ಬೆಂಗ್ಳೂರಿನ ಸಬರ್ಬನ್‌ ರೈಲಿಗೆ 2800 ಕೋಟಿ ರೂ. ಯುರೋಪ್‌ ಸಾಲ

ಬೆಂಗಳೂರಿನಲ್ಲಿ ನಾಲ್ಕು ಕಾರಿ ಡಾರ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಉಪನಗರ ರೈಲು ಯೋಜನೆಗೆ 300 ಮಿಲಿಯನ್ ಯೂರೋ ಸಾಲ ನೀಡಲಾಗುವುದು. ಉಪನಗರ ರೈಲು ಯೋಜ ನೆಯು ನಗರದ ವಾಹನ ದಟ್ಟಣೆ, ವಾಯು ಮತ್ತು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲಿದೆ. ಇದಿಷ್ಟೇ ಅಲ್ಲದೇ ಜನರಿಗೆ ಕಡಿಮೆ ಖರ್ಚಿನಲ್ಲಿ ಪ್ರಯಾಣ ನೀಡುತ್ತದೆ. ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದ ಇಐಬಿ ಉಪಾಧ್ಯಕ್ಷೆ ನಿಕೋಲಾ ಬೀರ್ 

2800 crore rs Europe Loan for Bengaluru suburban train grg

ಗಾಂಧಿನಗರ (ಗುಜರಾತ್)(ಅ.27):  ಬೆಂಗಳೂರಿನಲ್ಲಿ ನಿರ್ಮಾಣ ಹಂತದಲ್ಲಿರುವ ಉಪನಗರ ರೈಲು ಯೋಜನೆಗೆ ಯೂರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (ಇಐಬಿ  ಗ್ಲೋಬಲ್‌ ) 300 ಮಿಲಿಯನ್ ಯೂರೋ (₹2800 ಕೋಟಿ ) ನೀಡಲಿದೆ. 

ಈ ಬಗ್ಗೆ ಮಾತನಾಡಿದ ಇಐಬಿ ಉಪಾಧ್ಯಕ್ಷೆ ನಿಕೋಲಾ ಬೀರ್, 'ಬೆಂಗಳೂರಿನಲ್ಲಿ ನಾಲ್ಕು ಕಾರಿ ಡಾರ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಉಪನಗರ ರೈಲು ಯೋಜನೆಗೆ 300 ಮಿಲಿಯನ್ ಯೂರೋ ಸಾಲ ನೀಡಲಾಗುವುದು. ಉಪನಗರ ರೈಲು ಯೋಜ ನೆಯು ನಗರದ ವಾಹನ ದಟ್ಟಣೆ, ವಾಯು ಮತ್ತು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲಿದೆ. ಇದಿಷ್ಟೇ ಅಲ್ಲದೇ ಜನರಿಗೆ ಕಡಿಮೆ ಖರ್ಚಿನಲ್ಲಿ ಪ್ರಯಾಣ ನೀಡುತ್ತದೆ. ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲಿದೆ ಎಂದರು. 

ಬೆಂಗಳೂರು ಉಪನಗರ ರೈಲಿಗೆ 306 ಬೋಗಿ ಖರೀದಿ

ಇಐಬಿ ಬ್ಯಾಂಕ್ ಈಗಾಗಲೇ ಭಾರತದಲ್ಲಿನ ಸಾರಿಗೆ ವ್ಯವಸ್ಥೆ ಸುಧಾರಣೆಗೆ 3.25 ಬಿಲಿಯನ್ ಯೂರೋ (30,225 ಕೋಟಿ) ಸಾಲ ನೀಡಿದ್ದು, ಯೂರೋಪ್ ಹೊರತಾಗಿ ಭಾರತ ಅತಿ ದೊಡ್ಡ ಫಲಾನು ಭವಿಯಾಗಿದೆ. ಬೆಂಗಳೂರಿನಲ್ಲಿ ಮೆಟ್ರೋ ರೈಲು ನಿರ್ಮಾಣಕ್ಕೆ ಇಐಬಿ ಈಗಾಗಲೇ 500 ಮಿಲಿಯನ್ (4650 ಕೋಟಿ) ಸಾಲ ನೀಡಿದೆ ಎಂದರು.

Latest Videos
Follow Us:
Download App:
  • android
  • ios