ದಾವಣೆಗೆರೆ, (ಮೇ.03): ವಾರದ ಹಿಂದಷ್ಟೇ ಹಸಿರು ವಲಯದಲ್ಲಿದ್ದ ದಾವಣಗೆರೆ ಜಿಲ್ಲೆಯಲ್ಲಿ ಇಂದು (ಭಾನುವಾರ) ಒಂದೇ ದಿನ ಬರೊಬ್ಬರಿ 21 ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.

ಶುಕ್ರವಾರ 94, ಶನಿವಾರ 72, ಭಾನುವಾರ 164 ಒಟ್ಟಾರೇ 330 ಜನರ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಈ ಪೈಕಿ  37 ಜನರ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 21 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದರು.

ಕಾರ್ಮಿಕರನ್ನು ಬಿಟ್ಟು ವಾಪಸ್‌ ಆಗುತ್ತಿದ್ದ ಬಸ್ ಅಪಘಾತ: ಮಾನವೀಯತೆ ಮೆರೆದ ಡಿಸಿಎಂ

ನಿನ್ನೆ (ಶನಿವಾರ) 10 ಪ್ರಕರಣಗಳು ಕಂಡುಬಂದಿದ್ದು, ಭಾನುವಾರ  21 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟಾರೇ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆ ಆಗಿದೆ. 

ಕಳೆದ ವಾರವಷ್ಟೇ ಗ್ರೀನ್‌ ಝೋನ್‌ನಲ್ಲಿ ಬೆಣ್ಣೆ ನಗರಿ, ಇದೀಗ ಕೆಂಪು ವಲಯದತ್ತ ಸಾಗುತ್ತಿದೆ.