Asianet Suvarna News Asianet Suvarna News

ಕೋಲಾರ: ನಕಲಿ ವೈದ್ಯನ ಚಿಕಿತ್ಸೆಯಿಂದ ಯುವಕ ಬಲಿ?

ಆರ್.ಎಂ.ಪಿ ವೈದ್ಯ ಮುಬಾರಕ್ ಎಂಬುವರು ಯುಕನಿಗೆ ಚಿಕಿತ್ಸೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಸಲ್ಮಾನ್ ಪಾಷಾ ಕಳೆದ ಒಂದು ವಾರದಿಂದ ಫಿಜಾ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಕಾಲು ಊತ, ಅಲರ್ಜಿಯಾಗಿ ಇಂದು ಸಲ್ಮಾನ್ ಪಾಷಾ ಮೃತಪಟ್ಟಿದ್ದಾನೆ. 

22 Years old Young man killed due to fake doctor treatment at Mulabagilu in Kolar grg
Author
First Published Aug 30, 2024, 9:45 PM IST | Last Updated Aug 30, 2024, 9:45 PM IST

ಕೋಲಾರ(ಆ.30):  ನಕಲಿ ಕ್ಲಿನಿಕ್ ವೈದ್ಯನ ಚಿಕಿತ್ಸೆಯಿಂದ ಯುವಕನೊಬ್ಬ ಬಲಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಹೌದು,  ಜಿಲ್ಲೆಯ ಮುಳಬಾಗಿಲು ನಗರದ ನೂಗಲಬಂಡೆ ಫಿಜಾ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದ ಯುವಕ ಸಾವನ್ನಪ್ಪಿದ್ದಾನೆ. ನೂಗಲಬಂಡೆ ನಿವಾಸಿ ಸಲ್ಮಾನ್ ಪಾಷಾ (22) ಮೃತ ಯುವಕ.

ಆರ್.ಎಂ.ಪಿ ವೈದ್ಯ ಮುಬಾರಕ್ ಎಂಬುವರು ಯುಕನಿಗೆ ಚಿಕಿತ್ಸೆ ನೀಡಿದ್ದರು ಎಂದು ಆರೋಪಿಸಲಾಗಿದೆ. ಸಲ್ಮಾನ್ ಪಾಷಾ ಕಳೆದ ಒಂದು ವಾರದಿಂದ ಫಿಜಾ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು. 

ಕೋಲಾರ: ಲಂಚ ಸ್ವೀಕರಿಸವ ವೇಳೆ ರೆಡ್‌ಹ್ಯಾಂಡ್‌ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಕ್ಲರ್ಕ್..!

ಕಾಲು ಊತ, ಅಲರ್ಜಿಯಾಗಿ ಇಂದು ಸಲ್ಮಾನ್ ಪಾಷಾ ಮೃತಪಟ್ಟಿದ್ದಾನೆ. ಕಳೆದ ಒಂದು ವಾರದಿಂದ ಯುವಕ ಫಿಜಾ  ಕ್ಲಿನಿಕ್ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ. 

Latest Videos
Follow Us:
Download App:
  • android
  • ios