ಬೆಳಗಾವಿ(ಜು.06): ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾಗೆ ಮತ್ತೊಂದು ಬಲಿಯಾಗಿದೆ. ಈ ಮೂಲಕ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ರಾಯಬಾಗ ತಾಲೂಕಿನ ಕುಡಚಿ ಗ್ರಾಮದ ವೃದ್ಧ ಮೃತಪಟ್ಟಿದ್ದಾನೆ. ಇದೆ ವೇಳೆ ಕೊರೋನಾ ಆರ್ಭಟ ಮುಂದುವರಿದಿದ್ದು, ಶನಿವಾರ ಮೂವರು ಪೊಲೀಸ್‌ ಪೇದೆ, ಯೋಧ, ಬಳೆಗಾರ್ತಿ ಸೇರಿದಂತೆ ಒಟ್ಟು 27 ಜನರಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 383ಕ್ಕೆ ಏರಿಕೆಯಾಗಿದೆ.

ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಎಆರ್‌ನ ಮೂವರು ಪೇದೆಗಳಿಗೆ ಸೋಂಕು ಇರುವುದು ದೃಢಪಟ್ಟಿದೆ. ಬೆಳಗಾವಿಯ ಪೊಲೀಸ್‌ ವಸತಿ ಗೃಹದಲ್ಲಿ ಈ ಪೇದೆಗಳು ವಾಸವಾಗಿದ್ದರು. ವಸತಿ ಗೃಹಗಳಲ್ಲಿ ಪೇದೆಗಳ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ ಮಾಡುವಸಾಧ್ಯತೆಗಳಿವೆ. ಬೆಳಗಾವಿ ನಗರದ ಮಾಳಿ ಗಲ್ಲಿಯ ಬಳೆಗಾರ್ತಿ ಮತ್ತು ಕರವಿನಕೊಪ್ಪ ಗ್ರಾಮದ ಯೋಧ ಮತ್ತು ಕಾಗವಾಡ ತಾಲೂಕಿನ ಶೇಡಬಾಳ ಗ್ರಾಮದ ಒಂದೇ ಕುಟುಂಬದ ಐವರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ.

ಬೆಳಗಾವಿ: ಗೆಳತಿ ಮದುವೆಗೆ ಹೋಗಿದ್ದ ಯುವತಿಗೆ ಕೊರೋನಾ, ಗ್ರಾಮವೇ ಸೀಲ್ ಡೌನ್

ಅಥಣಿ ತಾಲೂಕಿನಲ್ಲಿ 12, ಬೆಳಗಾವಿ ನಗರ ಸೇರಿದಂತೆ ತಾಲೂಕಿನಲ್ಲಿ 11, ಖಾನಾಪುರ ತಾಲೂಕಿನಲ್ಲಿ 1, ಸವದತ್ತಿ ತಾಲೂಕಿನಲ್ಲಿ 3 ಹೀಗೆ ಒಟ್ಟು 27 ಕೊರೋನಾ ಪಾಸಿಟಿವ್‌ ಪ್ರಕರಣ ದೃಢವಾಗಿವೆ. ಜಿಲ್ಲೆಯಲ್ಲಿ ಈವರೆಗೆ 383 ಪಾಸಿಟಿವ್‌ ಪ್ರಕಣಗಳು ದೃಢವಾಗಿವೆ. ಈವರೆಗೆ ಜಿಲ್ಲೆಯಲ್ಲಿ 27434 ಸ್ಯಾಂಪಲ್‌ ಪರೀಕ್ಷೆ ನಡೆಸಲಾಗಿದೆ. ಸದ್ಯ ಜಿಲ್ಲಾಡಳಿತ ಕೂಡ ಕೊರೋನಾ ನಿಯಂತ್ರಣಕ್ಕೆ ಹರಸಾಹಸ ಮಾಡುತ್ತಿದ್ದು, ಎಲ್ಲಡೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಬೆಳಗಾವಿ ತಾಲೂಕಿನ ಕೆಎಚ್‌ ಕಂಗ್ರಾಳಿಯಲ್ಲಿ 3 ವರ್ಷದ ಬಾಲಕಿಗೆ, ಬೆಳಗಾವಿಯ ನೆಹರು ನಗರದ 31 ವರ್ಷದ ಪುರುಷ, ಸುಭಾಷ ನಗರದ 27 ವರ್ಷದ ಪುರುಷ, 26 ವರ್ಷದ ಪುರುಷ, ಬೆಳಗಾವಿಯ 58 ವರ್ಷದ ಮಹಿಳೆ, 75 ವರ್ಷದ ಪುರುಷ,ಕಡೋಲಿಯ 63 ವರ್ಷದ ಮಹಿಳೆ, 36 ವರ್ಷದ ಪುರುಷ, 27 ವರ್ಷದ ಮಹಿಳೆ, ಖಾಸಬಾಗದ 52 ವರ್ಷದ ಮಹಿಳೆ,

ಖಾನಾಪುರ ತಾಲೂಕಿನ ಕೊರವಿನಕೊಪ್ಪ ಗ್ರಾಮದ 30 ವರ್ಷದ ಪುರುಷ, ಸವದತ್ತಿ ತಾಲೂಕಿನ ಕರಿಕಟ್ಟಿಗ್ರಾಮದ 18 ವರ್ಷದ ಯುವತಿ, 14 ವರ್ಷದ ಬಾಲಕ, 35 ವರ್ಷದ ಮಹಿಳೆ, ಅಥಣಿ ತಾಲೂಕಿನ ಗುಂಡೇವಾಡಿಯ 61 ವರ್ಷದ ವೃದ್ಧ, ಐನಾಪುರ ಗ್ರಾಮದ 20 ವರ್ಷದ ಮಹಿಳೆ, 18 ವರ್ಷದ ಯುವಕ, ಜುಂಜರವಾಡ ಗ್ರಾಮದ 53 ವರ್ಷದ ಪುರುಷ , ಚಿಕ್ಕಟ್ಟಿಯ 20 ವರ್ಷದ ಮಹಿಳೆ, ಸಂಕೊನಟ್ಟಿಯ 38 ವರ್ಷದ ಪುರುಷ, ಶೇಡಬಾಳದ 55 ವರ್ಷದ ಮಹಿಳೆ, 6 ವರ್ಷದ ಬಾಲಕ, 11 ವರ್ಷದ ಬಾಲಕಿ, 62 ವರ್ಷದ ಪುರುಷ, 34 ವರ್ಷದ ಮಹಿಳೆ, ಅಥಣಿಯ 83 ವರ್ಷದ ಪುರುಷನಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.