Asianet Suvarna News Asianet Suvarna News

ಓದೋದು ಬಿಟ್ಟು ಇಂತಹ ಕೆಲಸಕ್ಕೆ ಇಳಿದಿದ್ದ ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್

ಮೋಜು ಮಸ್ತಿ ಮಾಡುವ ಸಲುವಾಗಿ ಕಳ್ಳತನಕ್ಕೆ ಇಳಿದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅರೆಸ್ಟ್ ಮಾಡಲಾಗಿದೆ. ಲಕ್ಷಾಂತರ ರು. ಕದ್ದು ಮಸ್ತಿ ಮಾಡುತ್ತಿದ್ದವರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

2 Students Arrested In Chamarajanagara
Author
Bengaluru, First Published Sep 1, 2020, 11:48 AM IST

ಚಾಮರಾಜನಗರ (ಸೆ.01): ಮೋಜು- ಮಸ್ತಿ ನಡೆಸುವ ಸಲುವಾಗಿ ಸ್ನೇಹಿತರು, ಸಂಬಂಧಿಕರ ಮನೆಗಳಿಂದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಪದವಿ ವಿದ್ಯಾರ್ಥಿಗಳನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ನಗರದ ಬೇರೆ ಬೇರೆ ಖಾಸಗಿ ಕಾಲೇಜುಗಳಲ್ಲಿ ಪದವಿ ಓದುತ್ತಿದ್ದ ತಾಲೂಕಿನ ಕಾಗಲವಾಡಿ ಗ್ರಾಮದ ಮಹದೇವಪ್ರಸಾದ್‌ ಅಲಿಯಾಸ್‌ ಪೃಥ್ವಿರಾಜ್‌(21) ಮತ್ತು ಚಾಮರಾಜನಗರದ ರೋಹಿತ್‌ ಅಲಿಯಾಸ್‌ ಮಹೇಶ್‌(21) ಬಂಧಿತರು. 

ಸ್ನೇಹಿತರು, ಸಂಬಂಧಿಕರ ಮನೆಗಳ ಬೀಗದ ಕೀ ನಕಲು ಮಾಡಿಕೊಂಡು, ಯಾರೂ ಇಲ್ಲದ ವೇಳೆ ತೆರಳಿ ನಗ ನಗದು ಕಳ್ಳತನ ಮಾಡುತ್ತಿದ್ದರು.

ಕಂಪನಿ ಬೋರ್ಡ್‌ ಮೀಟಿಂಗಲ್ಲಿ ವ್ಯಕ್ತಿಗೆ ಚಾಕು ಇರಿತ!.

ಬಳಿಕ ಕದ್ದ ಮಾಲುಗಳನ್ನು ಗಿರವಿಯಿಟ್ಟು ದುಬಾರಿ ಮೊಬೈಲ್, ಕ್ಯಾಮೆರಾಗಳನ್ನು ಖರೀದಿ ಮಾಡುತ್ತಿದ್ದರು. ಕಾರ್‌ಗಳನ್ನು ಬಾಡಿಗೆಗೆ ಪಡೆದು ತಿರುಗಾಡುತ್ತಿದ್ದರು. ಆರೋಪಿಗಳಿಂದ ಸುಮಾರು .8 ಲಕ್ಷ ಮೌಲ್ಯದ 261 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಓದೊದು ಬಿಟ್ಟು ಮಸ್ತಿ ಮಾಡುತ್ತಿದ್ದವರು ಈಗ ಪೊಲೀಸರ ಅತಿಥಿಗಳಾಗಿ ಜೈಲಲ್ಲಿ ಉಳಿಯುವಂತಾಗಿದೆ. ಇವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೆಐಗೊಳ್ಳಲಾಗಿದೆ.

Follow Us:
Download App:
  • android
  • ios