ಸಾಗರ: ಕೆರೆಯಲ್ಲಿ ಈಜು ಕಲಿಯಲು ಹೋದ ಮೂವರು, ಓರ್ವ ಯುವಕ ನೀರು ಪಾಲು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆ ಗ್ರಾಮದಲ್ಲಿ ನಡೆದ ಘಟನೆ. ಸಾಗರದ ರಾಮನಗರದ ಯುವಕ ಯಶವಂತ್ ಎಂಬಾತನೇ ನೀರು ಪಾಲಾದ ದುರ್ದೈವಿ. 

21 Year Old Young Man Dies Due to Learning Swimming on Lake in Shivamogga grg

ಶಿವಮೊಗ್ಗ(ಜ.24):  ಕೆರೆಯಲ್ಲಿ ಈಜು ಕಲಿಯಲು ಹೋದ ಮೂವರು ಯುವಕರಲ್ಲಿ ಓರ್ವ ನೀರು ಪಾಲಾದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆ ಗ್ರಾಮದಲ್ಲಿ ಇಂದು(ಮಂಗಳವಾರ) ನಡೆದಿದೆ. ಸಾಗರದ ರಾಮನಗರದ ಯುವಕ ಯಶವಂತ್(21) ಎಂಬಾತನೇ ನೀರು ಪಾಲಾದ ದುರ್ದೈವಿಯಾಗಿದ್ದಾನೆ. 

ಮೃತ ಯಶವಂತ್ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಅಂತ ತಿಳಿದು ಬಂದಿದೆ. ಭೀಮನಕೋಣೆಯ ಕೆರೆಯಲ್ಲಿ ಮೂವರು ಯುವಕರು ಈಜು ಕಲಿಯಲು ತೆರಳಿದ್ದರು. ಮೂವರ ಪೈಕಿ ಓರ್ವ ಯಶವಂತ್ ನೀರು ಪಾಲಾಗಿದ್ದಾನೆ. 

Educational Tour: ಪ್ರವಾಸಕ್ಕೆ ಹೋದ 4 ನೇ ತರಗತಿ ವಿದ್ಯಾರ್ಥಿನಿ ನೀರು ಪಾಲು!

ಯಶವಂತ್‌ನ ಮೃತದೇಹಕ್ಕಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಬಿಸಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Latest Videos
Follow Us:
Download App:
  • android
  • ios