Asianet Suvarna News Asianet Suvarna News

ಬೆಂಗಳೂರು: ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಯುವಕ ಸಾವು

ಪೀಣ್ಯ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣಕ್ಕೆ ಬಿಎಂಟಿಸಿ ಬಸ್ ಚಾಲಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಪೊಲೀಸರು. 

30 Year Old Man Dies Road Accident in Bengaluru grg
Author
First Published Dec 13, 2022, 7:45 AM IST

ಬೆಂಗಳೂರು(ಡಿ.13):  ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಯುವಕನೋರ್ವ ಸಾವನ್ನಪ್ಪಿದ ಘಟನೆ ನಗರದ ಪೀಣ್ಯದ 14ನೇ ಕ್ರಾಸ್ ಬಳಿ ನಿನ್ನೆ(ಸೋಮವಾರ) ಸಂಜೆ ನಡೆದಿದೆ. ಮೃತ ಯುವಕನನ್ನ ದೀಪಕ್ (30) ಅಂತ ಗುರುತಿಸಲಾಗಿದೆ. ಓವರ್ ಟೇಕ್ ಮಾಡುವ ಬರದಲ್ಲಿ ಈ ಅವಘಡ ಸಂಭವಿಸಿದೆ ಅಂತ ತಿಳಿದು ಬಂದಿದೆ. 

ಬಿಎಂಟಿಸಿ ಬಸ್ ಎನ್.ಹೆಚ್‌-4ರ ಕಡೆಯಿಂದ ಕಾಮಾಕ್ಷಿಪಾಳ್ಯದ ಕಡೆ ತೆರಳುತಿತ್ತು,  ಈ ವೇಳೆ ದೀಪಕ್ ಎಡಭಾಗದಿಂದ ಓವರ್ ಟೇಕ್ ಮಾಡಲ ಯತ್ನಿಸಿದ್ದನು. ಈ ವೇಳೆ ಹಿಂಬದಿಯ ಟೈರ್‌ಗೆ ಸಿಲುಕಿ ದೀಪಕ್ ಮೃತಪಟ್ಟಿದ್ದಾನೆ. 

ಸ್ನೇಹಿತನ ಪೋಸ್ಟ್‌ಮಾರ್ಟಮ್‌ ನಾನೇ ಮಾಡೋದು ಬಂತ್ರಿ: ಕಣ್ಣೀರಿಟ್ಟ ಜೇವರ್ಗಿ ಸಿಪಿಐ

ಬೈಕ್ ಚಲಾಯಿಸುವ ವೇಳೆ ದೀಪಕ್ ಹೆಲ್ಮೆಟ್ ಧರಿಸಿರಲಿಲ್ಲ ಅಂತ ತಿಳಿದು ಬಂದಿದೆ. ಈ ಸಂಬಂಧ ಪೀಣ್ಯ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಬಿಎಂಟಿಸಿ ಬಸ್ ಚಾಲಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಪೊಲೀಸರು. 
 

Follow Us:
Download App:
  • android
  • ios