ಕೋಲಾರ(ಫೆ.06): ಮುಂದಿನ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ೩೦ ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕ ಮಾಡಿಕೊಂಡು ಶಿಕ್ಷಕರ ಕೊರತೆಯನ್ನು ನೀಗಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಕಾಲ ಹಾಗೂ ಕಾರ್ಮಿಕ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಕೋಲಾರ ತಾಲೂಕಿನ ಕೆಂಬೋಡಿ, ವಡಗೂರು ಹಾಗೂ ಕಾಳಹಸ್ತಿ ಗ್ರಾಮಗಳ ಶಾಲೆಗಳಿಗೆ ಭೇಟಿ ನೀಡಿ ಅವರು ಮಾತನಾಡಿದ್ದಾರೆ. 30 ಸಾವಿರ ಶಿಕ್ಷಕರ ನೇಮಕಾತಿಗೆ ಆರ್ಥಿಕ ಇಲಾಖೆಯು ಅನುಮತಿ ನೀಡಿದೆ. ವರ್ಷಕ್ಕೆ 10 ಸಾವಿರದಂತೆ 3 ವರ್ಷಗಳಲ್ಲಿ ನೇಮಕ ಮಾಡಲಾಗುವುದು. ಅದೇ ರೀತಿ ಮುಂದಿನ 3 ವರ್ಷಗಳಲ್ಲಿ 26 ಸಾವಿರ ಶಿಕ್ಷಕರು ನಿವತ್ತಿ ಹೊಂದಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಿರಿಧಾನ್ಯದೂಟ ಇತರ ಶಾಲೆಗಳಿಗೂ ವಿಸ್ತರಣೆ:

ವಡಗೂರು ಶಾಲೆಯಲ್ಲಿ ಸಿರಿ ಧಾನ್ಯಗಳಿಂದ ತಯಾರಿಸಿದ ಬಿಸಿಯೂಟ ವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಈ ಶಾಲೆಯನ್ನು ಪೈಲೆಟ್ ಯೋಜನೆಯಲ್ಲಿ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಸಿರಿಧಾನ್ಯದ ಬಿಸಿಯೂಟವನ್ನು ಇತರೆ ಶಾಲೆಗಳಿಗೂ ವಿಸ್ತರಿಸಲಾಗುವುದು. ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯಕ್ಕೆ ಹೆಚ್ಚಿನ ಅನುಕೂಲವಿದೆ. ಇದರಿಂದ ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನಂತರ ಮಕ್ಕಳೊಂ ದಿಗೆ ಬಿಸಿಯೂಟವನ್ನು ಸವಿದರು.

 

ನಲಿ-ಕಲಿ ಶಿಕ್ಷಣ ವ್ಯವಸ್ಥೆಯು ಭಾರತ ದಲ್ಲೇ ಯಶಸ್ವಿಯಾದ ಕಾರ್ಯಕ್ರಮ ವಾಗಿದೆ. ಈ ನಲಿ-ಕಲಿ ಪದ್ದತಿಯನ್ನು ಎಸ್‌ಎಸ್‌ಎಲ್‌ಸಿ ಹಂತದವರೆಗೂ ವಿಸ್ತರಿಸಿದರೆ ಉತ್ತಮ ಎಂಬುದು ನನ್ನ ಅಭಿಪ್ರಾಯ ಎಂದರು. ಚಾಲಕ, ನಿರ್ವಾಹಕರ ವಿರುದ್ಧ ಆರೋಪ: ನಂತರ ಕೆಂಬೋಡಿ ಶಾಲೆಯ ಮಕ್ಕಳೊಂ ದಿಗೆ ಸಂವಾದ ನಡೆಸಿ, ದೂರದ ಊರು ಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳ ಸಮಸ್ಯೆಗಳ ಆಲಿಸಿದರು.

ಮುಂಜಾವ 3 ಗಂಟೆಗೇ ಮದುವೆ ಹೆಣ್ಣು ಎಸ್ಕೇಪ್, ನಷ್ಟ ಪರಿಹಾರ ಕೇಳಿದ ವರ

ಸಾರಿಗೆ ಬಸ್ ಗಳಲ್ಲಿ ವಿದ್ಯಾರ್ಥಿ ಪಾಸ್ ಇರುವ ವಿದ್ಯಾರ್ಥಿಗಳೊಂದಿಗೆ ಚಾಲಕ, ನಿರ್ವಾ ಹಕರು ಹೇಗೆ ವರ್ತಿಸುತ್ತಾರೆ ಎಂದು ಪ್ರಶ್ನಿಸಿ ದರು. ಇದಕ್ಕೆ ವಿದ್ಯಾರ್ಥಿಗಳು ಸಾರಿಗೆ ಬಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಹತ್ತಿಸಿ ಕೊಳ್ಳುವಲ್ಲಿ ತಾರತಮ್ಯ ಮಾಡು ತ್ತಾರೆ. ಬಸ್‌ಗಳಲ್ಲಿ ಖಾಲಿಯಿದ್ದರೂ ಹಿಂದೆ ಬಸ್ ಬರುತ್ತಿದೆ ಎಂದು ಕಾರಣ ಹೇಳಿ ಹತ್ತಿಸಿ ಕೊಳ್ಳುವುದಿಲ್ಲ ಎಂದರು. ಜಿಲ್ಲಾಧಿಕಾರಿಗೆ ಸೂಚನೆ: ಮಕ್ಕಳ ಗ್ರಾಮಸಭೆಗಳನ್ನು ನಡೆಸಿ ಈ ಸಭೆಗಳಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಮಕ್ಕಳ ಸಮಸ್ಯೆಗಳನ್ನು ಆಲಿಸಿ, ಸಂಬಂ ಧಿಸಿದ ಇಲಾಖೆಗಳಿಂದ ಬಗೆಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಜೆ. ಮಂಜುನಾಥ್, ಉಪನಿರ್ದೇಶಕರಾದ ರತ್ನಯ್ಯ ಉಪಸ್ಥಿತರಿದ್ದರು.