ಕೆಎಸ್ಸಾರ್ಟಿಸಿ ನೌಕರರಿಗೆ 25 ಕಿಲೋ ರೇಷನ್‌

12 ದಿನದಿಂದ ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ನೌಕರರು ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದು,  ಇದೀಗ ನೌಕರರ ಕುಟುಂಬಕ್ಕೆ  25 ಕೆಜಿ ಅಕ್ಕಿ ನೀಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ. 

25 kg ration for KSRTC Employees in tumakuru snr

ತುಮಕೂರು (ಏ.19):  ತುಮಕೂರು ತಾಲೂಕು ವ್ಯಾಪ್ತಿಯಲ್ಲಿ 250ಕ್ಕೂ ಹೆಚ್ಚು ಸಾರಿಗೆ ನೌಕರರ ಕುಟುಂಬಗಳಿದ್ದು ವೈಯಕ್ತಿಕವಾಗಿ ಪ್ರತಿ ಕುಟುಂಬಕ್ಕೆ 25 ಕಿಲೋ ರೇಷನ್‌ ನೀಡುವುದಾಗಿ ಶಾಸಕ ಡಿ.ಸಿ. ಗೌರಿಶಂಕರ್‌ ಭರವಸೆ ನೀಡಿದರು.

ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರ ಒಕ್ಕೂಟ ಹಾಗೂ ತುಮಕೂರು ತಾಲೂಕು ಸಾರಿಗೆ ಇಲಾಖೆ ನೌಕರರು ಶಾಸಕ ಡಿ.ಸಿ.ಗೌರಿಶಂಕರ್‌ ಅವರನ್ನು ತಮ್ಮ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ವೇತನ ಸಮಸ್ಯೆ ಬಗ್ಗೆ ಗಮನ ಸೆಳೆದ ವೇಳೆ ಅವರು ಮೇಲಿನಂತೆ ನುಡಿದರು.

ರಾಜ್ಯ ಸರ್ಕಾರ ಡಿಸೆಂಬರ್‌ನಲ್ಲಿ ನಡೆದ ಸಾರಿಗೆ ನೌಕರರ ಸಂಧಾನ ಸಭೆಯಲ್ಲಿ 9 ಬೇಡಿಕೆ ಈಡೇರಿಸುವುದಾಗಿ ತಿಳಿಸಿ ಮೂರು ತಿಂಗಳ ಗಡುವು ಪಡೆದಿತ್ತು. ಆದರೆ ಆರು ತಿಂಗಳಾದರೂ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಿಲ್ಲ, ಮಾರ್ಚ್ ತಿಂಗಳ ಸಂಬಳ ನೀಡಿಲ್ಲ. ಹಬ್ಬ ಮಾಡದೆ ಸಾರಿಗೆ ನೌಕರರ ಕುಟುಂಬಗಳು ಪರಿತಪಿಸಿವೆ. ಸರ್ಕಾರವೇ ಭರವಸೆ ಕೊಟ್ಟು ಈಗ ಮಾತಿಗೆ ತಪ್ಪಿದರೆ ನೌಕರರ ಗತಿ ಏನಾಗಬೇಕು ಎಂದು ಖಾರವಾಗಿ ಪ್ರಶ್ನಿಸಿದರು.

ಕೆಲಸಕ್ಕೆ ಮತ್ತಷ್ಟು ನೌಕರರು: 7500 ಬಸ್‌ಗಳ ಸಂಚಾರ

ಸಾರಿಗೆ ನೌಕರರ ಹೋರಾಟಕ್ಕೆ ಜೆಡಿಎಸ್‌ ಹೈಕಮಾಂಡ್‌ ಬೆಂಬಲ ಸೂಚಿಸಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಸಹ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಅವರ ಆದೇಶದಂತೆ ನೌಕರರ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಜೊತೆಗೆ ನಮ್ಮ ತಾಲೂಕಿನಲ್ಲಿ 250 ಕ್ಕೂ ಹೆಚ್ಚು ನೌಕರರಕುಟುಂಬಗಳಿದ್ದು ಈ ಎಲ್ಲಾ ಕುಟುಂಬಗಳಿಗೂ ವೈಯಕ್ತಿಕವಾಗಿ 25 ಕಿಲೋ ರೇಷನ್‌ ವಿತರಿಸಲಾಗುವುದು. ನೌಕರರು ಯಾವುದೇ ಕಾರಣಕ್ಕೂ ಎದೆಗುಂದಬಾರದು ನಿಮ್ಮ ಜೊತೆ ನಾವಿದ್ದೇವೆ ಎಂದು ಆತ್ಮಸ್ತೈರ್ಯ ತುಂಬಿದರು.

ಡಿಸಿ ಮೂಲಕ ಸರ್ಕಾರಕ್ಕೆ ಶಾಸಕರ ಮನವಿ:  ಸಾರಿಗೆ ನೌಕರರ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ ಗೌರೀಶಂಕರ್‌ ಸಾರಿಗೆ ನೌಕರರ ಸಮಸ್ಯೆ ಶೀಘ್ರವಾಗಿ ಪರಿಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಾರಿಗೆ ನೌಕರರು ಶಾಸಕ ಗೌರಿಶಂಕರ್‌ ಅವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು.

ಅವರ ಮನವಿಗೆ ಸ್ಪಂದಿಸಿದ ಶಾಸಕರು ಸಾರಿಗೆ ನೌಕರರು ನೀಡಿದ ಮನವಿಯನ್ನು ಜಿಲ್ಲಾಧಿಕಾರಿ ವೈ ಎಸ್‌ ಪಾಟೀಲ್‌ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

Latest Videos
Follow Us:
Download App:
  • android
  • ios