ಮಂಗಳೂರಲ್ಲಿದ್ದ 2 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಮನೆ ಸೇರೋ ಸಂತಸ
ಲಾಕ್‌ಡೌನ್‌ಗಿಂತ ಮೊದಲು ಕೆಲಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಇಲ್ಲೇ ಸಿಲುಕಿಕೊಂಡಿದ್ದ ಉತ್ತರ ಕರ್ನಾಟಕ ಮೂಲದ 2000ಕ್ಕೂ ಅಧಿಕ ಕಾರ್ಮಿಕರಿಗೆ ಕೊನೆಗೂ ತಾಯ್ನಾಡು ತಲುಪುವ ಸಂತಸದ ಸಮಯ ಬಂದಿದೆ.
ಮಂಗಳೂರು(ಏ.26): ಲಾಕ್‌ಡೌನ್‌ಗಿಂತ ಮೊದಲು ಕೆಲಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಇಲ್ಲೇ ಸಿಲುಕಿಕೊಂಡಿದ್ದ ಉತ್ತರ ಕರ್ನಾಟಕ ಮೂಲದ 2000ಕ್ಕೂ ಅಧಿಕ ಕಾರ್ಮಿಕರಿಗೆ ಕೊನೆಗೂ ತಾಯ್ನಾಡು ತಲುಪುವ ಸಂತಸದ ಸಮಯ ಬಂದಿದೆ.
ಮಂಗಳೂರು ಮತ್ತು ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದಿಂದ ಶುಕ್ರವಾರ ಒಟ್ಟು 58 ಬಸ್ಸುಗಳಲ್ಲಿ 1000ಕ್ಕೂ ಹೆಚ್ಚು ಜನರನ್ನು ಕರೆದೊಯ್ಯಲಾಗಿತ್ತು. ಶನಿವಾರ ಮಂಗಳೂರು ಡಿಪೋದಿಂದ 22 ಬಸ್ಸುಗಳು ಹಾಗೂ ಪುತ್ತೂರು ಡಿಪೋದಿಂದ 25 ಸರ್ಕಾರಿ ಬಸ್ಸುಗಳಲ್ಲಿ ಸುಮಾರು 900ಕ್ಕೂ ಅಧಿಕ ಕಾರ್ಮಿಕರನ್ನು ಕಳುಹಿಸಿಕೊಡಲಾಗಿದೆ.
ಸೀಲ್‌ಡೌನ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ನರ್ಸ್ ಕುಟುಂಬ ಕ್ವಾರಂಟೈನ್‌ಗೆ
ಮಂಗಳೂರು ಕೆಎಸ್‌ಆರ್ಟಿಸಿ ವಿಭಾಗದ ವಿಭಾಗೀಯ ನಿಯಂತ್ರಕ ಎಸ್.ಎನ್. ಅರುಣ್ ಕನ್ನಡಪ್ರಭದೊಂದಿಗೆ ಮಾತನಾಡಿ, ಉತ್ತರ ಕರ್ನಾಟಕದ ಕಾರ್ಮಿಕರಿಗೆ ಇಲ್ಲಿ ಅನೇಕ ಕಡೆಗಳಲ್ಲಿ ಊಟ ವಸತಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದಲೇ ಅವರನ್ನು ಬಸ್ಸಿನಲ್ಲಿ ಕರೆದೊಯ್ಯಲಾಗಿದೆ.
ಸಾಮಾನ್ಯವಾಗಿ ಒಂದು ಬಸ್ಸಿನಲ್ಲಿ 55 ಮಂದಿ ಪ್ರಯಾಣಿಸಬಹುದು. ಆದರೆ ಈಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಒಂದು ಬಸ್ಸಿನಲ್ಲಿ ಕೇವಲ ಇಪ್ಪತ್ತು ಜನರನ್ನು ಮಾತ್ರ ಕರೆಯಲಾಗುತ್ತಿದೆ. ಪ್ರಯಾಣಿಕರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಲಾಗಿದ್ದು, ಬಸ್ ಸಿಬ್ಬಂದಿಗೂ ಮಾಸ್ಕ್ ಮತ್ತು ಗ್ಲೌಸ್ ನೀಡಲಾಗಿದೆ ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಮಾತ್ರವಲ್ಲ ಲಾಕ್‌ಡೌನ್ ಸಮಯದಲ್ಲೂ ವಾಟಾಳ್ ನಾಗರಾಜ್ ಪ್ರಾಣಿ ಪ್ರೇಮ
ಗದಗ, ಬಾಗಲಕೋಟೆ, ಕೊಪ್ಪಳ, ಕಲಬುರ್ಗಿ, ರಾಯಚೂರು, ವಿಜಯಪುರ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಹಾವೇರಿ ಇತ್ಯಾದಿ ಜಿಲ್ಲೆಗಳ ಕಾರ್ಮಿಕರೇ ಹೆಚ್ಚಿದ್ದಾರೆ. ಲಾಕ್‌ಡೌನ್ ಮಾಡಿದ ನಂತರ ಇವರಿಗೆ ಅಲ್ಲಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿತ್ತು. ಇದೀಗ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಈ ಕಾರ್ಮಿಕರನ್ನು ಅವರ ಊರುಗಳಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ.