Asianet Suvarna News Asianet Suvarna News

ತುಮಕೂರು: ನೆರೆ ಸಂತ್ರಸ್ತರಿಗಾಗಿ 25,000 ಚಪಾತಿ, ಇತರ ಸಾಮಾಗ್ರಿ

ನೆರೆ ಸಂತ್ರಸ್ತರಿಗಾಗಿ ತುಮಕೂರಿನ ಸನ್‌ ರೈಸ್‌ ಸೌಹಾರ್ದ- ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸ್ನೇಹಿತರು ಪರಿಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿದ್ದಾರೆ. ಸಂತ್ರಸ್ತರಿಗಾಗಿ 25,000 ಚಪಾತಿಗಳನ್ನು ತಯಾರಿಸಲಾಗಿದ್ದು, ಹಾಗೆಯೇ ಬಟ್ಟೆ, ಚಾಪೆ, ಹೊದಿಕೆಯಂತಹ ಇತರ ಸಮಾನಗ್ರಿಗಳನ್ನೂ ಸಂಗ್ರಹಿಸಲಾಗಿದೆ.

25,000 Chapathi prepared for Flood Victims
Author
Bangalore, First Published Aug 14, 2019, 12:36 PM IST

ತುಮಕೂರು(ಆ.14): ನಗರದ ಕ್ಯಾತ್ಸಂದ್ರದಲ್ಲಿರುವ ಸನ್‌ ರೈಸ್‌ ಸೌಹಾರ್ದ- ಪತ್ತಿನ ಸಹಕಾರ ಸಂಘ ನಿಯಮಿತ ಹಾಗೂ ಸ್ನೇಹಿತರು ನೆರೆ ಪರಿಹಾರ ವಸ್ತುಗಳನ್ನು ಸಂಗ್ರಹಿಸಿದರು.

ಚಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನೆರೆ ಸಂತ್ರಸ್ತರಿಗೆ 25 ಸಾವಿರ ಚಪಾತಿ, ಬಿಸ್ಕೆಟ್‌, ವಾಟರ್‌ ಬಾಟಲ್‌, ಚಾಪೆ, ಹೊದಿಕೆ, ಮಹಿಳೆ ಪುರುಷ, ಹಾಗೂ ಮಕ್ಕಳಿಗೆ ಉಡುಪುಗಳು 5 ಪ್ಯಾಕೆಟ್‌ ಅಕ್ಕಿ, ಔಷಧಿ ಸೇರಿದಂತೆ ಸಾಮಗ್ರಿಗಳನ್ನು ಹೊತ್ತು ಹೊರಡುವ ವಾಹನಕ್ಕೆ ಎಸ್‌ಐಟಿ ಆವರಣದಿಂದ ಶಾಸಕ ಜ್ಯೋತಿಗಣೇಶ್‌ ಚಾಲನೆ ನೀಡಿದರು.

ಪಾಲಿಕೆ ಸದಸ್ಯ ಬಿ.ಜಿ ಕೃಷ್ಣಪ್ಪ, ಸಂಘದ ಅಧ್ಯಕ್ಷ ಸಿ.ಟಿ ವಿಜಯ್‌, ಉಪಾಧ್ಯಕ್ಷ ಚಂದ್ರಮೋಹನ್‌ ರೆಡ್ಡಿ ಸೇರಿದಂತೆ ಮತ್ತಿತರು ಇದ್ದಾರೆ.

Follow Us:
Download App:
  • android
  • ios