನ ಸಂಸ್ಥೆ ವತಿಯಿಂದ ಭವಾನಿ ಕೆರೆ ಅಂಗಳದಲ್ಲಿ 1200 ಸಸಿ ನೆಡುವ ಮೂಲಕ  301ನೇ ಹಸಿರು ಭಾನುವಾರ ಆಚರಣೆ 
  • ತೇಜಸ್ವಿನಿ ಅನಂತ ಕುಮಾರ್ ಮತ್ತು ಐಶ್ವರ್ಯ ಅನಂತ್ ಕುಮಾರ್ ರವರ ನೇತೃತ್ವದಲ್ಲಿ  ಕಾರ್ಯಕ್ರಮ 
301 Green sunday programme organised by adamya chethana snr
Author
Bengaluru, First Published Oct 3, 2021, 3:20 PM IST

 ಬನ್ನೇರುಘಟ್ಟ (ಅ.03): ಅದಮ್ಯ ಚೇತನ ಸಂಸ್ಥೆ ( Adamya Chetana)ವತಿಯಿಂದ ಭವಾನಿ ಕೆರೆ ಅಂಗಳದಲ್ಲಿ 1200 ಸಸಿ ನೆಡುವ ಮೂಲಕ  301ನೇ ಹಸಿರು ಭಾನುವಾರ ಆಚರಣೆ ಮಾಡಲಾಯಿತು. 

ತೇಜಸ್ವಿನಿ ಅನಂತ ಕುಮಾರ್ (Tejashwini ananth Kumar) ಮತ್ತು ಐಶ್ವರ್ಯ ಅನಂತ್ ಕುಮಾರ್ ರವರ ನೇತೃತ್ವದಲ್ಲಿ  ಕಾರ್ಯಕ್ರಮ ಆಯೋಜನೆಗೊಂಡಿದ್ದು, ಕಳೆದ ಆರು ವರ್ಷಗಳಿಂದ ತಿಂಗಳ‌ ಒಂದು ಭಾನುವಾರ   ಹಸಿರು ಭಾನುವಾರ ಆಚರಣೆ ಮಾಡಲಾಗುತ್ತಿದೆ. ಇದೀಗ 301  ನೇ ವಾರಕ್ಕೆ ಹಸಿರು ಭಾನುವಾರ ಕಾರ್ಯಕ್ರಮ ತಲುಪಿದೆ. 

ಪೌಷ್ಟಿಕ ಆಹಾರ ಎಲ್ಲರಿಗೂ ಲಭಿಸಲು ಸರ್ಕಾರ ಕಾರ್ಯ ಪ್ರವೃತ್ತವಾಗಲಿ : ತೇಜಸ್ವಿನಿ ಅನಂತಕುಮಾರ್‌

ಅಮೃನಗರದಲ್ಲಿರುವ (AmruthNagar) ಭವಾನಿ ಮಾನೆ ಕೆರೆ ಅಂಗಳದಲ್ಲಿ 1,200 ಸಸಿಗಳನ್ನು ನೆಡಲಾಗಿದ್ದು, ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು (Students) ಭಾಗಿಯಾಗಿದ್ದರು.  ಹಸಿರು ಭಾನುವಾರ ವಿಶೇಷ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ 400 ಕ್ಕೂ ಹೆಚ್ಚು ಇಂಜೀನಿಯರಿಂಗ್ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

 

ಹಸಿರು ಭಾನುವಾರ ಕಾರ್ಯದಲ್ಲಿ 301 ಜಾತಿಯ ವಿವಿಧ 1200 ಗಿಡಗಳನ್ನು ಭವಾನಿ ಕೆರೆ ಅಂಗಳದಲ್ಲಿ ನೆಡಲಾಯಿತು. ಪ್ರತಿಯೊಬ್ಬ ವ್ಯಕ್ತಿಗೂ ವರ್ಷಕ್ಕೆ ಕನಿಷ್ಠ 700 ಕೆಜಿ ಆಕ್ಸಿಜನ್ ಅವಶ್ಯಕತೆ ಇರುತ್ತದೆ.  ಈ ನಿಟ್ಟಿನಲ್ಲಿ ಹಸಿರು ಭಾನುವಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ರೀತಿ ಗಿಡ ನೆಡುವ ಕಾರ್ಯಕ್ರಮದಿಂದ ಸಾಕಷ್ಟು ಆಮ್ಲಜನಕ ಉತ್ಪಾದನೆ ಸಾಧ್ಯ, ಮರಗಳ ಸಂಖ್ಯೆಯು ವೃದ್ದಿಯಾಗಲಿದೆ. 

 

ಅದಮ್ಯ ಚೇತನ ಹುಟ್ಟಿದ್ದು ಹೇಗೆ..?

ಸರಿಯಾಗಿ ಎರಡು ವರ್ಷದ ಹಿಂದೆ 2018ರಲ್ಲಿ ನಾವು ಒಂದು ಕುಟುಂಬವಾಗಿ ಅತ್ಯಂತ ಸಂಕಷ್ಟದ ಕ್ಷಣಗಳನ್ನು ದೂರದ ನ್ಯೂಯಾರ್ಕ್ನಲ್ಲಿ ಎದುರಿಸುತ್ತಿದ್ದೆವು. ಬೆಂಗಳೂರು, ದಿಲ್ಲಿಯಲ್ಲಿ ಕಾಯಿಲೆ ವಾಸಿ ಆಗದೆ ಇದ್ದಾಗ ಅಮೆರಿಕಕ್ಕೆ ಅನಂತಕುಮಾರ್‌ರನ್ನು ಕರೆದುಕೊಂಡು ಹೋಗಿದ್ದ ನಾನು ಮತ್ತು ನನ್ನ ಮೈದುನ ನಂದಕುಮಾರ್‌ ದುಗುಡದಲ್ಲಿದ್ದೆವು.

ಅವತ್ತು ಹುಟ್ಟಿದ ಹಬ್ಬದ ದಿನವೇ ಮೆಮೋರಿಯಲ್‌ ಸ್ಲೋನ್‌ ಕೆಟರಿಂಗ್‌ನ ವೈದ್ಯರು ಅನಂತಕುಮಾರ್‌ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ನಾವು ಹೊಸದೊಂದು ಮದ್ದು ಶುರು ಮಾಡೋಣ ಎಂದು ಹೇಳಿದಾಗ ಇವರು ಕೂಡ ಉತ್ಸಾಹಿತರಾಗಿದ್ದರು. ಮೈದುನನ ಮಗ ಹತ್ತಿರದಲ್ಲೇ ಹೋಗಿ ಕೇಕ್‌ ತೆಗೆದುಕೊಂಡು ಬಂದ. ಒಂದೆರಡು ಬಲೂನ್‌ ಕಟ್ಟಿಅಲ್ಲೇ ಹುಟ್ಟಿದ ಹಬ್ಬ ಆಚರಿಸಿದೆವು. ಅವುಗಳೇ ಅವರೊಟ್ಟಿಗಿನ ನಮ್ಮ ಕೊನೆಯ ಸಂಭ್ರಮದ ಕ್ಷಣಗಳು. ಹುಟ್ಟಿದ ಹಬ್ಬ ಆಚರಿಸಿದ ಫೋಟೋಗಳನ್ನು ಬೆಂಗಳೂರಿನಲ್ಲಿದ್ದ ಇಬ್ಬರು ಮಕ್ಕಳಿಗೆ ಕಳಿಸಿ ಅವತ್ತು ತುಂಬಾ ದಿನಗಳ ನಂತರ ನಕ್ಕು ಮಾತನಾಡುತ್ತಿದ್ದರು.

ಹಸಿರಿನ ಬಗ್ಗೆ ಅನಂತ ಪ್ರೀತಿ

ವಿದ್ಯಾರ್ಥಿ ಪರಿಷತ್ತಿನ ಕಾಲದಿಂದಲೂ ಅನಂತಕುಮಾರ್‌ ಆಗಿನ ಕಾಲಕ್ಕೆ ಹೊಸದು ಎನ್ನಬಹುದಾಗಿದ್ದ ವಿಷಯಗಳ ಬಗ್ಗೆ ಆಗ್ರಹ ಪೂರ್ವಕವಾಗಿ ಮಾತನಾಡುತ್ತಿದ್ದರು. 2006ರಿಂದಲೇ ಸಸ್ಯಾಗ್ರಹದ ಬಗ್ಗೆ ಮಾತನಾಡಲು ಶುರುಮಾಡಿದ್ದರು. ನಿಜಕ್ಕೂ ಬೆಂಗಳೂರು ಹಳೆಯ ಹಸಿರಿನ ವೈಭವಕ್ಕೆ ಮರಳಬೇಕಾದರೆ ಒಬ್ಬ ಮನುಷ್ಯನಿಗೆ ಸರಾಸರಿ ಒಂದು ಗಿಡ ಇರಲೇಬೇಕು ಎಂದು ಒತ್ತು ಕೊಟ್ಟು ಹೇಳುತ್ತಿದ್ದರು. ‘ಇವತ್ತು 7 ಜನರಿಗೆ ಒಂದು ಗಿಡ ಇದೆ. ಅದು ನಮ್ಮ ಜೀವಮಾನದಲ್ಲೇ 1:1 ಆದರೆ ಖುಷಿಯ ವಿಚಾರ. ಅದಕ್ಕೆ ನಾವೆಲ್ಲರೂ ಹಸಿರು ಸೇನಾನಿ ಆಗಬೇಕು’ ಎನ್ನುತ್ತಿದ್ದರು. ನಮ್ಮ ಬೆಂಗಳೂರಿಗೆ ಪೆಟ್ರೋಲ್‌ ಡೀಸೆಲ್‌ ಕುಡಿಯುವ ಐಷಾರಾಮಿ ಬಿಎಂಡಬ್ಲು ಬೇಡ. ಬೆಂಗಳೂರಿಗೆ ಬೈಸಿಕಲ್‌, ಮೆಟ್ರೋ ಮತ್ತು ವಾಕಿಂಗ್‌ನ ಬಿಎಂಡಬ್ಲು ಬೇಕೆಂದು ಮನೆಯಲ್ಲಿ ಕೂಡ ಮಕ್ಕಳಿಗೆ ಒತ್ತಿ ಹೇಳುತ್ತಿದ್ದರು.

2015ರಲ್ಲಿ ಬಸವನಗುಡಿಯಲ್ಲಿ ಅನಂತ್‌ ಹುಟ್ಟಿದ ದಿನ ಹಚ್ಚಿದ್ದ 57 ಸಸಿಗಳು ಇವತ್ತು ‘ಅನಂತ ವನ’ದಲ್ಲಿ ದೊಡ್ಡದಾಗಿ ಬೆಳೆಯುತ್ತಿವೆ. ರವಿವಾರ ಬೆಂಗಳೂರಿನಲ್ಲಿದ್ದರೆ ಗಿಡ ನೆಡುವ ಕಾರ್ಯಕ್ರಮಕ್ಕೆ ತಪ್ಪದೆ ಬರುತ್ತಿದ್ದರು. ಇವತ್ತಿಗೂ ನಾವೆಲ್ಲ ಅದಮ್ಯ ಚೇತನದ ಕಾರ್ಯಕರ್ತರು ರವಿವಾರ ಗಿಡ ನೆಡಲು ಅನಂತ್‌ರ ಹಸಿರು ಪ್ರೀತಿಯೇ ಪ್ರೇರಣೆ. ನಮ್ಮ ದೊಡ್ಡ ಮಗಳು ಐಶ್ವರ್ಯಾಳ ಮದುವೆಯನ್ನು ಪ್ಲಾಸ್ಟಿಕ್‌ಮುಕ್ತ, ಕಸಮುಕ್ತ ಸಮಾರಂಭವಾಗಿ ರೂಪಿಸಿದ್ದೆವು. ಅಂದರೆ ಆಮಂತ್ರಣ ಪತ್ರಿಕೆಯಿಂದ ಹಿಡಿದು ನೀರಿನ ಬಟ್ಟಲು ಕೂಡ ಪ್ಲಾಸ್ಟಿಕ್‌ರಹಿತವಾಗಿ ಬಳಸಲು ನಾವಿಬ್ಬರೂ ಯೋಜನೆ ರೂಪಿಸಿದ್ದೆವು. ಸಕ್ರಿಯ ರಾಜಕಾರಣಿ ಆಗಿಯೂ ಕೂಡ ಹಸಿರಿನ ಬಗ್ಗೆ ಅವರಿಗೆ ಬದ್ಧತೆ ಇತ್ತು.

ಪುರುಷರ ಪ್ರಾಬಲ್ಯ ಮೆಟ್ಟ ಸಾಧಕಿಯರ ಮೇರು ಸಾಧನೆ..!

ಅದಮ್ಯ ಚೇತನ ಅವರದೇ ಕನಸು

ಹಸಿರಿನ ಜೊತೆಗೆ ಹಸಿದವನಿಗೆ ಅನ್ನ ನೀರು ನೀಡುವುದು ಅನಂತಕುಮಾರ್‌ ಪ್ರಾತಿನಿಧ್ಯದ ವಿಷಯವಾಗಿತ್ತು. ನಮ್ಮ ಮದುವೆಗಿಂತ ಮೊದಲು ಕೂಡ ಅವರ ತಾಯಿ ಗಿರಿಜಾ ಶಾಸ್ತಿ್ರ ಯಾರೇ ಕಾರ್ಯಕರ್ತರು ಮನೆಗೆ ಬಂದರೂ ಮೊದಲು ತಿಂಡಿ, ಊಟ ಕೊಡುವುದನ್ನು ಅಭ್ಯಾಸ ಮಾಡಿದ್ದರು. ನಮ್ಮ ಹುಬ್ಬಳ್ಳಿ, ಬೆಂಗಳೂರು, ದಿಲ್ಲಿ ಯಾವುದೇ ಮನೆಯಲ್ಲೂ ಮನೆಗೆ ಬಂದರೆ ಮೊದಲು ಆಹಾರ, ನಂತರ ಕೆಲಸದ ಚರ್ಚೆ. ನನ್ನ ಮದುವೆಯಾದ ಹೊಸತರಲ್ಲಿ ಜಯಮಹಲ್‌ನ ಎಸ್‌.ಮಲ್ಲಿಕಾರ್ಜುನಯ್ಯ ಅವರಿಗೆ ನೀಡಿದ್ದ ಸರ್ಕಾರಿ ನಿವಾಸದಲ್ಲಿ ಕೆಳಗೆ ನಾವು, ಮೇಲಿನ ಕೋಣೆಯಲ್ಲಿ ಯಡಿಯೂರಪ್ಪ ಇರುತ್ತಿದ್ದರು. ಹುಬ್ಬಳ್ಳಿ ಮೂಲದವಳಾದ ನಾನು ರಾಗಿ ಮುದ್ದೆ, ಸೊಪ್ಪು ಸಾರು ಮಾಡಲು ಕಲಿತಿದ್ದು ಯಡಿಯೂರಪ್ಪನವರು ಊಟಕ್ಕೆ ಬರುತ್ತಾರೆ ಎಂದು.

Follow Us:
Download App:
  • android
  • ios