ತುಮಕೂರು: ಆಪರೇಷನ್ ಮಾಡೋವಾಗ ಮಹಿಳೆ ಸಾವು, ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ
ಆಪರೇಷನ್ ಮಾಡುವಾಗ ಮಾನಸ ಸಾವನ್ನಪ್ಪಿದ್ದಾರೆ. ಮಾನಸ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪತಿ ಹಾಗೂ ಕುಟುಂಬಸ್ಥರು ಆರೋಪಿಸಿ ಆಕ್ರೋಶವನ್ನ ಹೊರಹಾಕಿದ್ದಾರೆ
ತುಮಕೂರು(ಸೆ.03): ಆಪರೇಷನ್ ಮಾಡುವಾಗ ಸಾವು ಮಹಿಳೆಯೊಬ್ಬರು ಮೃತಪಟ್ಟ ಘಟನೆ ತುಮಕೂರು ನಗರದ ಚಿನ್ಮಯಿ ನರ್ಸಿಂಗ್ ಹೋಮ್‌ನಲ್ಲಿ ನಡೆದಿದೆ. ಮಾನಸ(30) ಎಂಬಾಕೆಯೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಗರ್ಭಕೋಶದಲ್ಲಿ ಮೂರು ಗ್ರಾಂ ಗಡ್ಡೆಯಿದೆ ಆಪರೇಷನ್ ಮಾಡಬೇಕೆಂದು ವೈದ್ಯರು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡಿದ್ದರು. ಮೃತ ಮಾನಸ ಮಕ್ಕಳಾಗಿಲ್ಲವೆಂದು ಒಂದೂವರೆ ತಿಂಗಳಿನಿಂದ ವೈದ್ಯರ ಬಳಿ ತೋರಿಸಿಕೊಳ್ಳುತ್ತಿದ್ದರು.
ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಮಾನಸ ಹಾಗೂ ಅರುಣ್ ಮದುವೆಯಾಗಿದ್ದರು. ಮೃತ ಮಾನಸ ತುಮಕೂರು ವಿವಿಯಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಜನರ ಹಣ ಜನರ ಹಿತಕ್ಕಾಗಿಯೇ ಉಪಯೋಗಿಸುವುದು ಎಲ್ಐಸಿ
ಮೊನ್ನೆ ಸಂಜೆ ಆಪರೇಷನ್ ಎಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಡರಾತ್ರಿ ಆಪರೇಷನ್ ಮಾಡುವಾಗ ಮಾನಸ ಸಾವನ್ನಪ್ಪಿದ್ದಾರೆ. ಮಾನಸ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪತಿ ಹಾಗೂ ಕುಟುಂಬಸ್ಥರು ಆರೋಪಿಸಿ ಆಕ್ರೋಶವನ್ನ ಹೊರಹಾಕಿದ್ದಾರೆ.
ಬೆಂಗಳೂರಿನ ಡಾ. ಶಶಿಕಲಾ ಆಪರೇಷನ್ ನಡೆಸಿದ್ದರು ಎನ್ನಲಾಗಿದೆ. ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಮೃತರ ಕುಟುಂಬಸ್ಥರು ದೂರು ನೀಡಿದ್ದಾರೆ. ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.