Asianet Suvarna News Asianet Suvarna News

ಕಲಬುರಗಿಯಲ್ಲಿ 2 ಸಾವಿರ ಗಡಿ ದಾಟಿದ ಕೇಸ್‌: ಕೊರೋನಾ ಸೋಂಕಿನ ಮೂಲವೇ ನಿಗೂಢ!

ಕಲಬುರಗಿಯಲ್ಲಿ ಸೋಂಕು ವೇಗವಾಗಿ ಹರಡುತ್ತಿದ್ದರೂ ಅದರ ಮೂಲವೇ ಈಚೆಗಿನ ದಿನಗಳಲ್ಲಿ ನಿಗೂಢ| ಶುಕ್ರವಾರ ಹೊಸತಾಗಿ ಪತ್ತೆಯಾದ 58 ಸೋಂಕಿನ ಪ್ರಕರಣಗಳಲ್ಲಿ 42 ರಲ್ಲಿ ಸೋಂಕಿನ ಮೂಲವೇ ಗೊತ್ತಿಲ್ಲ| ಇನ್ನು 13 ರಲ್ಲಿ ಐಎಲ್‌ಐ, 2 ರಲ್ಲಿ ಸಾರಿ ಅಂಶ ಕಂಡಿದೆ| 

2024 Coronavirus Positive Cases So Far in Kalaburagi district
Author
Bengaluru, First Published Jul 12, 2020, 12:25 PM IST

ಕಲಬುರಗಿ(ಜು.12):  ಕೊರೋನಾ ರುದ್ರನರ್ತನ ಕಲಬುರಗಿಯಲ್ಲಿ ಶನಿವಾರವೂ ಮುಂದುವರಿದಿದ್ದು ಹೊಸ ಸೋಂಕಿನ 65 ಪ್ರಕರಣಗಳು ವರದಿಯಾಗಿದ್ದಲ್ಲದೆ ಮತ್ತಿಬ್ಬರನ್ನು ಹೆಮ್ಮಾರಿ ಬಲಿ ಪಡೆದಿದೆ. ಹೀಗಾಗಿ ಸೋಂಕಿನ ಸಂಖ್ಯೆ 2,024 ತಲುಪಿದ್ದು ಸಾವನ್ನಪ್ಪಿದ್ದವರ ಸಂಖ್ಯೆ 36ಕ್ಕೆ ಹೆಚ್ಚಿದೆ. ಕೊರೋನಾ ಸೋಂಕಿನಿಂದ ಕಲಬುರಗಿ ನಗರದಲ್ಲಿ ಶನಿವಾರ ಮತ್ತಿಬ್ಬರು ವೃದ್ಧರು ಮೃತಪಟ್ಟಿದ್ದಾರೆ. ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯೊಂದಿಗೆ ಜ್ವರ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಸವೇರಾ ಕಾಲೋನಿಯ 84 ವರ್ಷದ ವೃದ್ಧ (ರೋಗಿ ಸಂಖ್ಯೆ-26644) ಜು.4 ರಂದು ಕೋವಿಡ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಜು.7 ರಂದು ಕೊರೋನಾ ಸೋಂಕು ತಗುಲಿದ್ದು ಖಾತ್ರಿಯಾಗಿ ಜು.10 ರಂದು ನಿಧನ ಹೊಂದಿರುತ್ತಾರೆ.

ಕರ್ನಾಟಕದ ಮತ್ತಿಬ್ಬರು ಶಾಸಕರಿಗೆ ತಗುಲಿದ ಕೊರೋನಾ ವೈರಸ್

ಅದೇ ರೀತಿ ತೀವ್ರ ಉಸಿರಾಟ ತೊಂದರೆ ಹಿನ್ನೆಲೆ, ಅಧಿಕ ರಕ್ತದೊತ್ತಡ ಕಾಯಿಲೆಯೊಂದಿಗೆ ಬಳಲುತ್ತಿದ್ದ ಕಲಬುರಗಿ ನಗರದ ಎಂಎಸ…ಕೆ ಮಿಲ್‌ ಪ್ರದೇಶದ 80 ವರ್ಷದ ವೃದ್ಧ (ರೋಗಿ ಸಂಖ್ಯೆ- 26648) ಇವರು ಜು.4 ರಂದು ಅಸ್ಪತ್ರೆಗೆ ದಾಖಲಾಗಿದ್ದರು. ಜು.7ರಂದು ಕೊರೋನಾ ತಗುಲಿದ್ದು ದೃಢವಾಗಿ ಜು.10 ರಂದು ನಿಧನ ಹೊಂದಿದ್ದಾರೆ. ಹೊಸ 65 ಸೋಂಕಿನ 65 ಪ್ರಕರಣಗಳಲ್ಲಿ ಸೋಂಕಿನೊಂದಿಗೆ ಐಲ್‌ಐ ಹಗೂ ಸಾರಿ ಸೇರ್ಪಡೆಗೊಂಡಿರೋದು ಸ್ಪಷ್ಟವಾಗಿದೆ. ಇದರಿಂದಾಗಿಯೇ ಕೊನೆ ಹಂತದಲ್ಲಿ ಆಸ್ಪತ್ರೆ ಸೇರುತ್ತಿರುವ ವಯೋವೃದ್ಧರು ಸಾವನ್ನಪ್ಪುತ್ತಲೇ ಸಾಗಿದ್ದಾರೆ.

ಹೊಸ 65 ಸೋಂಕು ಸೇರಿದಂತೆ ಜಿಲ್ಲೆಯಲ್ಲಿ ಸೋಂಕು 2 ಸಾವಿರದಗಡಿ ದಾಟಿದೆ. ಇಂದೂ ಆಸ್ಪತ್ರೆಯಿಂದ 16 ಮಂದಿ ರೋಗಿಗಳು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಹೀಗಾಗಿ ಒಟ್ಟು ಬಿಡುಗಡೆಗೊಂಡಿರುವ ಪ್ರಕರಣಗಲು 1, 460 ಗೆ ಹೆಚ್ಚಿವೆ. ಸಕ್ರೀಯವಾಗಿ 528 ಸೋಂಕಿನ ಪ್ರಕರಣಗಳಿವೆ. 20 ಜನ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೋನಾ ಸೋಂಕಿನ ಮೂಲವೇ ನಿಗೂಢ!

ಕೊರೋನಾತಂಕದ ಕಲಬುರಗಿಯಲ್ಲಿ ಸೋಂಕು ವೇಗವಾಗಿ ಹರಡುತ್ತಿದ್ದರೂ ಅದರ ಮೂಲವೇ ಈಚೆಗಿನ ದಿನಗಳಲ್ಲಿ ನಿಗೂಢವಾಗುತ್ತಿದೆ. ಶುಕ್ರವಾರ ಹೊಸತಾಗಿ ಪತ್ತೆಯಾದ 58 ಸೋಂಕಿನ ಪ್ರಕರಣಗಳಲ್ಲಿ 42 ರಲ್ಲಿ ಸೋಂಕಿನ ಮೂಲವೇ ಗೊತ್ತಿಲ್ಲ, ಇನ್ನು 13 ರಲ್ಲಿ ಐಎಲ್‌ಐ, 2 ರಲ್ಲಿ ಸಾರಿ ಅಂಶ ಕಂಡಿದೆ. ಹೀಗಾಗಿ ನಗರ ಹಾಗೂ ಜಿಲ್ಲೆಯಲ್ಲಿ ಸೋಂಕು ಯಾವುದೇ ಮೂಲವಿಲ್ಲದೆಯೇ ಹರಡಲಾರಂಭಿಸಿರೋದು ಸ್ಪಷ್ಟವಾದಂತಾಗಿದೆ. ಅದರಲ್ಲೂ ನಿನ್ನೆಯ ಸೋಂಕಿನ ಪ್ರಕರಣಗಳಲ್ಲಿ ಪಿ ಆಂಡ್‌ ಟಿ ಕಾಲೋನಿಯಲ್ಲಿ ಒಟ್ಟು 8 ಪ್ರಕರಣ ಪತ್ತೆಯಾದರೆ, ವಿದ್ಯಾನಗರ ಹಾಗೂ ಗೋದುತಾಯಿ ನಗರ, ಝುಬೇರ್‌ ಕಾಲೋನಿ, ಮೆಕ್ಕಾ ಕಾಲೋನಿಗಳಲ್ಲಿ ತಲಾ 4 ಪ್ರಕರಣಗಳು ವರದಿಯಾಗಿವೆ. ರಾಮ ಮಂದಿರ, ಅಂಬಿಕಾ ನಗರ, ಜೆಆರ್‌ ನಗರ, ಯಂಕವ್ವನ ಮಾರುಕಟ್ಟೆ, ಬ್ರಹ್ಮಪುರ, ಗಾಜಿಪುರ, ಪೊಲೀಸ್‌ ಕ್ವಾರ್ಟರ್‌, ಕರುಣೇಶ್ವರ ನಗರ, ಗೋದುತಾಯಿ ನಗರ, ಸ್ಟೇಷನ್‌ ಬಜಾರ್‌, ಹಜ್‌ ಕಮೀಟಿ ನಗರ, ಚಂಪಾ ಕ್ರೀಡಾಂಗಣ ಹಿಂದೆ, ವೆಂಕಟೇಶ ನಗರ, ಬಸವೇಶ್ವರ ನಗರ ಇಲ್ಲೆಲ್ಲಾ ತಲಾ 1, 2 ಸೋಂಕಿನ ಪ್ರಕರಣಗಳು ವರದಿಯಾಗಿದ್ದು ಇಲ್ಲೂ ಸಹ ಸೋಂಕಿನ ಮೂಲ ನಾಪತ್ತೆ.

ಇನ್ನು ಜಿಲ್ಲೆಯ ಮಂದೇವಾಲ, ಜೇವರ್ಗಿ, ಹೊನ್ನಕಿರಣಗಿ ಸೇರಿದಂತೆ ಜಿಲ್ಲೆಯ ಹಲವು ಹಳ್ಳಿಗಳಲ್ಲಿಯೂ ಸೋಂಕು ಪತ್ತೆಯಾಗಿದ್ದು ಇಲ್ಲಿಯೂ ಹೆಚ್ಚಿನ ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಮೂಲ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಸಿಬ್ಬಂದಿ ಹೆಣಗಾಡುತ್ತಿದ್ದಾರೆ.
 

Follow Us:
Download App:
  • android
  • ios