ರಾಮ​ನ​ಗ​ರ (ಡಿ.05): ಟೊಯೋಟಾ ಕಿರ್ಲೋ​ಸ್ಕರ್‌ ಮೋಟಾರ್‌ ಕಂಪೆನಿ 40 ಮಂದಿ ಕಾರ್ಮಿ​ಕ​ರನ್ನು ಅಮಾ​ನ​ತ್ತು​ಗೊ​ಳಿ​ಸಿ​ರುವ ಬೆನ್ನ ​ಹಿಂದೆಯೇ ಮತ್ತೆ 20 ಕಾರ್ಮಿ​ಕ​ರನ್ನು ಅಶಿ​ಸ್ತಿನ ಆರೋಪ ಹೊರೆಸಿ ಸೇವೆ​ಯಿಂದ ಅಮಾ​ನ​ತ್ತು​ಗೊ​ಳಿ​ಸಿದೆ.

ಈಗ 20 ಮಂದಿ ಕಾರ್ಮಿ​ಕರ ಮೇಲೆ ಅಶಿ​ಸ್ತಿನ ಆರೋಪ ಹೊರೆಸಿ ವಿಚಾ​ರಣೆ ಕಾಯ್ದಿ​ರಿಸಿ ನೋಟಿಸ್‌ ಜಾರಿ ಮಾಡಿದೆ. ಇದು ಮುಷ್ಕರ ನಿರತ ಕಾರ್ಮಿ​ಕ​ರನ್ನು ಮತ್ತಷ್ಟುಕೆರ​ಳಿ​ಸಿದೆ.

ಸಂಸ್ಥೆಯ ನಿಯ​ಮ​ಗ​ಳನ್ನು ಉಲ್ಲಂಘಿ​ಸಿದ್ದು ಅಲ್ಲದೆ, ದುರ್ನ​ಡತೆ ಮತ್ತು ಅಶಿಸ್ತು ನಡತೆಯ ಬಗ್ಗೆ ಪ್ರಾಥ​ಮಿಕ ಪುರಾ​ವೆ​ಗಳು ಲಭಿ​ಸಿ​ರುವ ಹಿನ್ನೆ​ಲೆ​ಯಲ್ಲಿ ಈ ಕ್ರಮ ಕೈಗೊಂಡಿ​ರು​ವು​ದಾಗಿ ಕಂಪ​ನಿಯ ಪ್ರಕ​ಟಣೆ ತಿಳಿ​ಸಿದೆ.

ನ.6ರಂದು ಒಬ್ಬರು ಮತ್ತು ನ.12ರಂದು 39 ಮಂದಿ ಕಾರ್ಮಿ​ಕ​ರನ್ನು ವಿಚಾ​ರಣೆ ಕಾಯ್ದಿ​ರಿಸಿ ಸೇವೆ​ಯಿಂದ ಅಮಾ​ನ​ತ್ತು​ಗೊ​ಳಿ​ಸಿ​ಲಾ​ಗಿತ್ತು.

ಟೊಯೋಟಾ ಇನೋವಾ ಕ್ರೈಸ್ಟಾ ಮತ್ತಷ್ಟು ಆಕರ್ಷಕ; ಫೇಸ್‌ಲಿಫ್ಟ್ ವರ್ಶನ್ ಬಿಡುಗಡೆ! .

ವಿಚಾ​ರಣೆ ಕಾಯ್ದಿ​ರಿಸಿ ಸೇವೆ​ಯಿಂದ ಅಮಾ​ನ​ತ್ತು​ಗೊ​ಳಿ​ಸಿ​ರು​ವುದು ಶಿಕ್ಷೆ​ಯಲ್ಲ. ಕಾರ್ಮಿ​ಕರು ಕೆಲಸ ಕಳೆ​ದು​ಕೊಂಡಿ​ದ್ದಾರೆ ಎಂಬರ್ಥವೂ ಅಲ್ಲ. ಮುಕ್ತ ವಿಚಾ​ರಣೆ ನಡೆ​ಯಲಿ ಎಂಬ ಕಾರ​ಣಕ್ಕೆ ಅಮಾ​ನ​ತ್ತಿ​ನ​ಲ್ಲಿ​ಡ​ಲಾ​ಗಿದೆ. ಕಾನೂನು ಪ್ರಕಾರ ಈ ಕಾರ್ಮಿ​ಕ​ರಿಗೆ ಸಲ್ಲ​ಬೇ​ಕಾದ ಸವ​ಲತ್ತು ಸಲ್ಲು​ತ್ತದೆ ಎಂದು ಸಂಸ್ಥೆಯ ವಕ್ತಾ​ರರು (ಹೆ​ಸರು ತಿಳಿ​ಸಿ​ಲ್ಲ) ಹೇಳಿಕೆ ನೀಡಿ​ದ್ದಾರೆ.

ಕ್ಷುಲ್ಲಕ ಕಾರಣ- ಕಾರ್ಮಿಕ ಸಂಘ ಆರೋಪ:

20 ಮಂದಿ ಕಾರ್ಮಿ​ಕ​ರನ್ನು ಅಮಾ​ನ​ತ್ತು ಮಾಡಿ​ರುವ ಟೊಯೋಟಾ ಕಿರ್ಲೋ​ಸ್ಕರ್‌ ಮೋಟಾರ್‌ ಕಂಪ​ನಿಯ ನಡೆ​ಯನ್ನು ಟೊಯೋಟಾ ಕಾರ್ಮಿಕರ ಸಂಘ ತೀವ್ರ​ವಾಗಿ ಖಂಡಿ​ಸಿದೆ. ಕ್ಷುಲ್ಲಕ ಕಾರಣ ನೀಡಿ ಕಾರ್ಮಿ​ಕ​ರನ್ನು ಅಮಾ​ನ​ತ್ತಿ​ನ​ಲ್ಲಿ​ಡ​ಲಾ​ಗಿದೆ. ಲಾಕೌಟ್‌ ಘೋಷಿಸಿ ಕಾರ್ಮಿ​ಕ​ರನ್ನು ಹೊರ​ಗಿಡಲಾ​ಗಿದೆ.

ಸಂಸ್ಥೆಯ ಅಕ್ರ​ಮ​ಗಳ ವಿರುದ್ಧ ಸಂಸ್ಥೆಯ ಹೊರಗೆ ಅನಿ​ವಾ​ರ್ಯ​ವಾಗಿ ಹೋರಾಟ ನಡೆ​ಸು​ತ್ತಿ​ರು​ವು​ದಾಗಿ, ಸಂಸ್ಥೆಗೆ ಸಂಬಂಧ​ವಿ​ಲ್ಲದ ಹೊರ​ಗಿನ ವಿಷ​ಯ​ಗಳ ಆರೋ​ಪದ ಮೇಲೆ ಅಮಾ​ನತ್ತು ಮಾಡಿದೆ ಎಂದು ಕಾರ್ಮಿ​ಕರು ಪ್ರತಿ​ಕ್ರಿ​ಯಿ​ಸಿ​ದ್ದಾರೆ. ಶುಕ್ರ​ವಾ​ರವೂ ನೂರಾರು ಕಾರ್ಮಿ​ಕರು ಮುಷ್ಕ​ರ​ದಲ್ಲಿ ಭಾಗ​ವ​ಹಿ​ಸಿ​ದ್ದರು.