ರಾಜ್‌ಕೋಟ್‌(ಸೆ.01): ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ್ದರಿಂದ ಆಕ್ರೋಶಕೊಂಡ ವ್ಯಕ್ತಿಯೊಬ್ಬ ಕಂಪನಿಯ ಬೋರ್ಡ್‌ ಮೀಟಿಂಗ್‌ ನಡೆಯುತ್ತಿರುವಾಗಲೇ ಕಿರಿಯ ಸಹೋದರನಿಗೆ ಚಾಕುವಿನಿಂದ ಇರಿದ ಘಟನೆ ಗುಜರಾತಿನ ಭಾವ್‌ನಗರದ ಹೊರವಲಯದಲ್ಲಿರುವ ತಂಬೋಲಿ ಕಾಸ್ಟಿಂಗ್‌ ಲಿ. ಫ್ಯಾಕ್ಟರಿಯಲ್ಲಿ ನಡೆದಿದೆ.

ಕಂಪನಿಯ ನಿರ್ದೇಶಕ ಮಂಡಳಿಯಿಂದ ಮೆಹುಲ್‌ ತಂಬೋಲಿ ಎಂಬಾತನನ್ನು ವಜಾ ಮಾಡಲಾಗಿತ್ತು. ಇದೇ ವಿಷಯವಾಗಿ ಶನಿವಾರ ತಂದೆಯ ಅಧ್ಯಕ್ಷತೆಯಲ್ಲಿ ನಿರ್ದೇಶಕ ಮಂಡಳಿ ಸಭೆ ನಡೆಯುತ್ತಿತ್ತು. ಈ ವೇಳೆ ಕ್ರೋಧಗೊಂಡ ಮೆಹುಲ್‌, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಿರಿಯ ಸಹೋದರ ವೈಭವ್‌ಗೆ ಚಾಕುವಿನಿಂದ ಇರಿದಿದ್ದಾನೆ.

ವೈಭವ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯ ಸ್ಥಿರವಾಗಿದೆ. ಸದ್ಯ ಮೆಹುಲ್‌ ಪರಾರಿಯಾಗಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.