Asianet Suvarna News Asianet Suvarna News

ಮೌಲ್ವಿಗಳ ಸಂಪರ್ಕದಲ್ಲಿದ್ದ 25 ಮಂದಿ ಹೋಂ ಕ್ವಾರೆಂಟೈನ್‌

ಕೊರೋನಾ ವೈರಸ್‌ ತಡೆಗೆ ಹಲವು ರೀತಿಯ ಆತಂಕಗಳು ಎದುರಾಗಿವೆ. ಜಿಲ್ಲಾ, ತಾಲೂಕು ಆಡಳಿತಗಳು ಅವಿರತವಾಗಿ ನಿಗಾ ವಹಿಸಿಕೊಂಡಿದ್ದರೂ ಮಾ. 23ರಂದು ದೆಹಲಿ ಮೂಲದ 10 ಮಂದಿಯ ಮೌಲ್ವಿಗಳ ತಂಡ ಪಟ್ಟಣಕ್ಕೆ ಬಂದು ಹೋದ ವೇಳೆ ಅವರ ಸಂಪರ್ಕದಲ್ಲಿದ್ದ 25 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

 

25 under home quarantine in Mandya
Author
Bangalore, First Published Apr 5, 2020, 11:05 AM IST

ಮಂಡ್ಯ(ಏ.05): ಕೊರೋನಾ ವೈರಸ್‌ ತಡೆಗೆ ಹಲವು ರೀತಿಯ ಆತಂಕಗಳು ಎದುರಾಗಿವೆ. ಜಿಲ್ಲಾ, ತಾಲೂಕು ಆಡಳಿತಗಳು ಅವಿರತವಾಗಿ ನಿಗಾ ವಹಿಸಿಕೊಂಡಿದ್ದರೂ ಮಾ. 23ರಂದು ದೆಹಲಿ ಮೂಲದ 10 ಮಂದಿಯ ಮೌಲ್ವಿಗಳ ತಂಡ ಪಟ್ಟಣಕ್ಕೆ ಬಂದು ಹೋದ ವೇಳೆ ಅವರ ಸಂಪರ್ಕದಲ್ಲಿದ್ದ 25 ಮಂದಿಯನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಉಪವಿಭಾಗಾಧಿಕಾರಿ ಸೂರಜ್‌ ನೇತೃತ್ವದ ತಂಡ ಹಲವು ಮಸೀದಿಗಳಿಗೆ ಕಳೆದ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿ ವೇಳೆ ಮೌಲ್ವಿಗಳು ದೆಹಲಿ ಮೂಲದ ಮೌಲ್ವಿಗಳು ಮಾ. 23ರಿಂದ 29ರವರೆಗೆ ಮಳವಳ್ಳಿಯಲ್ಲೇ ವಾಸ್ತವ್ಯ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕದಲ್ಲಿದ್ದ ಇಲ್ಲಿನ 25 ನಿವಾಸಿಗಳನ್ನು ತಾಲೂಕಿನ ಬಾಚನಹಳ್ಳಿ ಮೊರಾರ್ಜಿ ವಸತಿ ಶಾಲೆಯ ಹೋಂ ಕ್ವಾರಂಟೈನ್‌ ಇಡಲಾಗಿದೆ.

10 ಮಂದಿ ಮೌಲ್ವಿಗಳು:

ಈ ವಿಷಯವನ್ನು ತಹಸೀಲ್ದಾರ್‌ ಕೆ. ಚಂದ್ರಮೌಳಿ ಬಹಿರಂಗ ಮಾಡಿದ್ದಾರೆ. ಇತ್ತೀಚೆಗೆ ದೆಹಲಿ ಮೂಲದ 10 ಮಂದಿ ಮೌಲ್ವಿಗಳು ಮೊದಲು ಬಂದು ನಾಗಮಂಗಲಕ್ಕೆ ಬಂದು ಕೆಲ ದಿನಗಳ ಕಾಲ ಇದ್ದು ನಂತರ ಪಟ್ಟಣದ ಮಸೀದಿಯೊಂದರಲ್ಲಿ ಒಂದು ವಾರಗಳ ಕಾಲ ವಾಸ ಇದ್ದರು. ತದನಂತರ ಬನ್ನೂರಿಗೆ ತೆರಳಿ ಅಲ್ಲಿಂದ ಮೈಸೂರಿಗೆ ಹೋಗುವಾಗ ಮಾರ್ಗ ಮಧ್ಯೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡಿದಾಗ ಅನುಮಾನದ ಮೇಲೆ 10 ಮಂದಿ ಮೌಲ್ವಿಗಳನ್ನು ತಪಾಸಣೆ ಮಾಡಿ ನಂತರ ಕ್ವಾರೆಂಟೈನ್‌ ಮಾಡಲಾಗಿದೆ ಎಂದು ಹೇಳಿದರು.

ಡಿಸಿ ನಿರ್ದೇಶನ:

ಈ ಬಗ್ಗೆ ಖಚಿತ ಮಾಹಿತಿ ಪಡೆದ ಎಸಿ ಸೂರಜ್‌, ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ತಾಪಂ ಇಒ ಬಿ.ಎಸ್‌. ಸತೀಶ್‌, ಪುರಸಭೆ ಮುಖ್ಯಾಧಿಕಾರಿ ಗಂಗಾಧರ್‌, ಸರ್ಕಲ್ ಇನ್ಸ್‌ಪೆಕ್ಟರ್‌ ರಮೇಶ್‌ ಅವರ ತಂಡ ಪಟ್ಟಣದ ಎಲ್ಲ ಮಸೀದಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಎಲ್ಲ ಮೌಲ್ವಿಗಳ ಬಗ್ಗೆ ಮಾಹಿತಿ ಪಡೆದು ಅವರ ಜೊತೆ ಒಡನಾಟ ಹೊಂದಿದ್ದ ಏಳು ಕುಟುಂಬದ 25 ಮಂದಿ ಸದಸ್ಯರನ್ನು ಡಿಸಿ ನಿರ್ದೇಶನ ಮೇರೆಗೆ ಹೋಂ ಕ್ವಾರಂಟೈನ್‌ಗೆ ಒಪ್ಪಿಸಲಾಗಿದೆ.

25 under home quarantine in Mandya

ಅಪಾರ ಪೊಲೀಸ್‌ ವರಿಷ್ಟಾಧಿಕಾರಿ ಶೋಭರಾಣಿ ಸಹ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿಗಳಿಗೆ ಔಷಧಿ ಸಿಂಪಡಿಸುವಂತೆ ಸೂಚನೆ ನೀಡಿದರು. ನಂತರ ಪಟ್ಟಣದ ಪೊಲೀಸ… ಠಾಣೆಗೆ ಭೇಟಿ ನೀಡಿ ಮೌಲ್ವಿಗಳ ಬಗ್ಗೆ ಮಾಹಿತಿ ಕಲೆ ಕಾನೂನು ಸುವ್ಯವಸ್ಥೆ ಕುರಿತು ಚರ್ಚೆ ನಡೆಸಿದರು.

ಹೋಂ ಕ್ವಾರಂಟೈನ್‌ಗೆ ಸ್ಥಳೀಯರ ವಿರೋಧ:

ಮೌಲ್ವಿಗಳ ಜೊತೆ ಸಂಪರ್ಕದಲ್ಲಿದ್ದ ಏಳು ಕುಟುಂಬದ 25 ಮಂದಿಯ ಸದಸ್ಯರನ್ನು ಮೊದಲು ಪಟ್ಟಣದ ಸಿದ್ಧಾರ್ಥನಗರದ ಬಳಿಯ ಹಿಂದುಳಿದ ವರ್ಗದ ಮೆಟ್ರಿಕ… ಪೂರ್ವ ಬಾಲಕರ ವಸತಿ ನಿಲಯಕ್ಕೆ ಸ್ಥಳಾಂತರ ನಿರ್ಧರಿಸಲಾಯಿತು. ಆಗ ಅಲ್ಲಿನ ಸ್ಥಳೀಯ ನಿವಾಸಿಗಳು ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ, ಗಲಾಟೆ ಮಾಡಿದರು.

ಸೋಂಕಿತನ ಜತೆ ಉಸಿರಾಡಿದ್ರೂ ಕೊರೋನಾ ವೈರಸ್‌ ಬರುತ್ತೆ!

ಈ ವೇಳೆ ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್‌ ರಮೇಶ್‌ ಅವರ ತಂಡ ಗುಂಪುಗೂಡಿ, ಚರ್ಚೆ ಮಾಡಿ ಗಲಾಟೆ ಮುಂದಾಗಿದ್ದ ಸ್ಥಳೀಯ ನಿವಾಸಿಗಳನ್ನು ಚದುರಿಸಿದರು. ನಂತರ ತಹಸೀಲ್ದಾರ್‌ ಕೆ. ಚಂದ್ರಮೌಳಿಯವರು ಕೊಠಡಿಗಳ ಕೊರತೆ ಇರುವ ಹಿನ್ನೆಲೆಯಲ್ಲಿ 25 ಮಂದಿಯನ್ನು ತಾಲೂಕಿನ ಬಾಚನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಯಿತು. ಶಾಲೆಯ ಬಳಿ ವೈದ್ಯರ ಮತ್ತು ಪೊಲೀಸರ ತಂಡವನ್ನು ನಿಯೋಜಿಸಲಾಗಿದೆ.

Follow Us:
Download App:
  • android
  • ios