ಈಗ ಶಾಲಾ-ಕಾಲೇಜು ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆ ಜನರು ಮತ್ತೆ ಲಾಲ್‌ಬಾಗ್‌ ಕಡೆಗೆ ಮುಖ ಮಾಡಿದ್ದಾರೆ. ಮಕ್ಕಳಿಂದ ವೃದ್ಧರವರೆಗೂ ವಯಸ್ಸಿನ ಅಂತರವಿಲ್ಲದೇ ಸಸ್ಯತೋಟಕ್ಕೆ ಭೇಟಿ ಕೊಡುತ್ತಿದ್ದಾರೆ. ತೋಟಗಾರಿಕೆ ಇಲಾಖೆಯ ಮಾಹಿತಿಯಂತೆ ಏಪ್ರಿಲ್‌ 1ರಿಂದ ಈವರೆಗೆ ಲಾಲ್‌ಬಾಗ್‌ಗೆ 2.50 ಲಕ್ಷಕ್ಕೂ ಅಧಿಕ ಮಂದಿ ಭೇಟಿ ಕೊಟ್ಟಿದ್ದಾರೆ. 

ಸಂಪತ್‌ ತರೀಕೆರೆ

ಬೆಂಗಳೂರು(ಮೇ.19): ಕೊರೋನಾ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಳೆಗುಂದಿದ್ದ ಸಸ್ಯಕಾಶಿ ಲಾಲ್‌ಬಾಗ್‌ ವೈಭವ ಮತ್ತೆ ಮರುಕಳಿಸಿದ್ದು, ಕೇವಲ 45 ದಿನಗಳಲ್ಲಿ 2.50 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬೇಸಿಗೆ ಅವಧಿಯಲ್ಲಿ ಭೇಟಿ ನೀಡಿದವರ ಸಂಖ್ಯೆ ಶೇ.45ರಷ್ಟುಹೆಚ್ಚಳಗೊಂಡಿದೆ.

2020-22ರ ಅವಧಿಯಲ್ಲಿ ಕೊರೋನಾ ಸೋಂಕಿನ ಕಾರಣ ಲಾಲ್‌ಬಾಗ್‌ ಸಸ್ಯತೋಟಕ್ಕೆ ಭೇಟಿ ನೀಡುತ್ತಿದ್ದವರ ಸಂಖ್ಯೆಯಲ್ಲಿ ಸಾಕಷ್ಟು ಇಳಿಕೆಯಾಗಿತ್ತು. ಆದರೆ, ಕಳೆದ ವರ್ಷ ಸ್ವಾತಂತ್ರ್ಯೋತ್ಸವ ಮತ್ತು 2023ರ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನಕ್ಕೆ ಸಾಗರದೋಪಾದಿಯಲ್ಲಿ ಜನರು ಆಗಮಿಸಿದ್ದರು. ಉಳಿದ ಅವಧಿಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಜನರು ಭೇಟಿ ಕೊಟ್ಟಿರಲಿಲ್ಲ.

ಬೆಂಗ್ಳೂರಿನ ಲಾಲ್‌ಬಾಗ್‌ ರೀತಿ ಮೈಸೂರಲ್ಲೂ ಸಸ್ಯೋದ್ಯಾನ..!

ಆದರೆ, ಈಗ ಶಾಲಾ-ಕಾಲೇಜು ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭವಾಗುತ್ತಿದ್ದಂತೆ ಜನರು ಮತ್ತೆ ಲಾಲ್‌ಬಾಗ್‌ ಕಡೆಗೆ ಮುಖ ಮಾಡಿದ್ದಾರೆ. ಮಕ್ಕಳಿಂದ ವೃದ್ಧರವರೆಗೂ ವಯಸ್ಸಿನ ಅಂತರವಿಲ್ಲದೇ ಸಸ್ಯತೋಟಕ್ಕೆ ಭೇಟಿ ಕೊಡುತ್ತಿದ್ದಾರೆ. ತೋಟಗಾರಿಕೆ ಇಲಾಖೆಯ ಮಾಹಿತಿಯಂತೆ ಏಪ್ರಿಲ್‌ 1ರಿಂದ ಈವರೆಗೆ ಲಾಲ್‌ಬಾಗ್‌ಗೆ 2.50 ಲಕ್ಷಕ್ಕೂ ಅಧಿಕ ಮಂದಿ ಭೇಟಿ ಕೊಟ್ಟಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದ ಪ್ರವಾಸಿಗರು ಆಗಮಿಸಿದ್ದಾರೆ.

ಕಡಿಮೆ ಶುಲ್ಕ: 

ಲಾಲ್‌ಬಾಗ್‌ ಉದ್ಯಾನಕ್ಕೆ ಭೇಟಿ ನೀಡುವವರಿಗೆ ಅನುಕೂಲವಾಗಲೆಂದು ವಯಸ್ಕರಿಗೆ ಕೇವಲ 30 ರು. ಮತ್ತು 6 ವರ್ಷ ಮೇಲ್ಪಟ್ಟವರಿಗೆ 10 ರು.ಟಿಕೆಟ್‌ ಶುಲ್ಕ ವಿಧಿಸಲಾಗುತ್ತದೆ. 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಟಿಕೆಟ್‌ ಶುಲ್ಕ ಇಲ್ಲ. ಶಾಲಾ ಮಕ್ಕಳಿಗೆ ಮತ್ತು ಅಂಗವಿಕಲರಿಗೆ ದಿನಪೂರ್ತಿ ಉಚಿತ ಪ್ರವೇಶವಿದೆ. ಸ್ಥಳೀಯರು ಸೇರಿದಂತೆ ಇತರೆ ವಾಯುವಿಹಾರಿಗಳಿಗೆ ಅನುಕೂಲವಾಗಲಿ ಎಂದು ಬೆಳಗ್ಗೆ 6ರಿಂದ 9 ಮತ್ತು ಸಂಜೆ 6ರಿಂದ 7ರವರೆಗೆ ಉಚಿತ ಅವಕಾಶ ಒದಗಿಸಲಾಗಿದೆ.

ವಯಸ್ಸಾದವರಿಗೆ, ಮಕ್ಕಳಿಗೆ ಮತ್ತು ಅಂಗವಿಕಲರಿಗೆ ಲಾಲ್‌ಬಾಗ್‌ ಸುತ್ತಲು ಎಲೆಕ್ಟ್ರಿಕ್‌ ಮೋಟಾರ್‌ ವ್ಯವಸ್ಥೆ ಇದೆ. ಒಂದು ಸುತ್ತಿಗೆ 100 ರು.ಟಿಕೆಟ್‌ ದರದ ಈ ವಾಹನ, ಲಾಲ್‌ಬಾಗ್‌ ಬೆಟ್ಟದ ಸಮೀಪದಿಂದ ಆರಂಭಗೊಂಡು ಗ್ಲಾಸ್‌ಹೌಸ್‌ ಮುಂಭಾಗದಿಂದ ರೋಸ್‌ಗಾರ್ಡನ್‌, ಕೇದಿಗೆ ವನ, ಲಾಲ್‌ಬಾಗ್‌ ಕೆರೆ ಸೇರಿದಂತೆ ಇಡೀ ಉದ್ಯಾನವನ್ನು ಒಂದು ಸುತ್ತುಸುತ್ತಿ ಮೊದಲಿದ್ದ ಸ್ಥಳಕ್ಕೆ ಬಂದು ನಿಲ್ಲುತ್ತದೆ.

ಮೆಟ್ರೋದಲ್ಲಿ ಲಾಲ್‌ಬಾಗ್‌ನಿಂದ ಯಾವುದೇ ನಿಲ್ದಾಣಕ್ಕೆ 30 ರೂ ಟಿಕೆಟ್‌

ಕೈ ಬೀಸಿ ಕರೆವ ಪರಿಸರ ಸೊಬಗು

ಸುಮಾರು 240 ಎಕರೆ ಪ್ರದೇಶ ಹೊಂದಿರುವ ಲಾಲಾಬಾಗ್‌ ಸಸ್ಯತೋಟಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಲಾಲ್‌ಬಾಗ್‌ನಲ್ಲಿ ಸುಮಾರು 3 ಸಾವಿರ ವರ್ಷ ಹಳೆಯದಾದ ಬಂಡೆಯಿದೆ. ಅಫಘಾನಿಸ್ತಾನ, ಪರ್ಷಿಯಾ, ಫ್ರಾನ್ಸ್‌ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ತಂದಿರುವ ಅಪರೂಪದ ಹೂವು ಗಿಡಗಳು, ಒಂದು ಸಾವಿರಕ್ಕೂ ಹೆಚ್ಚು ಫೆä್ಲೕರಾ ಜಾತಿಯ ಗಿಡಗಳು, 100ರಿಂದ 150 ವರ್ಷಗಳಷ್ಟುಹಳೆಯದಾದ ಮರಗಳು ಇಲ್ಲಿವೆ.

ಎಲ್ಲರನ್ನೂ ಸೆಳೆಯುವ ಗಾಜಿನಮನೆ, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಪ್ರತಿಮೆ, ಸಾವಿರಾರು ವರ್ಷಗಳಷ್ಟುಹಳೆಯ ಬಂಡೆಯ ಮೇಲಿರುವ ಗಡಿಗೋಪುರ, ಲಾಲ್‌ಬಾಗ್‌ ಕೆರೆ, ನಯಾಗಾರ ಫಾಲ್ಸ್‌ ಮಾದರಿಯ ಕೃತಕ ಜಲಪಾತ, ವಾಹನ ಮುಕ್ತ ಪರಿಸರ, ಹಸಿರು ಹುಲ್ಲುಗಾವಲು, ಗಮನ ಸೆಳೆಯುವ ರೋಸ್‌ಗಾರ್ಡನ್‌, ಬೋನ್ಸಾಯಿ ಪಾರ್ಕ್, ಮಳೆಗೆ ಧರೆಗುರುಳಿದ ಉದ್ಯಾನದ ಮರಗಳಲ್ಲಿ ಅರಳಿರುವ ಕಲಾಕೃತಿಗಳು. ಹೀಗೆ ಒಂದಕ್ಕೊಂದು ಸಾಟಿಯೇ ಇಲ್ಲದಂತೆ ಪರಿಸರದ ಸೊಬಗು ಪ್ರವಾಸಿಗರನ್ನು ಮತ್ತೆ ಮತ್ತೆ ಲಾಲ್‌ಬಾಗ್‌ಗೆ ಬರುವಂತೆ ಮಾಡುತ್ತವೆ.