ಚಿಕ್ಕಮಗಳೂರು: ಸಿ.ಟಿ. ರವಿ ರಿಲೀಸ್‌ ಸಂಭ್ರಮ ವೇಳೆ ಡ್ರೋನ್‌ ಹಾರಿಸಿದ್ದ ವ್ಯಕ್ತಿ ಹೃದಯಾಘಾತಕ್ಕೆ ಬಲಿ

ಡ್ರೋನ್‌ ಕ್ಯಾಮರದಲ್ಲಿ ಸಂಭ್ರಮಾಚರಣೆಯನ್ನು ಸೆರೆ ಹಿಡಿಯುತ್ತಿದ್ದ ಸಂದರ್ಭದಲ್ಲಿಯೇ ರಾತ್ರಿ ಸುಮಾರು 12.30ರ ಸಮಯದಲ್ಲಿ ಅವಿನಾಶ್ ಕುಸಿದು ಬಿದ್ದಿದ್ದರು. ಅವರಿಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. 

26 Years Old Young Man Dies Due to Heart Attack in Chikkamagaluru grg

ಚಿಕ್ಕಮಗಳೂರು(ಡಿ.28):  ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಯವರು ಬಿಡುಗಡೆಯಾಗಿ ಚಿಕ್ಕಮಗಳೂರಿಗೆ ಆಗಮಿಸಿ ದಾಗ ಕಾರ್ಯಕರ್ತರು ನಡೆಸಿದ ಸಂಭ್ರಮಾಚರಣೆಯನ್ನು ಡ್ರೋನ್‌ ಕ್ಯಾಮರ ಮೂಲಕ ಸೆರೆಹಿಡಿಯುತ್ತಿದ್ದ ವೇಳೆ ಹೃದಯಾಘಾತದಿಂದ ದಿಢೀ‌ರ್ ಕುಸಿದು ಬಿದ್ದಿದ್ದ ಯುವ ಛಾಯಾಗ್ರಾಹಕ ಅವಿನಾಶ್ (26) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. 

ಡ್ರೋನ್‌ ಕ್ಯಾಮರದಲ್ಲಿ ಸಂಭ್ರಮಾಚರಣೆಯನ್ನು ಸೆರೆ ಹಿಡಿಯುತ್ತಿದ್ದ ಸಂದರ್ಭದಲ್ಲಿಯೇ ರಾತ್ರಿ ಸುಮಾರು 12.30ರ ಸಮಯದಲ್ಲಿ ಅವಿನಾಶ್ ಕುಸಿದು ಬಿದ್ದಿದ್ದರು. ಅವರಿಗೆ ಹೃದಯಾಘಾತವಾಗಿತ್ತು ಎನ್ನಲಾಗಿದೆ. ಅವರನ್ನು ತಕ್ಷಣ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಶಿವಮೊಗ್ಗ ಕಿಮ್ಸ್ ಆಸ್ಪತ್ರೆ, ಶಿವಮೊಗ್ಗದಿಂದ ಮೈಸೂರು ನಾರಾಯಣ ಹೃದಯಾಲಯಕ್ಕೆ ನಂತರ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. 

Chikkamagaluru: 3 ದುಬಾರಿ ಮದ್ಯದ ಬಾಟಲಿಗಳನ್ನು ಕಳವು ಮಾಡಿದ್ದ ಅಂತರ್ ಜಿಲ್ಲಾ ಕಳ್ಳರ ಬಂಧನ!

ಅವಿನಾಶ್ ಮೂಲತಃ ಹಳೇಬೀಡು ಸಮೀಪದ ರಾಜನಶಿರಿಯೂರು ಗ್ರಾಮದವರು. ಅವರು ಬಹುತೇಕ ಮೂಡಿಗೆರೆಯ ತಮ್ಮ ಸಂಬಂಧಿಕರ ಮನೆಯಲ್ಲಿಯೇ ಇದ್ದು ಅಲ್ಲಿಂದ ಅವರ ಸಂಬಂಧಿ ಸುನಿಲ್ ಜೊತೆ ಛಾಯಾ ಗ್ರಾಹಕರಾಗಿ ವೃತ್ತಿ ಜೀವನ ಆರಂಭಿಸಿದ್ದರು.ಉತ್ತಮ ಛಾಯಾಗ್ರಾಹಕ ಮತ್ತು ವಿಡಿಯೋಗ್ರಾಫರ್‌ ಆಗಿ ಪರಿಣತಿ ಹೊಂದಿದ್ದರು. ಡ್ರೋನ್‌ ಅವಿ ಎಂದೇ ಸ್ನೇಹಿತರ ಬಳಗದಲ್ಲಿ ಹೆಸರು ಪಡೆದಿದ್ದ ಅವಿನಾಶ್ ಅವರು ತಾಯಿ, ಮೂವರು ಸಹೋದರಿಯರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕುಟುಂಬದವರು ಸ್ನೇಹಿತರು ತೀವ್ರ ಸಂತಾಪ ಸೂಚಿಸಿದ್ದಾರೆ. ಅಂತಿಮ ಸಂಸ್ಕಾರವನ್ನು ಅವರ ಹುಟ್ಟೂರಾದ ರಾಜನಶಿರಿಯೂರಿನಲ್ಲಿ ನಡೆಯಿತು.

Latest Videos
Follow Us:
Download App:
  • android
  • ios