Asianet Suvarna News Asianet Suvarna News

2ಎ ಮೀಸಲಾತಿ: ನಿಪ್ಪಾಣಿಯಿಂದ ಮತ್ತೆ ಹೋರಾಟ, ಜಯಮೃತ್ಯುಂಜಯ ಸ್ವಾಮೀಜಿ

ಈಗಾಗಲೇ ಪಂಚಮಸಾಲಿ ಸಮಾಜದವರು ಹೊಸ ಸರ್ಕಾರಕ್ಕೆ ಮನವಿ ಮಾಡಿದ್ದೇವು. ಆಗ ಸಿಎಂ ಅವರು ಬೇರೆ ಬೇರೆ ಸಮುದಾಯದವರ ವಿಶ್ವಾಸಕ್ಕೆ ತೆಗೆದುಕೊಂಡು ಅಧಿವೇಶನ ಮುಗಿದ ಬಳಿಕ ಸಭೆ ಕರೆಯುವುದಾಗಿ ಹೇಳಿದ್ದರು. ಆದರೆ, ಇಲ್ಲಿಯವರೆಗೂ ಕರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ 

2A Reservation Fight Again from Nippani Says Jayamrutunjaya Swamiji grg
Author
First Published Aug 19, 2023, 8:45 PM IST

ಬೆಳಗಾವಿ(ಆ.19): ನಮ್ಮ ಸಮಾಜದ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಪಂಚಮಸಾಲಿಗೆ 2ಎ ಮೀಸಲಾತಿ ನೀಡುವಂತೆ ಬೆಳಗಾವಿ ತಾಲೂಕಿನ ನಿಪ್ಪಾಣಿಯಲ್ಲಿ ಆಗಸ್ಟ್‌ ಕೊನೆಯ ವಾರದಲ್ಲಿ ಇಷ್ಟಲಿಂಗ ಪೂಜೆ ಮಾಡುವುದರ ಮೂಲಕ ಹೋರಾಟ ನಡೆಸಲಾಗುವುದು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ನುಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪಂಚಮಸಾಲಿ ಸಮಾಜದವರು ಹೊಸ ಸರ್ಕಾರಕ್ಕೆ ಮನವಿ ಮಾಡಿದ್ದೇವು. ಆಗ ಸಿಎಂ ಅವರು ಬೇರೆ ಬೇರೆ ಸಮುದಾಯದವರ ವಿಶ್ವಾಸಕ್ಕೆ ತೆಗೆದುಕೊಂಡು ಅಧಿವೇಶನ ಮುಗಿದ ಬಳಿಕ ಸಭೆ ಕರೆಯುವುದಾಗಿ ಹೇಳಿದ್ದರು. ಆದರೆ, ಇಲ್ಲಿಯವರೆಗೂ ಕರೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಯೋಜನೆ ಸದ್ಬಳಕೆಯಾಗಲಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ

ಜಿಲ್ಲಾ ಕೇಂದ್ರದಲ್ಲಿ ಇಷ್ಟಲಿಂಗ ಪೂಜೆ ಹಾಗೂ ತಾಲೂಕು ಕೇಂದ್ರದಲ್ಲಿ ಶ್ರಾವಣ ಮಾಸದ ಸಂದೇಶ ಎಂಬ ಘೋಷ ವಾಕ್ಯದೊಂದಿಗೆ ಹೋರಾಟ ಆರಂಭಿಸಲಾಗುವುದು. ತಜ್ಞರ ಸಮಿತಿಯ ವರದಿ ಪಡೆಯಬೇಕು. ಈ ಬಾರಿಯ ಕಾಂಗ್ರೆಸ್‌ ಸರ್ಕಾರ ಬರಲು ಪಂಚಮಸಾಲಿ ಸಮಾಜದ ಶ್ರಮ ಸಾಕಷ್ಟುಇದೆ. ಅದರ ಶ್ರಮವನ್ನು ಸರ್ಕಾರ ಮರೆಯಬಾರದು ಎಂದರು.

ಸರ್ಕಾರ ಬೇರೆ ಬೇರೆ ಕೆಲಸದ ಒತ್ತಡದಲ್ಲಿರುವುದರಿಂದ ಸಭೆ ಕರೆಯಲು ವಿಳಂಬವಾಗುವ ಸಾಧ್ಯತೆ ಇದೆ. ಶುಭ ಸಮಾರಂಭ ಶ್ರಾವಣ ಮಾಸದಲ್ಲಿ ನಮಗೆ ಸರ್ಕಾರ 2ಎ ಮೀಸಲಾತಿ ನೀಡಿದರೇ ಅನುಕೂಲವಾಗುತ್ತದೆ. ಆಗಸ್ಟ್‌ ಕೊನೆಯ ವಾರದಲ್ಲಿ ಇಷ್ಟಲಿಂಗ ಪೂಜೆ, ಪ್ರಾರ್ಥನೆ ಮಾಡುವ ಮೂಲಕ ಬೆಳಗಾವಿ ಜಿಲ್ಲೆ ನಿಪ್ಪಾಣಿಯಿಂದ ಹಂತ, ಹಂತವಾಗಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯಾದ್ಯಂತ ಸಭೆ ಮಾಡಿ ಕೊನೆಯಲ್ಲಿ ದೊಡ್ಡ ಮಟ್ಟದ ಹಕ್ಕೋತ್ತಾಯ ಸಭೆ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಶೀಘ್ರದಲ್ಲಿ ಸಿಎಂ ತಜ್ಞರ ಸಭೆಯನ್ನು ಕರೆಯುವಂತೆ ಆಗ್ರಹಿಸಲಾಗುವುದು. ಮೀಸಲಾತಿ ಅನುಷ್ಠಾನ ಆಗುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದರು.

ಬಿಜೆಪಿಯವರನ್ನು ಆಹ್ವಾನಿಸಿಲ್ಲ, ಬಂದರೆ ಸ್ವಾಗತ: ಗೃಹ ಸಚಿವ ಪರಮೇಶ್ವರ

ಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಆರ್‌.ಕೆ.ಪಾಟೀಲ, ಮೃಣಾಲ… ಹೆಬ್ಬಾಳ್ಕರ ಸೇರಿದಂತೆ ಹಲವಾರು ಇದ್ದರು.

ಪಂಚಮಸಾಲಿ ಸಮಾಜಕ್ಕೆ ಚುನಾವಣೆ ನೀತಿ ಸಂಹಿತೆ ಪೂರ್ವದಲ್ಲಿ ಬಿಜೆಪಿ ಸರ್ಕಾರ 2ಡಿ ಘೋಷಣೆ ಮಾಡಿತು. ಚುನಾವಣೆ ಹಿನ್ನೆಲೆ ತಾತ್ಕಾಲಿಕವಾಗಿ ಹೋರಾಟಕ್ಕೆ ಅಲ್ಪವಿರಾಮ ನೀಡಲಾಗಿತ್ತು. ಕಾಂಗ್ರೆಸ್‌ ಸರ್ಕಾರ ರಚನೆ ಆದ ಬಳಿಕ 2ಎ ಗೆ ಒತ್ತಾಯ ಮಾಡಿದ್ದೇವೆ. ಲೋಕಸಭಾ ಚುನಾವಣೆ ಒಳಗಾಗಿ 2 ಪಕ್ಷದವರನ್ನು ಸೆಳೆಯಬಹುದು. ಅಲ್ಲದೆ, 2 ಪಕ್ಷಕ್ಕೆ ಚುನಾವಣೆ ಬಹಳ ಮುಖ್ಯವಾಗಿದೆ. ಆದ್ದರಿಂದ ಹೋರಾಟ ಮಾಡಿ ಗಮನ ಸೆಳೆಯಲು ಒತ್ತಡ ಹಾಕುವ ಅನಿವಾರ್ಯತೆ ಇದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. 

Follow Us:
Download App:
  • android
  • ios