ಬೆಂಗಳೂರು [ಸೆ.1]: ಸೇವಾ ಹಿರಿತನದ ಆಧಾರದ ಮೇರೆಗೆ ಮುಂಬಡ್ತಿ ನೀಡುವ ಮೂಲಕ ಗೌರಿ-ಗಣೇಶ ಹಬ್ಬಕ್ಕೆ ನಗರದ 271 ಪೊಲೀಸರಿಗೆ ಆಯುಕ್ತ ಭಾಸ್ಕರ್‌ ರಾವ್‌ ಶನಿವಾರ ಉಡುಗೊರೆ ನೀಡಿದ್ದಾರೆ.

ಜ್ಯೇಷ್ಠತೆ ಮೇರೆಗೆ 94 ಹೆಡ್‌ ಕಾನ್‌ಸ್ಟೇಬಲ್‌ಗಳಿಗೆ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆ ಹಾಗೂ 177 ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಯಿಂದ ಹೆಡ್‌ ಕಾನ್‌ಸ್ಟೇಬಲ್‌ ಹುದ್ದೆಗಳಿಗೆ ಮಂದಿಗೆ ಸೇರಿ ಒಟ್ಟು 271 ಮುಂಬಡ್ತಿ ನೀಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. 

ಮುಂಬಡ್ತಿ ನೀಡಿ ಗೌರಿ ಗಣೇಶ ಹಬ್ಬಕ್ಕೆ ಉಡುಗೊರೆ ನೀಡಿದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ.