ಲೀಟರ್‌ ಹಾಲಿಗೆ 2 ರು. ಹೆಚ್ಚಳ: ಇಂದಿನಿಂದಲೇ ದರ ಏರಿಕೆ

ಹಾಲು ಉತ್ಪಾದಕರಿಗೆ ಲೀಟರ್‌ ಹಾಲಿಗೆ 2 ರು. ಹೆಚ್ಚಿಸಿ ಇಂದಿನಿಂದಲೇ ಹಾಲು ಉತ್ಪಾದಕರಿಗೆ ದೀಪಾವಳಿ ಉಡುಗೊರೆ ನೀಡಿದ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟ 

2 rs per Liter of Milk Increase to Milk Producers of CHAMUL grg

ಗುಂಡ್ಲುಪೇಟೆ(ಅ.21):   ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ಹಾಲು ಉತ್ಪಾದಕರಿಗೆ ಲೀಟರ್‌ ಹಾಲಿಗೆ 2 ರು. ಹೆಚ್ಚಿಸಿ ಇಂದಿನಿಂದಲೇ ಹಾಲು ಉತ್ಪಾದಕರಿಗೆ ದೀಪಾವಳಿ ಉಡುಗೊರೆ ನೀಡಿದೆ. ಕಳೆದ ಸೆ.15 ರಂದು ನಡೆದ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ 96 ನೇ ಆಡಳಿತ ಮಂಡಳಿ ಸಭೆಯಲ್ಲಿ ಪ್ರತಿ ಲೀಟರ್‌ ಹಾಲಿಗೆ 2 ರು.ಗಳನ್ನು ಅ.21ರ ಶುಕ್ರವಾರದಿಂದಲೇ ಉತ್ಪಾದಕರಿಗೆ ನೀಡಲು ಚಾಮುಲ್‌ ಮುಂದಾಗಿದೆ. ಹಾಲು ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ರಾಸುಗಳಲ್ಲಿ ಚರ್ಮಗಂಟು ರೋಗ ಸಂಬಂಧ ಹಾಲಿನ ಇಳುವರಿ ಕುಂಠಿತವಾದ ಹಿನ್ನೆಲೆ ಒಕ್ಕೂಟದ ಹಾಲಿನ ಶೇಖರಣೆ ಗಣನೀಯ ಕಡಿಮೆಯಾಗುತ್ತಿದೆ. ಶೇಖರಣೆ ಇಳಿಕೆ ಕಂಡು ಹಾಲು ಉತ್ಪಾದಕರ ಪೋ›ತ್ಸಾಹಿಸುವ ದೃಷ್ಟಿಯಿಂದ ಚಾಮುಲ್‌ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿದ ಬಳಿಕ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರಿಗೆ 2 ರು.ಹೆಚ್ಚಳ ಮಾಡಲಾಗಿದೆ.

ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ 463 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿದಿನ ಸರಾಸರಿ 2.10 ಕೆಜಿ ಹಾಲು ಸಂಗ್ರಹಿಸುತ್ತಿದ್ದು ಪ್ರತಿದಿನ ಜಿಲ್ಲೆಯಲ್ಲಿ 40 ಸಾವಿರ ಲೀಟರ್‌ ಹಾಲು, 9 ಸಾವಿರ ಲೀಟರ್‌ ಮೊಸರು ಹಾಗೂ ದೇಶದ ವಿವಿಧ ರಾಜ್ಯಗಳಿಗೆ 80 ಸಾವಿರ ಲೀಟರ್‌ ಯುಎಚ್‌ಟಿ ಹಾಲು ಮಾರಾಟ ಮಾಡಲಾಗುತ್ತಿದೆ.

Chamarajanagar: ಆರ್‌ಟಿಒ ಕಚೇರಿಗಿಲ್ಲ ಸಮರ್ಪಕ ರಸ್ತೆ ವ್ಯವಸ್ಥೆ: ಗುಂಡಿ ಬಿದ್ದ ರಸ್ತೆಯಿಂದ ನಡೆದಿದೆ ಅವಘಡ

ನೆರೆಯ ತಮಿಳುನಾಡಿನ ಕೊಯಮತ್ತೂರು ಮತ್ತು ನೀಲಗಿರಿ ಜಿಲ್ಲೆಗಳಲ್ಲಿ ಪ್ರತಿದಿನ 4 ಸಾವಿರ ಲೀ. ಹಾಲು ಮಾರಾಟವಾಗುತ್ತಿದೆ. ಕೇರಳದಲ್ಲೂ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟಕ್ಕೆ ಚಾಮುಲ್‌ ಮುಂದಾಗಿದ್ದು, ರಾಜ್ಯ ಸರ್ಕಾರದ ಕ್ಷೀರ ಭಾಗ್ಯ ಯೋಜನೆಗೆ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತಿದೆ.

ಚಾಮುಲ್‌ ರೈತರಿಗೆ ರಾಸು ವಿಮೆ, ಪಶು ವೈದ್ಯಕೀಯ ಸೇವೆ, ಸದಸ್ಯರಿಗೆ 1 ಲಕ್ಷ ರು. ವಿಮೆ, ಸದಸ್ಯರು ಮರಣ ಹೊಂದಿದ ಸಮಯದಲ್ಲಿ 15 ಸಾವಿರ ಪರಿಹಾರ, ಒಕ್ಕೂಟ ಡೇರಿ ಕಟ್ಟಡಗಳ ನಿರ್ಮಾಣಕ್ಕೆ 3 ಲಕ್ಷ ರು. ಅನುದಾನ, ಕೆಎಂಎಫ್‌ನಿಂದ 4.5 ಲಕ್ಷ ರು. ಅನುದಾನ, ರೈತ ಸದಸ್ಯರ ಹೆಣ್ಣು ಮಕ್ಕಳಿಗೆ ಹಾಸ್ಟೆಲ್‌ ವ್ಯವಸ್ಥೆ ಸೌಲಭ್ಯ ಚಾಮುಲ್‌ ನೀಡುತ್ತಿದೆ. ರೈತರು ನಿರಂತರ ಮಾರುಕಟ್ಟೆಒದಗಿಸುವ ನಂದಿನಿಗೆ ಹಾಲು ಸರಬರಾಜು ಮಾಡುವ ಮೂಲಕ ಸಹಕಾರ ವ್ಯವಸ್ಥೆ ಬಲಪಡಿಸಬೇಕಿದೆ.

ಚಾಮರಾಜನಗರ ಹಾಲು ಒಕ್ಕೂಟದ ಆಡಳಿತ ಮಂಡಳಿಯ ಸಭೆ ಕಳೆದ ತಿಂಗಳು ನಡೆದಿತ್ತು. ಹಾಲಿನ ಉತ್ಪಾದನಾ ವೆಚ್ಚ ಹಾಗೂ ಚರ್ಮಗಂಟು ರೋಗದ ಸಂಬಂಧ ಹಾಲಿನ ಶೇಖರಣೆ ಕಡಿಮೆ ಕಂಡು ಆಡಳಿತ ಮಂಡಳಿ ಒಪ್ಪಿಗೆ ಮೇರೆಗೆ ದೀಪಾವಳಿ ಹಬ್ಬದ ಉಡುಗೊರೆಯಾಗಿ ಲೀಟರ್‌ ಹಾಲಿಗೆ 2 ರು.ಹೆಚ್ಚಳ ಮಾಡಲಾಗಿದೆ ಅಂತ ಚಾಮುಲ್‌ ಅಧ್ಯಕ್ಷ ವೈ.ಸಿ.ನಾಗೇಂದ್ರ ತಿಳಿಸಿದ್ದಾರೆ.

ಹಾಲು ಉತ್ಪಾದಕರ ಸಂಕಷ್ಟಅರಿತು ಚಾಮುಲ್‌ ಆಡಳಿತ ಮಂಡಳಿ ನೆರವಿಗೆ ಬಂದಿದೆ. ಪ್ರತಿ ಲೀಟರ್‌ ಹಾಲಿಗೆ ಚಾಮುಲ್‌ 2 ರು. ಹೆಚ್ಚಿಸಿದೆ. ದರ ಹೆಚ್ಚಳಕ್ಕೆ ಕಾರಣರಾದ ಚಾಮುಲ್‌ ಆಡಳಿತ ಮಂಡಳಿಯ ಹಾಗೂ ಅಧಿಕಾರಿಗಳ ಕ್ರಮ ಅಭಿನಂದನಾರ್ಹವಾಗಿದೆ ಅಂತ  ಬೆಟ್ಟದಮಾದಹಳ್ಳಿ ಡೇರಿ ಅಧ್ಯಕ್ಷ ಬಿ.ಸಿ.ಮಹದೇವಸ್ವಾಮಿ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios