ವಿಜಯಪುರ(ಮಾ.13): ಕೊರೋನಾ ವೈರಸ್‌ ಭೀತಿಯಿಂದಾಗಿ ಕೋಳಿ ಫಾರ್ಮ್ ಮಾಲೀಕರೊಬ್ಬರು ತಮ್ಮ ಕೋಳಿಗಳನ್ನು ಮಣ್ಣಿನಲ್ಲಿ ಜೀವಂತವಾಗಿ ಸಮಾಧಿ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನಾ ವೈರಸ್‌ ಭೀತಿ ವಿಜಯಪುರ ಜಿಲ್ಲೆಯ ಕೋಳಿ ಫಾಮ್‌ರ್‍ ಮಾಲೀಕರನ್ನು ಕಂಗೆಡಿಸಿದೆ. ಕುಟುಂಬದ ನಿರ್ವಹಣೆಗಾಗಿ ಜಿಲ್ಲೆಯಲ್ಲಿ ಹಲವಾರು ಜನರು ಕೋಳಿ ಮಾಂಸ, ಮೊಟ್ಟೆಮಾರುವ ಸಲುವಾಗಿ ಕೋಳಿ ಸಾಕಾಣಿಕೆ ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಗ್ರಾಮದ ಹೊರವಲಯ ಹಾಗೂ ಹೊಲಗಳಲ್ಲಿ ಕೋಳಿ ಫಾಮ್‌ರ್‍ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿರುವುದು ಅಲ್ಲಲ್ಲಿ ನಡೆದುಕೊಂಡು ಬಂದಿದೆ. ಆದರೆ ಕೊರೋನಾ ವೈರಸ್‌ ಭೀತಿ ಕೋಳಿ ಫಾಮ್‌ರ್‍ ಮಾಲೀಕರ ಕೋಳಿ, ಮೊಟ್ಟೆಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

 

ಕೋಳಿ ಮಾಂಸ, ಮೊಟ್ಟೆತಿನ್ನುವುದರಿಂದ ಕೊರೋನಾ ವೈರಸ್‌ ಹರಡುವ ಸಂಭವವಿದೆ ಎಂದು ಕಾಡ್ಗಿಚ್ಚಿನಂತೆ ಸುದ್ದಿ ಹರಡಿದ ಪರಿಣಾಮವಾಗಿ ಕೋಳಿ ಮಾಂಸ, ಮೊಟ್ಟೆತಿನ್ನುವವರು ಅದನ್ನು ತ್ಯಜಿ​ಸಿ​ದ್ದಾರೆ. ಹೀಗಾಗಿ ಕೋಳಿಗಳನ್ನು ಪುಕ್ಕಟೆಯಾಗಿ ನೀಡಿದರೂ ಯಾರು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಇದರಿಂದಾಗಿ ಕೋಳಿ ಫಾಮ್‌ರ್‍ ಮಾಲೀಕರು ಝರ್ಜಿತರಾಗಿದ್ದಾರೆ.

ಇದ​ರಿಂದಾ​ಗಿಯೇ ಜಿಲ್ಲೆಯ ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ಗುಡೇಸಾಬ ಜಮಾದಾರ ಎಂಬುವರು ತಮ್ಮ ಹೊಲದಲ್ಲಿನ ಕೋಳಿ ಫಾಮ್‌ರ್‍ನಲ್ಲಿದ್ದ 2500 ಕೋಳಿಗಳನ್ನು ಹೊಲದಲ್ಲಿ ಜೆಸಿಬಿ ಮಷಿನ್‌ನಿಂದ ಮೂರ್ನಾಲ್ಕು ಆಳದ ಗುಂಡಿ ತೋಡಿ ಮುಚ್ಚಿ ಹಾಕಿದ್ದಾರೆ. ಕೋಳಿಗಳನ್ನು ಉಚಿತವಾಗಿ ನೀಡಿದರೂ ಮಾರುಕಟ್ಟೆಯಲ್ಲಿ ಯಾರೂ ಕೇಳುವವರೇ ಇಲ್ಲದ ಪರಿಣಾಮ ವಿಧಿಯಿಲ್ಲದೆ ಈ ಕೃತ್ಯಕ್ಕೆ ಕೈ ಹಾಕಬೇಕಾಯಿತು ಎಂದು ಕೋಳಿ ಮಾಲೀಕ ಗುಡೇಸಾಬ ನೊಂದು ಹೇಳು​ತ್ತಾರೆ.

 

ಪ್ರತಿ ಕೆಜಿ ಕೋಳಿ ಮಾಂಸವನ್ನು 160- 170ಗಳಿಗೆ ಖರೀದಿಸಲಾಗುತ್ತಿತ್ತು. ಆದರೆ ಈಗ ಕೋಳಿಗಳನ್ನು ಉಚಿತವಾಗಿ ನೀಡಿದರೂ ಯಾರು ತೆಗೆದುಕೊಳ್ಳಲು ಮುಂದೆ ಬಾರದ್ದರಿಂದಾಗಿ ಗುಡೇಸಾಬ ಅವರು ಕೋಳಿಗಳ ಮಾರಣ ಹೋಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಕೋಳಿಗಳ ಮಾರಣ ಹೋಮ ಮಾಡುವ ಸಂದಭÜರ್‍ದಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಯುವಕನೊಬ್ಬ ಕಾಮೆಂಟ್ರಿ ಹೇಳಿದ ಹಾಗೆ ವಿಡಿಯೋ ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿ ಬಿಡಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಭೀತಿ ಜನರನ್ನು ಮತ್ತಷ್ಟುತಲ್ಲಣಗೊಳಿಸಿದೆ.