Chikkaballapura: ಜಿಲ್ಲೆಯಲ್ಲಿ ಹೆತ್ತವರಿಗೆ ಬೇಡವಾದ 285 ಮಕ್ಕಳು!
ಜಿಲ್ಲೆಯಲ್ಲಿ ಮಹಾಮಾರಿ ಎಚ್‌ಐವಿ ಸೋಂಕಿನಿಂದ ಬಾಧಿತರಾದವರ ಪೋಷಣೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸುತ್ತಿರುವ ವಿಶೇಷ ಪಾಲನಾ ಯೋಜನೆಯಡಿ ಜಿಲ್ಲೆಯಲ್ಲಿ ಸೋಂಕಿನಿಂದ ಬಾಧಿತರಾದ ಬರೋಬ್ಬರಿ 247 ಮಕ್ಕಳನ್ನು ಇಲಾಖೆ ಗುರುತಿಸಿದೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ಅ.25): ಜಿಲ್ಲೆಯಲ್ಲಿ ಮಹಾಮಾರಿ ಎಚ್‌ಐವಿ ಸೋಂಕಿನಿಂದ ಬಾಧಿತರಾದವರ ಪೋಷಣೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸುತ್ತಿರುವ ವಿಶೇಷ ಪಾಲನಾ ಯೋಜನೆಯಡಿ ಜಿಲ್ಲೆಯಲ್ಲಿ ಸೋಂಕಿನಿಂದ ಬಾಧಿತರಾದ ಬರೋಬ್ಬರಿ 247 ಮಕ್ಕಳನ್ನು ಇಲಾಖೆ ಗುರುತಿಸಿದೆ.
ಆಂಧ್ರದ ಗಡಿಯಲ್ಲಿರುವ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯಲ್ಲಿ ಹೆಚ್‌ಐವಿ (HIV) ಸೋಂಕು ನಿಯಂತ್ರಣಕ್ಕೆ ತರಲು ಒಂದಡೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದರೂ ಸೋಂಕಿಗೆ ತುತ್ತಾದ ಪೋಷಕರು ಹಾಗೂ ಸೋಂಕಿನಿಂದ ಬಾಧಿತರಾಗುತ್ತಿರುವ ಮಕ್ಕಳ ಸಂಖ್ಯೆ ಮಾತ್ರ ಜಿಲ್ಲೆಯಲ್ಲಿ 247ಕ್ಕೆ ತಲುಪಿರುವುದು ಸಹಜವಾಗಿಯೆ ತೀವ್ರ ಆತಂಕ ಮೂಡಿಸಿದೆ.
ವಿಶೇಷ ಪಾಲನಾ ಕಾರ್ಯಕ್ರಮ ಆಸರೆ
ಹೆಚ್‌ಐವಿ ಸೋಂಕಿನಿಂದ ಬಳಲುತ್ತಿರುವ ಪೋಷಕರು ಒಂದಡೆಯಾದರೆ ಸೋಂಕಿನಿಂದ ಬಾಧಿತರಾದ ಮಕ್ಕಳಿಗೆ ಶಿಕ್ಷಣ, ಗೃಹ ಆಧಾರಿತ ಪೋಷಣೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೂಪಿಸಿರುವ ವಿಶೇಷ ಪಾಲನಾ ಕಾರ್ಯಕ್ರಮ ಆಸರೆ ಆಗಿದೆ. ಈ ಯೋಜನೆಯಡಿ ಜಿಲ್ಲಾದ್ಯಂತ 247 ಮಕ್ಕಳು ಸೌಲಭ್ಯ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 247 ಮಕ್ಕಳ ಪೈಕಿ 118 ಬಾಲಕಿಯರು ಹಾಗೂ 129 ಬಾಲಕರು ಸೇರಿದ್ದಾರೆ.
18 ವರ್ಷದೊಳಗಿನ ಎಚ್‌ಐವಿ ಸೋಂಕಿತ ಹಾಗೂ ಬಾಧಿತ ಮಕ್ಕಳಿಗೆ ವಿಶೇಷ ಪಾಲನಾ ಯೋಜನೆಯಡಿ ಪ್ರತಿ ಮಗುವಿಗೂ ಕೂಡ ಸರ್ಕಾರ 1 ಸಾವಿರ ರು, ಆರ್ಥಿಕ ನೆರವು ನೀಡುವ ಮೂಲಕ ಮಕ್ಕಳ ವಿದ್ಯಾಭ್ಯಾಸ ದಿಂದ ಹಿಡಿದು ಪೌಷ್ಟಿಕ ಆಹಾರ, ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿದೆ. ಅದರಲ್ಲೂ ಸರ್ಕಾರದ ನಿಯಮಾ ವಳಿಗಳ ಪ್ರಕಾರ ಸಾರ್ವಜನಿಕವಾಗಿ ವೈಯಕ್ತಿಕ ಮಾಹಿತಿ ಮಾಹಿತಿಗಳನ್ನು ಹಂಚಿಕೊಳ್ಳುವ ಹಾಗೂ ಮನೆ ಬೇಟಿ ಮಾಡಲು ಅನುಮತಿಸಿದ ಫಲಾನುಭವಿಗಳನ್ನು ಮಾತ್ರ ಈ ಯೋಜನೆಯಡಿ ಸೌಲಭ್ಯ ಪಡೆಯುತ್ತಿದ್ದಾರೆ.
ಪ್ರಾಯೋಜಕತ್ವದಡಿ 285 ಮಕ್ಕಳಿಗೆ ಸೌಲಭ್ಯ
ಒಂದಡೆ ಜಿಲ್ಲಾದ್ಯಂತ ಎಚ್‌ಐವಿ ಬಾಧಿತ 247 ಮಕ್ಕಳು ವಿಶೇಷ ಪಾಲನಾ ಯೋಜನೆಯಡಿ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದು ಮತ್ತೊಂದಡೆ ಜಿಲ್ಲಾದ್ಯಂತ ಪೋಷಕರಿಲ್ಲ. ಹೆತ್ತವರಿಗೆ ಬೇಡವಾಗದ ಬರೊಬ್ಬರಿ 285 ಮಕ್ಕಳು ಪ್ರಾಯೋಜಕತ್ವದಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅನುಷ್ಟಾನಗೊಳಿಸುತ್ತಿರುವ ಪ್ರಾಯೋಜಕತ್ವದಡಿ ಆಸರೆ ಪಡೆಯುತ್ತಿದ್ದಾರೆ. ವಿಶೇಷವಾಗಿ ತಾಯಿ ವಿಧವೆ ಅಥ ವಿಚ್ಛೇದಿತ ಕುಟುಂಬದಲ್ಲಿ ಮಕ್ಕಳು ಪರಿತ್ಯಕ್ತ ಳಾಗಿರುವ ಅಥವ ಮಕ್ಕಳು ಅನಾಥ ರಾಗಿರುವ, ಪೋಷಕರು ಮರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ, ದೈಹಿಕ ಹಾಗೂ ಆರ್ಥಿಕವಾಗಿ ಅಸಮರ್ಥರು ಇರುವ, ನೈಸರ್ಗಿಕ ವಿಕೋಪಕ್ಕೆ ಒಳಗಾದ ಬಾಲ ವಿವಾಹ ಸಂತ್ರಸ್ತರು, ದೈಹಿಕ ಅಂಗವೈಕ್ಯಲತೆ ಇರುವ ಹಾಗೂ ಕಾಣೆಯಾದ ಮತ್ತು ಬಾಲ ಕಾರ್ಮಿಕರು ಸೇರಿ ಒಟ್ಟು 285 ಮಕ್ಕಳು ಇದ್ದು ಆ ಪೈಕಿ 169 ಹೆಣ್ಣು ಮಕ್ಕಳು ಹಾಗೂ 116 ಗಂಡು ಮಕ್ಕಳು ಸೇರಿದ್ದಾರೆ.
ಪೋಷಕರನ್ನು ಕಳೆದುಕೊಂಡ 15 ಮಕ್ಕಳು
2019 ರಿಂದ 21ರ ವರೆಗೂ ಮನುಕಲವನ್ನು ಬಾಧಿಸಿದ ಮಹಾ ಮಾರಿ ಕೊರೋನಾ ವೇಳೆಯಲ್ಲಿ ಜಿಲ್ಲಾದ್ಯಂತ 18 ವರ್ಷದೊಳಗಿನ ಬರೋಬ್ಬರಿ 15 ಮಕ್ಕಳು ತಮ್ಮ ಹೆತ್ತ ತಂದೆ, ತಾಯಿಯನ್ನು ಕಳೆದುಕೊಂಡಿದ್ದಾರೆ. ಆ ಪೈಕಿ 10 ಮಂದಿ ಹೆಣ್ಣು ಮಕ್ಕಳು, 5 ಮಂದಿ ಗಂಡು ಮಕ್ಕಳಿ ದ್ದಾರೆ. ಮಕ್ಕಳ ಭವಿಷ್ಯ ಅನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಅವರ ಸರ್ವತೋಮುಖ ಅಭಿವೃದ್ದಿಗಾಗಿ ಅಗತ್ಯ ಸೌಕರ್ಯ ಒದಗಿಸಲು ಮುಖ್ಯಮಂತ್ರಿ ಬಾÇ ಸೇವಾ ಯೋಜನೆಯನ್ನು ಸರ್ಕಾರ ರೂಪಿಸಿ ಅನುಷ್ಠಾನಗೊಳಿಸುತ್ತಿದೆ.