ಮಂಗಳೂರು(ಮೇ 20): ಕೊಡಗಿನ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಆಕೆಯ ಟ್ರಾವೆಲ್‌ ಹಿಸ್ಟರಿ ಅನುಸರಿಸಿ ಕೊಡಗು ಸಂಪಾಜೆ ಗೇಟ್‌ನಲ್ಲಿ ಕರ್ತವ್ಯದಲ್ಲಿದ್ದ 30 ಮಂದಿಗೆ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ.

ಮುಂಬೈಯಿಂದ ಮಂಗಳೂರಿಗೆ ಬಂದು ಕಾರು ಮೂಲಕ ಮಡಿಕೇರಿಗೆ ಹೋಗುವ ವೇಳೆ ಕೊಡಗು ಸಂಪಾಜೆ ಗೇಟ್‌ನಲ್ಲಿ ಆಕೆಯನ್ನು ತಪಾಸಣೆಗೊಳಪಡಿಸಿ, ನೇರವಾಗಿ ಮಡಿಕೇರಿಯ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

'ಕೊರೋನಾ ನೆಪ ಹೇಳಿ ಕೆಲಸದಿಂದ ತಪ್ಪಿಸಿಕೊಳ್ಳುವಂತಿಲ್ಲ'

ಈ ಕಾರಣದಿಂದ ಕೊಡಗು ಸಂಪಾಜೆ ಗೇಟ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಕೊಡಗು ಸಂಪಾಜೆ ಕಂದಾಯ ನಿರೀಕ್ಷಕ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳು, ಪೊಲೀಸರು ಸೇರಿ 30 ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ.