ಬೆಂಗಳೂರು (ಏ. 07):  ರಾಜ್ಯದಲ್ಲಿ ಜನರು ಲಾಕ್‌ಡೌನ್‌ ನಿಯಮ ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮತ್ತಷ್ಟುಬಿಗಿಗೊಳಿಸಲು ನೇರವಾಗಿ ಅಖಾಡಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಇಳಿದಿದೆ.

ಈ ಬಗ್ಗೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಪ್ರವೀಣ್‌ ಸೂದ್‌ ಅವರಿಗೆ ಸೂಚನೆ ನೀಡಿರುವ ವಿಪತ್ತು ನಿರ್ವಹಣೆ ಸಮಿತಿಯ ಉಪಾಧ್ಯಕ್ಷ ಆರ್‌.ಅಶೋಕ್‌ ಅವರು, ‘ಲಾಕ್‌ಡೌನ್‌ ನಿಯಮ ಉಲ್ಲಂಘಿಸುವವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಪ್ರಕರಣ ದಾಖಲಿಸುವಂತೆ ಠಾಣಾಧಿಕಾರಿಗಳಿಗೆ ಸೂಚಿಸಿ’ ಎಂದು ನಿರ್ದೇಶಿಸಿದ್ದಾರೆ.

ವೈದ್ಯರು, ನರ್ಸ್‌ಗೇ ವೈರಸ್‌: ಮುಂಬೈ 2 ಆಸ್ಪತ್ರೆಗೆ ಬೀಗ!

ಕಾಯ್ದೆ ಏನು ಹೇಳುತ್ತೆ?:

51ನೇ ವಿಧಿ: ಸಕಾರಣವಿಲ್ಲದೇ ಸರ್ಕಾರದ ಆದೇಶ ಪಾಲಿಸಲು ನಿರಾಕರಿಸುವ ವ್ಯಕ್ತಿಗೆ 1 ವರ್ಷದ ಜೈಲು ಶಿಕ್ಷೆ ಅಥವಾ ದಂಡ/ಆದೇಶ ಪಾಲಿಸದೇ ವ್ಯಕ್ತಿಯ ಜೀವಹಾನಿ ಇಲ್ಲವೇ ಅಪಾಯಕ್ಕೆ ದೂಡಿದರೆ 2 ವರ್ಷದವರೆಗೆ ಜೈಲು

52ನೇ ವಿಧಿ: ಸರ್ಕಾರದಿಂದ ಪರಿಹಾರ, ಸಹಾಯಧನ ಪಡೆಯಲು ತಪ್ಪು ಮಾಹಿತಿ ನೀಡಿದರೆ ಅಂತಹ ದಂಡ, 2 ವರ್ಷ ಜೈಲು

53ನೇ ವಿಧಿ: ಪರಿಹಾರ ವಿತರಿಸಲು ನೀಡಿದ ಹಣ, ವಸ್ತು ಅಥವಾ ಇನ್ನಾವುದೇ ಪರಿಹಾರ ದುರುಪಯೋಗಪಡಿಸಿಕೊಂಡರೆ ದಂಡ, 2 ವರ್ಷ ಜೈಲು

54ನೇ ವಿಧಿ: ವಿಕೋಪದ ಬಗ್ಗೆ ಸುಳ್ಳು ಸುದ್ದಿ ಹರಡುವ ಮೂಲಕ ಜನರಲ್ಲಿ ಭೀತಿ ಮೂಡಿಸಿದರೆ ದಂಡ, 1 ವರ್ಷ ಜೈಲು

55ನೇ ವಿಧಿ: ಸರ್ಕಾರಿ ಅಧಿಕಾರಿ ತಪ್ಪು ಮಾಡಿದರೆ ಅಂತಹ ಅಧಿಕಾರಿ ಶಿಕ್ಷಾರ್ಹ.

56ನೇ ವಿಧಿ: ಯಾವುದೇ ಅಧಿಕಾರಿ ಕರ್ತವ್ಯ ಮಾಡಲು ನಿರಾಕರಿಸಿದರೆ ದಂಡ, 1 ವರ್ಷದವರೆಗೆ ಜೈಲು

57ನೇ ವಿಧಿ: ಆದೇಶ ತಪ್ಪಾಗಿ ಜಾರಿಗೆ ತಂದರೆ ದಂಡ, 1 ವರ್ಷದವರೆಗೆ ಜೈಲು

58ನೇ ವಿಧಿ: ಯಾವುದೇ ಕಂಪನಿ ಅಥವಾ ಕಾರ್ಪೋರೆಟ್‌ ಸಂಸ್ಥೆ ತಪ್ಪು ಮಾಡಿದರೆ ಜವಾಬ್ದಾರಿ ಹೊಂದಿದವರು ಶಿಕ್ಷಾರ್ಹ