ಉತ್ತರಕನ್ನಡ: ಕ್ಯಾನ್ಸರ್ ರೋಗಿಗಳಿಗಾಗಿ ಕೇಶ ದಾನ, ಸಮಾಜಕ್ಕೆ ಮಾದರಿಯಾದ ಪುಟ್ಟ ಬಾಲೆ..!
ಕೇವಲ 3 ವರ್ಷ 7 ತಿಂಗಳು ಪ್ರಾಯದ ಈ ಪುಟ್ಟ ಅಪ್ಸರೆಯ ಹೆಸರು ಆದ್ಯಾ ಭಟ್. ತಂದೆ ಕಿರಣ್ ಭಟ್ ಹಾಗೂ ತಾಯಿ ಪ್ರಾರ್ಥನಾ ಭಟ್ ಅವರ ಮುದ್ದಿನ ಮಗಳಾಗಿರುವ ಆದ್ಯಾ ಭಟ್, ಭೈರುಂಬೆಯಲ್ಲಿ ಅಂಗನವಾಡಿಗೆ ಹೋಗುತ್ತಿರುವ ಈ ಬಾಲಕಿ, ಕ್ಯಾನ್ಸರ್ ಪೇಶೆಂಟ್ ಗಳಿಗಾಗಿ ತಾನು ಹುಟ್ಟಿದಾಗಿನಿಂದ ಬೆಳೆಸಿದ 12 ಇಂಚಿಗಿಂತ ಉದ್ದದ ಕೂದಲನ್ನು ದಾನ ಮಾಡಿದ್ದಾಳೆ.
ಉತ್ತರಕನ್ನಡ(ಅ.20): ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಭೈರುಂಬೆಯ ಸಣ್ಣ ಪೋರಿಯೋರ್ವಳು ಕ್ಯಾನ್ಸರ್ ರೋಗಿಗಳಿಗಾಗಿ ತನ್ನ ಉದ್ದದ ಕೇಶವನ್ನು ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ. ಕೇವಲ 3 ವರ್ಷ 7 ತಿಂಗಳು ಪ್ರಾಯದ ಈ ಪುಟ್ಟ ಅಪ್ಸರೆಯ ಹೆಸರು ಆದ್ಯಾ ಭಟ್. ತಂದೆ ಕಿರಣ್ ಭಟ್ ಹಾಗೂ ತಾಯಿ ಪ್ರಾರ್ಥನಾ ಭಟ್ ಅವರ ಮುದ್ದಿನ ಮಗಳಾಗಿರುವ ಆದ್ಯಾ ಭಟ್, ಭೈರುಂಬೆಯಲ್ಲಿ ಅಂಗನವಾಡಿಗೆ ಹೋಗುತ್ತಿರುವ ಈ ಬಾಲಕಿ, ಕ್ಯಾನ್ಸರ್ ಪೇಶೆಂಟ್ ಗಳಿಗಾಗಿ ತಾನು ಹುಟ್ಟಿದಾಗಿನಿಂದ ಬೆಳೆಸಿದ 12 ಇಂಚಿಗಿಂತ ಉದ್ದದ ಕೂದಲನ್ನು ದಾನ ಮಾಡಿದ್ದಾಳೆ.
ಹವ್ಯಕ ಬ್ರಾಹ್ಮಣರಲ್ಲಿ ಹೆಣ್ಣು ಮಕ್ಕಳ ಚವಳ ನಿಷಿದ್ಧ. ಹೆಣ್ಣಿನ ಕೂದಲನ್ನು ಹವ್ಯಕರು ತೆಗೆಸುವುದಿಲ್ಲ. ಆದರೆ, ಈ ಪುಟ್ಟು ಪೋರಿ ಮಾತ್ರ ತಾನು ಬೆಳೆಸಿದ ತನಗೆ ಇಷ್ಟವಾದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡಿದ್ದಾಳೆ. ಬರೀ ಕಟಿಂಗ್ ಮಾಡಿಸಲು ಹೋದರೆ ಸಾಕು ಮಕ್ಕಳು ಸಾಕಷ್ಟು ರಂಪಾಟ ಮಾಡುತ್ತಾರೆ. ತಲೆ ಮೇಲಿರುವ ಕೂದಲು ಹೋಯಿತು ಅಂತಾ ತುಂಬಾ ಬೇಜಾರು ಮಾಡಿಕೊಳ್ಳುತ್ತಾರೆ. ಅಂತದ್ರಲ್ಲಿ ಈ ಪುಟ್ಟ ಬಾಲಕಿ ಮಾತ್ರ ದಿಟ್ಟತನದಿಂದ ಕೇಶದಾನ ಮಾಡಿದ್ದಾಳೆ. ಕ್ಯಾನ್ಸರ್ ರೋಗಿಗಳಿಗಾಗಿ ಕೇಶದಾನಕ್ಕಾಗಿ ಕೂದಲು ತೆಗೆಯುವಾಗ ಈ ಬಾಲಕಿ ಮಾತ್ರ ಸಂತೋಷದಿಂದಲೇ ಅನುವು ಮಾಡಿಕೊಟ್ಟಿದ್ದಾಳೆ.
ಉತ್ತರಕನ್ನಡ: ಕಾರವಾರದ ಸೌಂದರ್ಯ ಕಿರೀಟಕ್ಕೆ ಟ್ಯುಪೋಲೆವ್ ಸೇರ್ಪಡೆ..!
ಈಕೆಯ ತಾಯಿ ಪ್ರಾರ್ಥನಾ ಅವರು ಕ್ಯಾನ್ಸರ್ ಪೇಶೆಂಟ್ ಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಕಿಮೋಥೆರಪಿ ನಂತರ ಕೂದಲು ಉದುರಿ ಖಾಲಿ ತಲೆಯಿಂದ ಹೆಂಗಸರು ಅನುಭವಿಸುವ ಮುಜುಗರ ಮತ್ತು ನೋವಿನ ಅರಿವಿದೆ. ಅಂತಹವರನ್ನು ಕಣ್ಣಾರೆ ನೋಡಿದ್ದೇವೆ. ಇನ್ನು ಸಣ್ಣ ಮಕ್ಕಳಂತೂ ಕ್ಯಾನ್ಸರ್ ಪೇಶೆಂಟ್‌ಗಳಾಗಿದ್ದರೆ ಉದುರುವ ಕೂದಲಿಗೆ ಭಯಬಿದ್ದು ಶಾಲೆ ಬಿಡುತ್ತಾರೆ. ಈ ಬಗ್ಗೆ ವಿಡಿಯೋಗಳನ್ನು ನೋಡಿದಾಗ ನನ್ನ ಮಗಳು ನಾನು ಅಂತಹ ಮಕ್ಕಳಿಗೆ ನನ್ನ ಕೂದಲನ್ನು ಕೊಡುತ್ತೇನೆ. ಅದನ್ನು ಅವರು ಉಪಯೋಗಿಸಿಕೊಳ್ಳಲಿ ಎಂದು ಹೇಳಿ ತಾನೇ ಒಪ್ಪಿದಳು. ಅದು ನಿಜಕ್ಕೂ ಆಶ್ಚರ್ಯಕರವಾಗಿತ್ತು. ಮಗುವನ್ನು ಸಣ್ಣದಿಂದಲೇ ಸಮಾಜ ಮುಖಿಯನ್ನಾಗಿಸಲು ಇದು ಸೂಕ್ತ ಸಮಯ ಎಂದು ನಾವು ಮಗುವಿನ ಕೇಶದಾನಕ್ಕೆ ಮುಂದಾದೆವು ಅನ್ನುತ್ತಾರೆ ಆದ್ಯಾ ಪೋಷಕರು.
ಆದ್ಯಾ ನೀಡಿದ ಕೂದಲಿನಿಂದ ಒಬ್ಬ ಮಹಿಳೆಗೆ ವಿಗ್ ಮಾಡಿಕೊಡಲಾಗುತ್ತಿದೆ. ಕೃತಕ ವಿಗ್ ಗಳಿಗೆ 20,000 ರೂ. ತಗಲುವುದರಿಂದ ಬಡವರಿಗೆ, ಬಡಮಕ್ಕಳಿಗೆ ಇದು ಕೈಗೆಟುಕಲಾರದ್ದು. ಹೀಗಾಗಿ ಈ ರೀತಿಯ ಕೇಶದಾನದಿಂದ ಜನರು ತುಂಬಾ ಅನುಕೂಲ ಪಡೆಯಲಿದ್ದಾರೆ. ಯುವತಿಯರು ಕೂಡ ಈ ರೀತಿಯ ಕೇಶದಾನಕ್ಕೆ ಮುಂದಾಗಬೇಕಿದ್ದು, 12 ಇಂಚಿಗಿಂತ ಹೆಚ್ಚಾಗಿರುವ ಕೂದಲನ್ನು ದಾನ ಮಾಡಬಹುದಾಗಿದೆ. ಮಾದರಿಯಾಗಿರುವ ಆದ್ಯಾಳಂತೆ ಹೆಚ್ಚಿನ ಮಹಿಳೆಯರು, ಯುವತಿಯರು ಕೂಡಾ ಕಾರ್ಯಪ್ರವೃತ್ತವಾಗಬೇಕಿದೆ.