ಶಿವಮೊಗ್ಗ (ಡಿ.11):  ಹಲ್ಲೆಗೊಳಗಾದ ಭಜರಂಗದಳದ ಮುಖಂಡ ನಾಗೇಶ್ ಗೌಡಗೆ ಇನ್‌ ಸ್ಟಾಗ್ರಾಮ್ ನಲ್ಲಿ ಬೆದರಿಕೆಯ ಪೋಸ್ಟ್ ಮಾಡಿದ್ದ ಮೂವರನ್ನು ಬಂಧಿಸಲಾಗಿದೆ. 

ಶಿವಮೊಗ್ಗ ಜಿಲ್ಲೆ ಹೊಸನಗರದ ಸೈಫುಲ್ಲಾ, ಶಿವಮೊಗ್ಗದ ಆರ್.ಎಂ.ಎಲ್. ನಗರದ ಅಮೀನ್ , ಫೈಜುಲ್ಲಾ   ಎಂಬ ಮೂವರನ್ನು ಈ ಘಟನೆಗೆ ಸಂಬಂಧಿಸಿದಂತೆ ಅರೆಸ್ಟ್ ಮಾಡಲಾಗಿದೆ. 

ಕ್ರೇಜಿ ಯೈಟ್ಸ್  ಎಂಬ ಖಾತೆಯಲ್ಲಿ ನಾಗೇಶ್ ಗೆ ಬೆದರಿಕೆ ಹಾಕಿದ್ದು,  ಹಲ್ಲೆಗೂ ವಾರದ ಮುಂಚೆ  ಸಂದೇಶ ಕಳುಹಿಸಲಾಗಿತ್ತು. ಬೆದರಿಕೆಯ ಸಂದೇಶಗಳ ಬೆನ್ನು ಬಿದ್ದಿದ್ದ  ರೌಡಿ ನಿಗ್ರಹ ದಳದ  ಪೋಲಿಸ್ ಅಧಿಕಾರಿಗಳು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಗೋ ಸಂರಕ್ಷಣೆ ಮತ್ತು ಲವ್ ಜಿಹಾದ್ ವಿರುದ್ಧದ  ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಗೇಶ್ ಮೇಲೆ ತೀವ್ರ ಹಲ್ಲೆ ನಡೆಸಿದವರನ್ನು ಇನ್‌ಸ್ಪೆಕ್ಟರ್ ಗುರುರಾಜ ಕರ್ಕಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರೆಸ್ಟ್ ಮಾಡಲಾಗಿದೆ. 

ಹಿಂದೂ ಕಾರ್ಯಕರ್ತ ಮೇಲೆ ಹಲ್ಲೆ : 62 ಮಂದಿ ವಶಕ್ಕೆ

ಬೆದರಿಕೆಯ ಸಂದೇಶ ಕುರಿತು ಸ್ನೇಹಿತರ ಜೊತೆಗೆ ಮಾಹಿತಿಯನ್ನು ನಾಗೇಶ್ ಹಂಚಿಕೊಂಡಿದ್ದು, ಈ ಚಾಟಿಂಗ್ ಕೂಡ ಸುವರ್ಣ ನ್ಯೂಸ್ ಡಾಟ್‌ ಕಾಂಗೆ ಲಭ್ಯವಾಗಿದೆ.  ನಿನಗೆ ದಮ್ ಇದ್ದರೆ ನೋಡ್ಕೋ ಎಂದು ಮೆಸೇಜ್ ಮಾಡಲಾಗಿತ್ತು. ನೋಡ್ಕೋತಿನಿ ಬೈಪಾಸ್ ಹತ್ತಿರ ಬಾ ಎಂದು ಹೀಗೆ ಒಂದೇ ದಿನ ಪದೇ ಪದೇ  ಬೆದರಿಕೆಯ ಮೆಸೇಜ್ ಬಂದಿತ್ತು

ಇದಾದ ನಂತರ ಡಿ 3 ರಂದು ಭಜರಂಗದಳದ ಮುಖಂಡ ನಾಗೇಶ್ ಗೌಡ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.