Asianet Suvarna News Asianet Suvarna News

ಚಿಕ್ಕಮಗಳೂರು: ಎತ್ತಿನ‌ಗಾಡಿನ ಸ್ಪರ್ಧೆಯಲ್ಲಿ ನೊಗ ಬಡಿದು ಯುವಕ ಸಾವು

ಅಜ್ಜಂಪುರದಲ್ಲಿ ಜೋಡಿ ಎತ್ತಿನ ಗಾಡಿ ಸ್ಪರ್ಧೆ ನಡೆಯುತ್ತಿತ್ತು. ಸ್ಪರ್ಧೆಯ ಕೊನೆಯಲ್ಲಿ ಎತ್ತುಗಳ ನೊಗ ಹಿಡಿದು ನಿಲ್ಲಿಸಲು ಮುಂದಾದಾಗ ನಡೆದ ಘಟನೆ. 

25 Year Old Young Man Dies in Bullock Cart Competition in Chikkamagaluru grg
Author
First Published Sep 10, 2023, 12:00 AM IST

ಚಿಕ್ಕಮಗಳೂರು(ಸೆ.10): ಎತ್ತಿನ‌ಗಾಡಿನ ಸ್ಪರ್ಧೆಯಲ್ಲಿ ನೊಗ ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಿನ್ನೆ(ಶನಿವಾರ) ನಡೆದಿದೆ. ಮೃತ ಯುಕವನ್ನ ಭರತ್ (25) ಎಂದು ಗುರುತಿಸಲಾಗಿದೆ. 

ಅಜ್ಜಂಪುರದಲ್ಲಿ ಜೋಡಿ ಎತ್ತಿನ ಗಾಡಿ ಸ್ಪರ್ಧೆ ನಡೆಯುತ್ತಿತ್ತು. ಸ್ಪರ್ಧೆಯ ಕೊನೆಯಲ್ಲಿ ಎತ್ತುಗಳ ನೊಗ ಹಿಡಿದು ನಿಲ್ಲಿಸಲು ಮುಂದಾದಾಗ ಘಟನೆ ನಡೆದಿದೆ. 

ಅಕ್ರಮ ಭೂ ಮಂಜೂರಾತಿ ಹಗರಣ: ಬಗೆದಷ್ಟು ಅಕ್ರಮಗಳು ಬಯಲು, ತನಿಖಾ ತಂಡಕ್ಕೆ ಶಾಕ್ ..!

ಫೈನಲ್ ಸುತ್ತಿನ ಅಂತಿಮ ಸ್ಪರ್ಧೆಯಲ್ಲಿ ನೊಗ ಹಿಡಿಯಲು ಭರತ್ ಹೋಗಿದ್ದ ಈ ವೇಳೆ ವೇಗವಾಗಿದ್ದ ಎತ್ತಿನ ಗಾಡಿ ನೊಗ ತಲೆಗೆ ಹೊಡೆದು ಸಾವನ್ನಪ್ಪಿದ್ದಾನೆ. ದುರ್ಘಟನಯಲ್ಲಿ ಅಜ್ಜಂಪುರ ಮೂಲದ ಭರತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. 

Follow Us:
Download App:
  • android
  • ios