ನಮ್ಮ ಮೆಟ್ರೋ ಪಿಂಕ್ ಲೈನ್ನ ಮೂರು ನಿಲ್ದಾಣಗಳ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ತಾವರೆಕೆರೆ, ಜೆ.ಪಿ. ನಗರ 4ನೇ ಹಂತ ಮತ್ತು ಐಐಎಂಬಿ ನಿಲ್ದಾಣಗಳು ಹೊಸ ಹೆಸರನ್ನು ಪಡೆಯಲಿವೆ. ಪ್ರಧಾನಿ ಮೋದಿ ಈ ಮಾರ್ಗವನ್ನು ಉದ್ಘಾಟಿಸಲಿದ್ದಾರೆ.
ಬೆಂಗಳೂರು: ನಮ್ಮ ಮೆಟ್ರೋ ಗುಲಾಬಿ ಮಾರ್ಗ (Namma Metro Pink line) ಅನ್ನು ನಾಳೆ ಅರ್ಥಾತ್ ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ರಾಜ್ಯ ಸರ್ಕಾರದ ಸಮಿತಿಯ ಶಿಫಾರಸು ಹಾಗೂ ಸ್ಥಳೀಯರ ಬೇಡಿಕೆಗಳನ್ನು ಪರಿಗಣಿಸಿ, ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಲೈನ್ನ ಎಲಿವೇಟೆಡ್ ಮಾರ್ಗದಲ್ಲಿರುವ ಮೂರು ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಮೂರು ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆ ಮಾಡಬೇಕು ಎನ್ನುವ ರಾಜ್ಯ ಸರ್ಕಾರದ ಕನಸು ನನಸಾಗಿದೆ.
ಕಾಳೇನ ಅಗ್ರಹಾರದಿಂದ ಹಿಂದಿನ ತಾವರೆಕೆರೆ ನಿಲ್ದಾಣದವರೆಗಿನ 7.5 ಕಿ.ಮೀ. ಉದ್ದದ ಎಲಿವೇಟೆಡ್ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಉದ್ಘಾಟಿಸಲಿದ್ದಾರೆ. ಈ ಮಾರ್ಗದಲ್ಲಿರುವ ಉಳಿದ ಮೆಟ್ರೋ ನಿಲ್ದಾಣಗಳ ಹೆಸರುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇದರ ಬೆನ್ನಲ್ಲೇ ಒಂದು ನಿಲ್ದಾಣಕ್ಕಾದರೂ ದಿವಂಗತ ನಟ ಶಂಕರ್ ನಾಗ್ ಅವರ ಹೆಸರು ಇಡಬೇಕು ಎನ್ನುವುದು ಅವರ ಅಭಿಮಾನಿಗಳ ಒಕ್ಕೋರಲದ ಕೂಗಾಗಿತ್ತು. ಈ ಬಗ್ಗೆ ಹಲವರು ಬೇಡಿಕೆಯನ್ನೂ ಸಲ್ಲಿಸಿದ್ದರು. ಆದರೆ ಅವರ ಕನಸು ಈಡೇರಲಿಲ್ಲ. ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಈಗ ಮೂರು ನಿಲ್ದಾಣಗಳಿಗೆ ಬೇರೆ ಬೇರೆ ಹೆಸರು ಇಡಲಾಗಿದ್ದು, ಅದರ ಡಿಟೇಲ್ಸ್ ಇಲ್ಲಿದೆ.
ಇಲ್ಲಿವೆ ನಿಲ್ದಾಣಗಳ ಡಿಟೇಲ್ಸ್
ತಾವರೆಕೆರೆ ಮೆಟ್ರೋ ನಿಲ್ದಾಣದ ಹೆಸರನ್ನು ಸುಬ್ದಗುಂಟೆಪಾಳ್ಯ (Suddaguntepalya), ಜೆ.ಪಿ. ನಗರ 4ನೇ ಹಂತದ ನಿಲ್ದಾಣವನ್ನು ಎನ್.ಎಸ್. ಪಾಳ್ಯ (NS Palya) ಹಾಗೂ ಐಐಎಂಬಿ ನಿಲ್ದಾಣವನ್ನು ಬಿಳೇಕಹಳ್ಳಿ–ಐಐಎಂಬಿ (Bilekahalli–IIMB) ಎಂದು ಮರುನಾಮಕರಣ ಮಾಡಲಾಗಿದೆ. ಇದರಂತೆ ಐಐಎಂಬಿ ನಿಲ್ದಾಣವು ಬಿಳೇಕಹಳ್ಳಿ–ಐಐಎಂಬಿ, ಜೆ.ಪಿ. ನಗರ 4ನೇ ಹಂತದ ನಿಲ್ದಾಣವು ಎನ್.ಎಸ್. ಪಾಳ್ಯ–ಜೆ.ಪಿ. ನಗರ 4ನೇ ಹಂತ ಹಾಗೂ ತಾವರೆಕೆರೆ ನಿಲ್ದಾಣವು ಎಸ್.ಜಿ. ಪಾಳ್ಯ (ಸುಬ್ದಗುಂಟೆ ಪಾಳ್ಯ) ಎಂದು ಮರುನಾಮಕರಣಗೊಳ್ಳಲಿದೆ.
IMB ಮೆಟ್ರೋ ನಿಲ್ದಾಣದ ಹೆಸರನ್ನು ಬಿಳೇಕಹಳ್ಳಿ – IIMB ಎಂದೂ,
JP ನಗರ 4ನೇ ಹಂತ – NS ಪಾಳ್ಯ – JP ನಗರ 4ನೇ ಹಂತ ಎಂದೂ ಹಾಗೂ
ತಾವರೆಕೆರೆ ಮೆಟ್ರೋ ನಿಲ್ದಾಣ – SG ಪಾಳ್ಯ (ಸುದ್ದಗುಂಟೆ ಪಾಳ್ಯ) ಎಂದು ಮರುನಾಮಕರಣಗೊಳ್ಳಲಿದೆ.
ಸಚಿವ ರಾಮಲಿಂಗಾರೆಡ್ಡಿ, ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರಾದ ಸತೀಶ್ ರೆಡ್ಡಿ ಮತ್ತು ಉದಯ್ ಗರುಡಾಚಾರ್ ಅವರ ಉಪಸ್ಥಿತಿಯಲ್ಲಿ ಈ ಹೆಸರು ಬದಲಾವಣೆಗಳನ್ನು ಅಂತಿಮಗೊಳಿಸಲಾಗಿದೆ.














