Asianet Suvarna News Asianet Suvarna News

30 ಜಿಲ್ಲೆಗೂ ಪಶು ಆ್ಯಂಬುಲೆನ್ಸ್‌ ವ್ಯವಸ್ಥೆ: ಚೌವ್ಹಾಣ್‌

15 ಜಿಲ್ಲೆಗಳಲ್ಲಿ ಸುಸಜ್ಜಿತ ಚಿಕಿತ್ಸೆ ನೀಡಲು ‘ಪಶು ಸಂಜೀವಿನಿ’ ವಾಹನ ಸೌಲಭ್ಯ ಕಲ್ಪಿಸಲಾಗಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಉಳಿದ ಜಿಲ್ಲೆಗಳಿಗೂ ‘ಪಶು ಸಂಜೀವಿನಿ’ ಚಿಕಿತ್ಸಾ ವಾಹನದ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಸಚಿವ ಪ್ರಭು ಚೌಹಾನ್ ಹೇಳಿದ್ದಾರೆ. 

30 districts Will Get Pashu sanjivini service minister Prabhu chavan snr
Author
Bengaluru, First Published Mar 11, 2021, 8:38 AM IST

ವಿಧಾನಪರಿಷತ್‌ (ಮಾ.11):  ಸಾಕು ಪ್ರಾಣಿಗಳ ಚಿಕಿತ್ಸೆಗಾಗಿ ಸದ್ಯ 15 ಜಿಲ್ಲೆಗಳಲ್ಲಿ ಸುಸಜ್ಜಿತ ಚಿಕಿತ್ಸೆ ನೀಡಲು ‘ಪಶು ಸಂಜೀವಿನಿ’ ವಾಹನ ಸೌಲಭ್ಯ ಕಲ್ಪಿಸಲಾಗಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದ ಉಳಿದ ಜಿಲ್ಲೆಗಳಿಗೂ ‘ಪಶು ಸಂಜೀವಿನಿ’ ಚಿಕಿತ್ಸಾ ವಾಹನದ ವ್ಯವಸ್ಥೆ ಮಾಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ.

ಬಿಜೆಪಿ ಭಾರತಿ ಶೆಟ್ಟಿಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಸ್ತ್ರ ಚಿಕಿತ್ಸೆ ಹಾಗೂ ವಿಶೇಷ ತುರ್ತು ಚಿಕಿತ್ಸೆ ಯನ್ನು ಸ್ಥಳೀಯ ಪಶು ವೈದ್ಯರು ನೀಡಲು ಕಷ್ಟವಾದ ಸಂದರ್ಭದಲ್ಲಿ ಜಿಲ್ಲಾಮಟ್ಟದ ತಜ್ಞರ ಮೂಲಕ ಪಶು ಸಂಜೀವಿನಿ ಸೇವೆ ನೀಡಲಾಗುವುದು. 15 ಜಿಲ್ಲೆಗಳ ಪಶು ಸಂಜೀವಿನಿ ವಾಹನಗಳ ಮೂಲಕ ಈವರೆಗೆ 340ಕ್ಕೂ ಹೆಚ್ಚು ಗ್ರಾಮಗಳ 750 ಪಶುಗಳಿಗೆ ತುರ್ತು ಚಿಕಿತ್ಸೆ ನೀಡಲಾಗಿದೆ ಎಂದರು.

ನನ್ನೆದುರೇ ಗೋಮಾಂಸ ತಿನ್ನಲಿ ನೋಡೋ​ಣ: ಸಿದ್ದರಾಮಯ್ಯಗೆ ಸವಾಲು

ಪಶು ವೈದ್ಯರ ನೇಮಕಕ್ಕೆ ಕ್ರಮ:  ರಾಜ್ಯದ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಸಾಕಷ್ಟುಹುದ್ದೆಗಳು ಖಾಲಿ ಇವೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ಇನ್ನು ಮುಂದೆ ರಾಜ್ಯದಲ್ಲಿ ಜಾನುವಾರು ಸಂಪತ್ತು ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಪಶು ವೈದ್ಯರ ನೇಮಕ ಮಾಡುವ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು, ಅಲ್ಲದೇ ಕಳೆದ ವರ್ಷ ಕೋವಿಡ್‌ ಕಾರಣ ಕೆಲವು ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ನಿರ್ಬಂಧಿಸಿದೆ. ಆದ್ದರಿಂದ ಈ ಬಗ್ಗೆ ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭು ಚೌವ್ಹಾಣ್‌ ವಿವರಿಸಿದರು.

ಬಿಜೆಪಿಯ ಶಶೀಲ್‌ ನಮೋಶಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಲ್ಯಾಣ ಕರ್ನಾಟ ಭಾಗದಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಸೇರಿಂದ 767 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಸಂಸ್ಥೆಗಳಲ್ಲಿ ಖಾಲಿ ಇರುವ 809 ಹುದ್ದೆಗಳ ಭರ್ತಿಗೆ ಸಹ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

Follow Us:
Download App:
  • android
  • ios