Asianet Suvarna News Asianet Suvarna News

ಕಲಬುರಗಿಯಲ್ಲಿ ದ್ವಿಶತಕ ಬಾರಿಸಿ ಮುನ್ನುಗ್ಗುತ್ತಿರುವ ಡೆಡ್ಲಿ ಕೊರೋನಾ: ಸ್ಟಿಲ್‌ ನಾಟ್‌ಔಟ್‌..!

ಮೊದಲ ಶತಕಕ್ಕೆ ಬೇಕಾಗಿತ್ತು 67 ದಿನ, 2ನೇ ಶತಕಕ್ಕೆ ಕೇವಲ ಹನ್ನೆರಡೇ ದಿನ| ಮಹಾರಾಷ್ಟ್ರ ಪ್ರವಾಸ ಹಿನ್ನೆಲೆ: 15 ಜನರಿಗೆ ಕೊರೋನಾ ಸೋಂಕು ಪತ್ತೆ| ಇದರೊಂದಿಗೆ ಕಲಬುರಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯಾಬಲ 266ಕ್ಕೆ ಹೆಚ್ಚಳ| ಚಿತ್ತಾಪುರದಲ್ಲಿ ಒಂದೇ ದಿನ 12 ಸೋಂಕಿತರು ಪತ್ತೆಯಾಗಿ ಹೆಚ್ಚಿದ ಆತಂಕ|

205 Coronavirus Postive Cases in Kalaburagi district
Author
Bengaluru, First Published May 30, 2020, 9:46 AM IST
  • Facebook
  • Twitter
  • Whatsapp

ಕಲಬುರಗಿ(ಮೇ.30): ಜಿಲ್ಲೆಯ ಪಾಲಿಗೆ ಮಹಾರಾಷ್ಟ್ರ ನಂಟು ಮಾರಕವಾಗುತ್ತಲಿದೆ. ಏಕೆಂದರೆ ಕೇವಲ 12 ದಿನದಲ್ಲೇ ನೂರು ಕೊರೋನಾ ಸೋಂಕಿತರು ಜಿಲ್ಲೆಯಲ್ಲಿ ಪತ್ತೆಯಾಗಿದ್ದು ಅವರೆಲ್ಲರೂ ಮಹಾರಾಷ್ಟ್ರದಿಂದ ಮರಳಿದವರೇ ಆಗಿದ್ದಾರೆ. ಈಗಾಗಲೇ ಕೋವಿಡ್‌ ಸೋಂಕಿನ ಹಾವಳಿಯಿಂದ ತತ್ತರಿಸಿರುವ ಬಿಸಿಲೂರಲ್ಲಿ ಮಹಾರಾಷ್ಟ್ರ ಸೋಂಕಿನ ವ್ಯಾಪಕ ಹರಡುವಿಕೆ ಆತಂಕ ಹೆಚ್ಚಿಸಿದೆ. ಶುಕ್ರವಾರ ಆರು ವರ್ಷದ ಬಾಲಕ, ಮೂವರು ಬಾಲಕಿಯರು, ಐವರು ಮಹಿಳೆಯರು, ಆರು ಜನ ಪುರುಷರಿಗೆ ಸೋಂಕು ಹರಡಿದೆ.

15 ಜನರಿಗೆ ಸೋಂಕು:

ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಜಿಲ್ಲೆಯ ಚಿತ್ತಾಪುರದ 12 ಮಂದಿಸ ಶಹಾಬಾದ್‌ 3 ಮಂದಿ ಸೇರಿದಂತೆ ಒಟ್ಟು 15 ಜನರಿಗೆ ಶುಕ್ರವಾರ ಕೊರೋನಾ ಸೋಂಕು ಪತ್ತೆಯಾಗಿದೆ. ಇವರೆಲ್ಲರು ಸರ್ಕಾರಿ ಕ್ವಾರಂಟೈನ್‌ ದಲ್ಲಿದ್ದು, ಸೋಂಕು ಪತ್ತೆಯಾದ ಕೂಡಲೆ ಇವರನ್ನು ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಿಲಾಗಿದೆ. ಇದರæೂಂದಿಗೆ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 205ಕ್ಕೆ ಏರಿಕೆಯಾಗಿದ್ದು, 123 ಸಕ್ರೀಯ ರೋಗಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿಕೆ ನೀಡಿದ್ದಾರೆ. ಇಂದು ಪತ್ತೆಯಾದ ಒಟ್ಟು ಪ್ರಕರಣಗಳು ಚಿತ್ತಾಪುರ ಹಾಗೂ ಶಹಾಬಾದ್‌ ಎರಡೇ ತಾಲೂಕುಗಳಲ್ಲಿ ಹಂಚಿ ಹೋಗಿರೋದು ವಿಶೇಷ.

ಚಿತ್ತಾಪುರ ತಾಲೂಕಿನ ತೇರಿ ತಾಂಡಾದ 20 ವರ್ಷದ ಯುವಕ (ಸಂಖ್ಯೆ-2568), ಅನಿಕೇರಾ ತಾಂಡಾದ 8 ವರ್ಷದ ಬಾಲಕಿ (ಸಂಖ್ಯೆ-2570), 34 ವರ್ಷದ ಮಹಿಳೆ (ಸಂಖ್ಯೆ-2574), 36 ವರ್ಷದ ಮಹಿಳೆ (ಸಂಖ್ಯೆ-2575), 33 ವರ್ಷದ ಮಹಿಳೆ (ಸಂಖ್ಯೆ-2576), 6 ವರ್ಷದ ಬಾಲಕ (ಸಂಖ್ಯೆ-2577), ದೇವಾಪುರ ತಾಂಡಾದ 35 ವರ್ಷದ ಯುವಕ (ಸಂಖ್ಯೆ-2581), ಬಳಗೇರಾ ತಾಂಡಾದ 38 ವರ್ಷದ ಯುವಕ (ಸಂಖ್ಯೆ-2582), ಚಿತ್ತಾಪುರ ಪಟ್ಟಣದ 2 3 ವರ್ಷದ ಯುವಕ (ಸಂಖ್ಯೆ-2571), 42 ವರ್ಷದ ಪುರುಷ (ಸಂಖ್ಯೆ-2578), 32 ವರ್ಷದ ಯುವತಿ (ಸಂಖ್ಯೆ-2579) ಹಾಗೂ 12 ವರ್ಷದ ಬಾಲಕಿಗೆ (ಸಂಖ್ಯೆ-2580) ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಶಹಾಬಾದ ತಾಲೂಕಿನ ಭಂಕೂರ ಗ್ರಾಮದ 25 ವರ್ಷದ ಯುವತಿ (ಸಂಖ್ಯೆ-2569), 10 ವರ್ಷದ ಬಾಲಕಿ (ಸಂಖ್ಯೆ-2572) ಹಾಗೂ 20 ವರ್ಷದ ಯುವಕ (ಸಂಖ್ಯೆ-2573) ಕೋವಿಡ್‌-19 ದೃಢವಾಗಿದೆ.

ಕೊರೋನಾ ಹಾಟ್‌ಸ್ಪಾಟ್‌ ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 200 (ಸೋಂಕಿತರು 205)ಗಡಿದಾಟಿದೆ. ಕೊರೋನಾ ಸೋಂಕಿನಿಂದಾಗಿ ನಡೆದ ದೇಶದ ಮೊದಲ ಸಾವು ಘಟಿಸಿದ್ದು ಕಲಬುರಗಿಯಲ್ಲೇ, ಮಾ. 12 ರಿಂದ ಬರೋಬ್ಬರಿ 67 ದಿನಗಳಲ್ಲಿ 100 ಸೋಂಕಿತರು ಜಿಲ್ಲೆಯಲ್ಲಿ ಕಂಡಿದ್ದರು. ಇದೀಗ ಕೇವಲ 12 ದಿನಗಳಲ್ಲೇ 100 ಸೋಂಕಿತರು ಕಾಣುವಂತಾಗಿರೋದು ಸೋಂಕು ಕಲಬುರಗಿ ಕಾಡುತ್ತಿರೋದಕ್ಕೆ ಕನ್ನಡಿ. ಸೌದಿಗೆ ಹೋಗಿ ಬಂದವರಿಂದ ಹರಡಿದ ಸೋಂಕು ನಂತರ ದಿಲ್ಲಿ ತಬ್ಲಿಘಿಗೆ ಹೋಗಿ ಬಂದವರಿಂದ ಹೆಚ್ಚಾಗಿತ್ತು. ಇದರಿಂದ ಜಿಲ್ಲೆಯಲ್ಲಿ ಸೃಷ್ಟಿಯಾಗಿದ್ದ ಆತಂಕಕ್ಕೆ ಮುಂಬೈ ನಂಟು ಇಮ್ಮಡಿಗೊಳಿಸಿದಂತಾಗಿದೆ. ಈ ನಡುವೆ ಮೇ 10ರಿಂದ ಮಹಾ’ ಸೋಂಕಿನ ನಂಟು ಅಟ್ಟಹಾಸ ಮೆರೆಯುತ್ತಿದ್ದು, 65 ದಿನಗಳಲ್ಲಿ (ಮೇ 17) ಕೋವಿಡ್‌ ಸೋಂಕು ಮೊದಲು ಶತಕದ ಗಡಿದಾಡುವಂತೆ ಮಾಡಿತ್ತು. ಇದೀಗ 12 ದಿನದಲ್ಲೇ ಮಹಾ’ ಸೋಂಕಿತರ ಸಂಖ್ಯೆ ನೂರರ ಗಡಿ ಮೀರಿದೆ. ಇಲ್ಲಿಯವರೆಗೆ ಮಹಾರಾಷ್ಟ್ರದಿಂದ ಮರಳಿದ ಒಟ್ಟು 113 ಜನರಿಗೆ ಸೋಂಕು ಕಾಣಿಸಿಕೊಂಡಂತೆ ಆಗಿದೆ.
 

Follow Us:
Download App:
  • android
  • ios