ಕೊರೋ​ನಾ ಭೀತಿ: ಕೊಪ್ಪಳದಲ್ಲಿ 223 ವರದಿಯೂ ನೆಗೆಟಿವ್

ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೂ 300ಕ್ಕೂ ಹೆಚ್ಚು ಸ್ಯಾಂಪಲ್‌ಗಳ ಟೆಸ್ಟ್‌| ವಿಶೇಷ ಪ್ರಕರಣದಡಿಯಲ್ಲಿಯೂ ಸ್ಯಾಂಪಲ್‌ ಟೆಸ್ಟ್‌ ಮಾಡಿದಾಗಲೂ ನೆಗೆಟಿವ್‌ ಬಂದಿದೆ| ಹೊಸಪೇಟೆಯಲ್ಲಿ 10 ಪ್ರಕರಣಗಳು ಪಾಸಿಟಿವ್‌ ಬಂದಿರುವುದರಿಂದ ಸಮಸ್ಯೆ| ಕೊಪ್ಪಳ ಮತ್ತು ಹೊಸಪೇಟೆ ಮಧ್ಯೆ ಸಂಚಾರ ಇದ್ದು, ಭಾರಿ ಕಟ್ಟೆಚ್ಚರ|

223 Persons Coronavirus Negative Report in Koppal district

ಕೊಪ್ಪಳ(ಏ.20): ಕಳೆದೆರಡು ದಿನಗಳಲ್ಲಿ ಪ್ರಯೋಗಾಲಯಕ್ಕೆ ಕಳುಹಿಸಿದ್ದ 333 ಸ್ಯಾಂಪಲ್‌ಗಳ ಪೈಕಿ 223 ಸ್ಯಾಂಪಲ್‌ಗಳು ನೆಗೆಟಿವ್‌ ಎಂದು ವರದಿ ಬಂದಿದ್ದು, ಇನ್ನು ಕೇವಲ 110 ವರದಿಗಳು ಬರಬೇಕಾಗಿದೆ.

ವಿಶೇಷ ಪ್ರಕರಣದಡಿ ಹಾಗೂ ರಾರ‍ಯಂಡಮ್‌ ಟೆಸ್ಟ್‌ ಪ್ರಾರಂಭವಾಗಿರುವುದರಿಂದ ಈಗ ನಿತ್ಯವೂ 100 ಸ್ಯಾಂಪಲ್‌ಗಳು ಕಳುಹಿಸಬೇಕಾಗಿರುತ್ತದೆ. ಆದರೆ, ಭಾನುವಾರ 90 ಸ್ಯಾಂಪಲ್‌ಗಳು ಕಲೆಕ್ಟ್ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ 300ಕ್ಕೂ ಹೆಚ್ಚು ಸ್ಯಾಂಪಲ್‌ಗಳ ಟೆಸ್ಟ್‌ ಆಗಿದ್ದು, ಎಲ್ಲವೂ ನೆಗೆಟಿವ್‌ ಬಂದಿದೆ. ಇನ್ನು ವಿಶೇಷ ಪ್ರಕರಣದಡಿಯಲ್ಲಿಯೂ ಸ್ಯಾಂಪಲ್‌ ಟೆಸ್ಟ್‌ ಮಾಡಿದಾಗಲೂ ನೆಗೆಟಿವ್‌ ಬಂದಿದೆ. ಈಗ ರ‌್ಯಾಂಡಮ್‌ ಟೆಸ್ಟ್‌ ಪ್ರಾರಂಭವಾಗಿದೆ.

ಒಂದೇ ದಿನ 66 ಜನರ ಸ್ಯಾಂಪಲ್‌ ಲ್ಯಾಬ್‌ಗೆ: ಆತಂಕದಲ್ಲಿ ಕೊಪ್ಪಳ ಜನತೆ!

ಜಿಲ್ಲಾ ಉಸ್ತವಾರಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಅವರು ಕೊಪ್ಪಳದಲ್ಲಿ ವಿಶೇಷ ಪ್ರಕರಣ ಹಾಗೂ ವಿದೇಶದಿಂದ ಬಂದವರ ವರದಿಯೂ ನೆಗೆಟಿವ್‌ ಬಂದಿರುವುದು ಸಮಾಧಾನಕರವಾದ ಅಂಶವಾಗಿದೆ. ಹೀಗಾಗಿ, ರ‌್ಯಾಂಡಮ್‌ ಟೆಸ್ಟ್‌ನಲ್ಲಿಯೂ ನೆಗೆಟಿವ್‌ ಬಂದರೆ ಕೊಪ್ಪಳ ಮತ್ತಷ್ಟು ಸೇಫ್‌ ಆಗುತ್ತದೆ ಎಂದಿ​ದ್ದ​ರು.

28 ಜನ ಪೂರೈಸಿದ 79 ಜನ

ಪ್ರಾರಂಭದಲ್ಲಿ ವಿದೇಶದಿಂದ ಬಂದಿದ್ದ ಹಾಗೂ ನಾನಾ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದ್ದ 80 ಜನರನ್ನು ಗುರುತಿಸಿ ಕ್ವಾರಂಟೈನ್‌ ಮಾಡಲಾಗಿತ್ತು. ಆದರೆ, ಇದುವರೆಗೂ ಇವರಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡು ಬಂದಿಲ್ಲ.

80 ಜನರ ಪೈಕಿ ಈಗಾಗಲೇ 79 ಜನರು 28 ದಿನವನ್ನು ಪೂರೈಕೆ ಮಾಡಿರುವುದರಿಂದ ಇವರಲ್ಲಿ ಇನ್ನೇನು ರೋಗದ ಲಕ್ಷಣಗಳು ಕಂಡುಬರುವ ಸಾಧ್ಯತೆ ಇಲ್ಲ ಎಂದೇ ವಿಶ್ಲೇಷಣೆ ಮಾಡಲಾಗುತ್ತದೆ. ಈ ಪೈಕಿ ಕೇವಲ ಓರ್ವರು ಮಾತ್ರ 28 ದಿನ ಪೂರೈಕೆ ಮಾಡಬೇಕಾಗಿದೆ. ಇದಲ್ಲದೆ ಜಿಲ್ಲಾದ್ಯಂತ ತಬ್ಲೀಘಿ ಸೇರಿದಂತೆ ನಾನಾ ಕಾರಣಗಳಿಗಾಗಿ ಹೋಮ್‌ ಕ್ವಾರಂಟೈನ್‌ ಮಾಡಿದವರಲ್ಲಿಯೂ ಇದುವರೆಗೂ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ.

ಹೈ ಅಲರ್ಟ್‌

ಪಕ್ಕದ ಹೊಸಪೇಟೆಯಲ್ಲಿ ಸುಮಾರು 10 ಪ್ರಕರಣಗಳು ಪಾಸಿಟಿವ್‌ ಬಂದಿರುವುದರಿಂದ ಸಮಸ್ಯೆಯಾಗಿದೆ. ಕೊಪ್ಪಳ ಮತ್ತು ಹೊಸಪೇಟೆ ಮಧ್ಯೆ ಸಂಚಾರ ಇದ್ದು, ಭಾರಿ ಕಟ್ಟೆಚ್ಚರ ವಹಿಸಲಾಗುತ್ತದೆ. ಆದರೂ ತುಂಗಭದ್ರಾ ನದಿಯ ಮೂಲಕ ದೋಣಿಯಲ್ಲಿ ಸಂಚಾರ ಮಾಡುತ್ತಾರೆ, ವಹಿವಾಟು ನಡೆಯುತ್ತಿದೆ ಎಂದು ನದಿ ದಡದಲ್ಲಿ ವಾಸಿಸುವವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಇದರ ಮೇಲೆ ಈಗಾಗಲೇ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಕಟ್ಟುನಿಟ್ಟಿನ ಕ್ರಮವಹಿಸಿದ್ದಾರೆ.
 

Latest Videos
Follow Us:
Download App:
  • android
  • ios