ಕೊಪ್ಪಳ: ಗ್ರಾಮಕ್ಕೆ ನುಗ್ಗಿದ 3 ಕರಡಿಗಳು, ಬೆನ್ನತ್ತಿ ಓಡಿಸಿದ ಗ್ರಾಮಸ್ಥರು

*   ಕೊಪ್ಪಳ ತಾಲೂಕಿನ ಚಿಕ್ಕಸೂಳಿಕೇರಿಗೆ ನುಗ್ಗಿದ್ದ ಕರಡಿಗಳು
*  ಕರಡಿಗಳನ್ನು ಓಡಿಸಲು ಹೆಣಗಾಡಿದ ಗ್ರಾಮಸ್ಥರು 
*  ಎರಡು ಎಕರೆ ಹೊಲದಲ್ಲಿ ಬೆಳೆಯಲಾಗಿದ್ದ ಕಲ್ಲಂಗಡಿ ಬೆಳೆ ಸಂಪೂರ್ಣ ನಾಶ
 

3 Bears Came to Village in Koppal grg

ಕೊಪ್ಪಳ(ಜು.01): ಕರಡಿ ಹಾವಳಿಗೆ ತಾಲೂಕಿನ ಕೆಲವು ಗ್ರಾಮಗಳು ಸುಸ್ತಾಗಿವೆ. ಅದರಲ್ಲೂ ಹಿರೇಸೂಳಿಕೇರಿ, ಚಿಕ್ಕಸೂಳಿಕೇರಿ ಹಾಗೂ ಗಂಗನಾಳ ಗ್ರಾಮಸ್ಥರ ಪಡಿಪಾಟಿಲು ಹೇಳತೀರದಾಗಿದೆ. ಚಿಕ್ಕಸೂಳಿಕೇರಿ ಗ್ರಾಮಕ್ಕೆ ಬುಧವಾರ ಸಂಜೆ ನುಗ್ಗಿದ್ದ 3 ಕರಡಿಗಳನ್ನು ಓಡಿಸಲು ಗ್ರಾಮಸ್ಥರು ಹೆಣಗಾಡಿದ್ದಾರೆ.

ಗ್ರಾಮಕ್ಕೆ ನುಗ್ಗಿದ ಕರಡಿಯೊಂದು ಗ್ರಾಮದಲ್ಲಿ ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡಿದ್ದು ಅಲ್ಲದೇ ಮನೆಯ ಮಾಳಿಗೆ ಏರಿದೆ. ಇದರಿಂದ ಗ್ರಾಮಸ್ಥರು ಏನು ಮಾಡಬೇಕು ಎನ್ನುವುದು ತಿಳಿಯದಾಗಿದೆ. ಇನ್ನೆರಡು ಕರಡಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ಓಡಾಡಿದ್ದರಿಂದ ಇಡೀ ಗ್ರಾಮಸ್ಥರು ದಿಕ್ಕಾಪಾಲಾಗಿದ್ದರು. ಇದರ ನಡುವೆಯೂ ಕೆಲವರು ಧೈರ್ಯ ಮಾಡಿ ಗ್ರಾಮದೊಳಗೆ ನುಗ್ಗಿದ್ದ ಕರಡಿಗಳನ್ನು ಅಟ್ಟಾಡಿಸಿಕೊಂಡು ಹೋಗಿ ಗ್ರಾಮದಿಂದ ಹೊರಹೋಗುವಂತೆ ಮಾಡಿದ್ದಾರೆ. ಗ್ರಾಮದಿಂದ ಹೊರಗೆ ಹೋದ ಮೇಲೆಯೂ ಬಿಡುಗಡೆ ಗುಡ್ಡದಲ್ಲಿ ಓಡಿ ಹೋಗುವವರೆಗೂ ಬೆನ್ನಟ್ಟಿಕೊಂಡು ಹೋಗಿದ್ದಾರೆ ಗ್ರಾಮಸ್ಥರು.

KOPPAL NEWS: ವಿದ್ಯಾರ್ಥಿಗೆ ಕಿವಿಯಲ್ಲಿ ರಕ್ತ ಬರುವಂತೆ ಹೊಡೆದ ಕೋಚಿಂಗ್‌ ಸೆಂಟರ್ ಶಿಕ್ಷಕ!

ಗಂಗನಾಳ ಮತ್ತು ಹಿರೇಸೂಳಿಕೇರಿ ಗ್ರಾಮದ ಹೊಲವಲಯದಲ್ಲಿಯೂ ಕರಡಿ ಓಡಾಡಿದೆ. ಅಲ್ಲಿಯೂ ಗ್ರಾಮಸ್ಥರು ಬೆನ್ನಟ್ಟಿಓಡಿಸಿದ ವಿಡಿಯೋ ಇದೀಗ ವೈರಲ್‌ ಆಗಿವೆ.

2 ಎಕರೆ ಬೆಳೆನಾಶ:

ಚಿಕ್ಕಸೂಳಿಕೇರಿ ಗ್ರಾಮದ ಶರಣಗೌಡ ಎಂಬವರ ಎರಡು ಎಕರೆ ಹೊಲದಲ್ಲಿ ಬೆಳೆಯಲಾಗಿದ್ದ ಕಲ್ಲಂಗಡಿ ಬೆಳೆಯನ್ನು ಸಂಪೂರ್ಣ ನಾಶ ಮಾಡಿವೆ. ಇವರೊಬ್ಬರ ಹೊಲವಲ್ಲ. ಆಗಾಗ ಈ ರೀತಿ ದಾಳಿ ಮಾಡಿ, ರೈತರ ಬೆಳೆಯನ್ನು ಕರಡಿಗಳು ಹಾಳು ಮಾಡುತ್ತಿವೆ. ಮೆಕ್ಕೆಜೋಳ ಸೇರಿದಂತೆ ಮೊದಲಾದ ಬೆಳೆಯನ್ನು ಸುಮಾರು ಬಾರಿ ಹಾಳು ಮಾಡಿವೆ. ಹೀಗಾಗಿ ಕರಡಿಗಳನ್ನು ಇಲ್ಲಿಂದ ಅರಣ್ಯ ಇಲಾಖೆ ಓಡಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
 

Latest Videos
Follow Us:
Download App:
  • android
  • ios