Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: ಹಗರಿಬೊಮ್ಮನಹಳ್ಳಿ ಬಸ್‌ ಡಿಪೋಗೆ 3.13 ಕೋಟಿ ನಷ್ಟ

ಲಾಕ್‌​ಡೌ​ನ್‌​ನಿಂದ ಬಸ್‌ ಓಡಾ​ಟ​ವಿ​ಲ್ಲದೆ ಆದಾ​ಯಕ್ಕೆ ಕೊಕ್ಕೆ| ಮಾರ್ಚ್‌ ತಿಂಗಳು 9 ದಿನ ಸೇರಿ ಏಪ್ರಿಲ್‌ ಬರೋಬ್ಬರಿ 30 ದಿನ ಹಾಗೂ ಲಾಕ್‌ಡೌನ್‌ ಸಡಿಲಿಕೆಗೂ ಮೊದಲು 17 ದಿನ ಒಟ್ಟು 57 ದಿನಗಳಲ್ಲಿ ಡಿಪೋಗೆ 3.13 ಕೋಟಿ ನಷ್ಟ| ಡಿಪೋದಲ್ಲಿ ಒಂದು ರಾಜಹಂಸ, ಎರಡು ಸ್ಲೀಪರ್‌ ಕೋಚ್‌ ಸೇರಿ ಒಟ್ಟು 56 ಬಸ್‌ಗಳಿದ್ದು, 50 ಮಾರ್ಗ ಓಡುತ್ತಿದ್ದ ಬಸ್‌ಗಳಿಂದ, ಒಂದು ದಿನಕ್ಕೆ ಸರಾಸರಿ 5.5 ಲಕ್ಷ ಆದಾಯ ಬರುತಿತ್ತು|

3.13 crore rs Loss to Hagaribommanahalli Bus Depot due to Lockdown
Author
Bengaluru, First Published May 24, 2020, 8:41 AM IST
  • Facebook
  • Twitter
  • Whatsapp

ಹಗರಿಬೊಮ್ಮನಹಳ್ಳಿ(ಮೇ.24):  ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಸರ್ಕಾರದ ಲಾಕ್‌ಡೌನ್‌ ಘೋಷಣೆಯ ಪರಿಣಾಮ ಸಾರಿಗೆ ಸಂಸ್ಥೆಯ ಹಗರಿಬೊಮ್ಮನಹಳ್ಳಿ ಬಸ್‌ ಡಿಪೋಗೆ 3.13 ಕೋಟಿ ನಷ್ಟವಾಗಿದೆ. ಮಾರ್ಚ್‌ ತಿಂಗಳು 9 ದಿನ ಸೇರಿ ಏಪ್ರಿಲ್‌ ಬರೋಬ್ಬರಿ 30 ದಿನ ಹಾಗೂ ಲಾಕ್‌ಡೌನ್‌ ಸಡಿಲಿಕೆಗೂ ಮೊದಲು 17 ದಿನ ಒಟ್ಟು 57 ದಿನಗಳಲ್ಲಿ ಡಿಪೋಗೆ 3.13 ಕೋಟಿ ನಷ್ಟವಾಗಿದೆ. ಡಿಪೋದಲ್ಲಿ ಒಂದು ರಾಜಹಂಸ, ಎರಡು ಸ್ಲೀಪರ್‌ ಕೋಚ್‌ ಸೇರಿ ಒಟ್ಟು 56 ಬಸ್‌ಗಳಿದ್ದು, 50 ಮಾರ್ಗ ಓಡುತ್ತಿದ್ದ ಬಸ್‌ಗಳಿಂದ, ಒಂದು ದಿನಕ್ಕೆ ಸರಾಸರಿ 5.5 ಲಕ್ಷ ಆದಾಯ ಬರುತಿತ್ತು. 

ಅದರಲ್ಲೂ ಏಪ್ರಿಲ್‌ ಮತ್ತು ಮೇ ತಿಂಗಳು ಅತಿ ಹೆಚ್ಚು ಪ್ರಯಾಣಿಕರು ಓಡಾಡುವ ದಿನಗಳಾಗಿದ್ದು, ಅದಕ್ಕಾಗಿ ನಡೆಯುತ್ತಿದ್ದ ಮದುವೆ ಮುಂಜಿ ಸೇರಿದಂತೆ ಅನೇಕ ಸಮಾರಂಭಗಳು, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿದ್ದ ಜಾತ್ರೆ, ಹಬ್ಬ, ಹರಿದಿನಗಳು, ಮುಂಗಡ ಬುಕಿಂಗ್‌ ಆಗಿ ಪ್ರವಾಸಿ ತಾಣಗಳಿಗೆ ತೆರಳುತ್ತಿದ್ದ ಬಸ್‌ಗಳಿಗೆ ಆದಾಯದ ಮೂಲಗಳಾಗಿದ್ದವು. ಆದರೆ, ಲಾಕ್‌ಡೌನ್‌ ಪರಿಣಾಮ ಈ ಎಲ್ಲ ಕಾರ್ಯಕ್ರಮಗಳು ರದ್ದಾಗಿ ಒಂದೂ ಬಸ್‌ ಕೂಡ ರಸ್ತೆಗಿಳಿಯದ ಕಾರಣ ಡಿಪೋದ ಆದಾಯಕ್ಕೆ ಕೊಕ್ಕೆ ಬಿದ್ದಂತಾಯಿತು.

ಸಿರಗುಪ್ಪದಲ್ಲಿ ತಂದೆ ಸಾವು; ಬಸ್‌ಗಾಗಿ ಮೆಜೆಸ್ಟಿಕ್‌ನಲ್ಲಿ ಮಗಳ ಕಣ್ಣೀರು..!

ಪ್ರಯಾಣಿಕರ ಕೊರತೆ :

ಇದೀಗ ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಬಸ್‌ ಡಿಪೋದಿಂದ ಬಸ್‌ಗಳ ಓಡಾಟವನ್ನೇನೋ ಆರಂಭವಾ​ಗಿದೆ. ಆದರೆ, ಕೊರೋನಾ ವೈರಸ್‌ಗೆ ಭಯಭೀತರಾಗಿರುವ ಮತ್ತು ಜಾಗೃತರಾಗಿರುವ ಜನ ಪ್ರಯಾಣಕ್ಕೆ ಮನಸ್ಸು ಮಾಡುತ್ತಿಲ್ಲ. ಇದರಿಂದ ಆಮೆಗತಿಯಲ್ಲಿ ಬಸ್‌ಗಳ ಸಂಚಾರ ಆರಂಭವಾಗಿದ್ದು, ಹೊಸಪೇಟೆಗೆ ದಿನಕ್ಕೆ ಮೂರ್ನಾಲ್ಕು ಬಸ್‌ಗಳು ಮಾತ್ರ ಓಡುತ್ತಿವೆ. ದಿನಗಳು ಕಳೆದಂತೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲಿದೆ ಎಂದು ಡಿಪೋ ವ್ಯವಸ್ಥಾಪಕ ವೆಂಕಟ ಛಲಪತಿ ತಿಳಿಸಿದರು

ಲಾಕ್‌ಡೌನ್‌ ಆದೇಶದ ಹಿನ್ನೆಲೆಯಲ್ಲಿ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಬಸ್‌ ನಿಲ್ದಾಣ, ಡಿಪೋ ಆವರಣ ಸೇರಿ ಎಲ್ಲ ಬಸ್‌ಗಳಿಗೂ ರಾಸಾಯನಿಕ ಸಿಂಪರಣೆ ಮಾಡಲಾಗಿದೆ. ಮುಂದಿನ ದಿನದಲ್ಲಿ ಇನ್ನಷ್ಟುಎಚ್ಚರಿಕೆ ವಹಿಸಲಾಗುವುದು ಎಂದು ಹಗರಿಬೊಮ್ಮನಹಳ್ಳಿ ಡಿಪೋ ವ್ಯವಸ್ಥಾಪಕ ವೆಂಕಟ ಛಲಪತಿ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios