ಮಾಲೂರು (ಸೆ.27): ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ವಿರೋಧಿ ಭೂ ಸುಧಾರಣ ಕಾಯ್ದೆ, ವಿದ್ಯುತ್‌ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಸೆ. 28ರಂದು ರೈತ ಸಂಘಗಳು ಕರೆ ನೀಡಿರುವ ಒಂದು ದಿನದ ರಾಜ್ಯ ಬಂದ್‌ಗೆ ಮಾಲೂರಿನ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಈ ಬಗ್ಗೆ ಮಾಹಿತಿ ನೀಡಿರುವ ದಲಿತ ಸಿಂಹ ಸೇನೆ ಕರ್ನಾಟಕದ ರಾಜ್ಯಾಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್‌ ಅವರು ನಮ್ಮನ್ನಾಳುವ ಕೇಂದ್ರ ಮತ್ತು ಬಿಜೆಪಿ ಸರ್ಕಾರ ದೇಶದಲ್ಲಿ ರೈತ ವಿರೋಧಿ ಕಾಪೋರ್‍ರೇಟ್‌ ಕಂಪನಿಗಳ ಪರವಾದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಅಗತ್ಯ ವಸ್ತುಗಳ ಕಾಯ್ದೆ, ಕಾರ್ಮಿಕ ಕಾಯ್ದೆ, ಖಾಸಗೀಕರಣ ಮತ್ತು ಬೀಜ ಮಸೂದೆ ಕಾಯ್ದೆ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗಳನ್ನು ಜಾರಿಗೆ ತರುತ್ತಿದ್ದು, ದೇಶದ ರೈತಾಪಿ ಜನರನ್ನು ಬೀದಿಗೆ ತಳ್ಳುವ ದೇಶ ವಿರೋಧಿ ಕಾಯ್ದೆ ತರುತ್ತಿದ್ದು, ಈ ಕೊಡಲೇ ಎಲ್ಲ ಈ ಜನ ವಿರೋಧಿ ಕಾಯ್ದೆಗಳ ಸುಗ್ರೀವಾಜ್ಞೆಯನ್ನು ಹಿಂಪಡೆಬೇಕೆಂದು ಒತ್ತಾಯಿಸಲು ರಾಜ್ಯಾದ್ಯಂತ ನಡೆಸಲು ಉದ್ದೇಶಿಸಿರುವ ಒಂದು ದಿನದ ಬಂದ್‌ಗೆ ತಾಲೂಕಿನ 21ಕ್ಕೂ ಹೆಚ್ಚು ಸಂಘಟನೆಗಳು, ಸಾರ್ವಜನಿಕರು ಬೆಂಬಲ ಸೂಚಿಸಿದ್ದಾರೆ ಎಂದರು.

ಸೋಮವಾರ ಕರ್ನಾಟಕ ಬಂದ್? ಏನಿರುತ್ತೆ , ಏನಿರಲ್ಲ? .

ರೈತ ಸಂಘದ ನರಸಿಂಹಯ್ಯ, ಚಲಪತಿ, ಸಮಾಜ ಪರಿವರ್ತನ ಸಮಿತಿ ಬೆಡ್‌ ಶೆಟ್ಟಿಹಳ್ಳಿ ರಮೇಶ್‌, ಕರವೇ ಎಂ.ಎಸ್‌.ಶ್ರೀನಿವಾಸ್‌, ಆಟೋ ಮಾಲೀಕರ ಸಂಘದ ಅಧ್ಯಕ್ಷ ಬಡಗಿ ಶ್ರೀನಿವಾಸ್‌, ಜಯ ಕರ್ನಾಟಕ ದಿನೇಶ್‌ ಗೌಡ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.