ಬೆಂಗಳೂರು(ನ.24): MPV ಕಾರುಗಳ ಪೈಕಿ ಟೊಯೋಟಾ ಇನೋವಾ ಕಾರಿಗೆ ಪ್ರಬಲ ಪೈಪೋಟಿ ನೀಡಲು ಹಲವು ಕಾರುಗಳ ಬಿಡುಗಡೆಯಾಗಿದ್ದರೂ, ಇನೋವಾ ಅಗ್ರಸ್ಥಾನದಲ್ಲಿದೆ. ಹೊಚ್ಚ ಹೊಸ ಇನೋವಾ ಕ್ರೈಸ್ಟ್ ಕಾರು ಇದೀಗ ಅ‌ಪ್‌ಗ್ರೇಡೆಡ್ ವರ್ಶನ್ ಬಿಡುಗಡೆಯಾಗಿದೆ. 

ಟೊಯೋಟಾ ಇನ್ನೋವಾ ಫೇಸ್‌ಲಿಫ್ಟ್ ಕಾರಿನ ಬುಕಿಂಗ್ ಆರಂಭ!

ಹೊಚ್ಚ ಹೊಸ ಇನೋವಾ ಕ್ರೈಸ್ಟಾ ಕಾರಿನ ಬೆಲೆ 16.26 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಂದ ಆರಂಭಗೊಳ್ಳುತ್ತಿದ್ದು, ಗರಿಷ್ಠ ಬೆಲೆ 24.33 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಇನೋವಾ ಕ್ರೈಸ್ಟಾ ಕಾರಿಗಿಂತ ಫೇಸ್‌ಲಿಫ್ಟ್ ಕಾರು 60,000 ರೂಪಾಯಿಂದ 70,000 ರೂಪಾಯಿ ಹೆಚ್ಚಾಗಿದೆ.

ಟೊಯೋಟಾ ಅರ್ಬನ್ ಕ್ರೂಸರ್ vs ಕಿಯಾ ಸೊನೆಟ್; ಇಲ್ಲಿದೆ ಬೆಲೆ, ವಿಶೇಷತೆ!.

ಪಿಯಾನೋ ಬ್ಲಾಕ್ ಗ್ರಿಲ್ ಜೊತೆಗೆ ಕ್ರೋಮ್ ಫಿನೀಶ್, ಬದಲಾದ ಫ್ರಂಟ್ ಬಂಪರ್, ಹೊಚ್ಚ ಹೊಸ ಫಾಗ್ ಲ್ಯಾಂಪ್, ಡೈಮಂಡ್ ಕಟ್ ಅಲೋಯ್ ವೀಲ್ ನೂತನ ಕ್ರೈಸ್ಟಾ ಫೇಸ್‌ಲಿಫ್ಟ್ ಕಾರಿನ ಅಂದ ಹೆಚ್ಚಿಸಿದೆ. ಇನ್ನು ಕ್ಯಾಬಿನ್ ಕೂಡ ಕೊಂಚ ಬದಲಾಗಿದೆ. ಹೊಚ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಕೆನೆಕ್ಟೆಡ್ ಟೆಕ್ ಫೀಚರ್ಸ್ ಕೂಡ ಲಭ್ಯವಿದೆ.

ಗರಿಷ್ಠ ಸುರಕ್ಷತೆಯೂ ಈ ಕಾರಿನಲ್ಲಿದೆ. ABS, ಏರ್‌ಬ್ಯಾಗ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಪಾರ್ಕಿಂಗ್ ಅಸಿಸ್ಟ್ ಸೇರಿದಂತೆ ಹಲುವ ಫೀಚರ್ಸ್ ಈ ಕಾರಿನಲ್ಲಿದೆ.  15 ವರ್ಷಗಳ ಹಿಂದೆ ಭಾರತದಲ್ಲಿ ಇನೋವಾ MPV ಕಾರು ಬಿಡುಗಡೆಯಾಗಿತ್ತು. ಕಳೆದ 15 ವರ್ಷಗಳಿಂದ ಭಾರತದ ಅತ್ಯತ್ತಮ MPV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಫೇಸ್‌ಲಿಫ್ಟ್ ವರ್ಶನ್ ಕಾರು ಗ್ರಾಹಕರನ್ನು ಮತ್ತಷ್ಟು ಮೋಡಿ ಮಾಡಲಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ನವೀನ್ ಸೋನಿ ಹೇಳಿದ್ದಾರೆ.