*  197 ಜನರಲ್ಲಿ ಸೋಂಕು ಪತ್ತೆ*  ಪಾಸಿಟಿವಿಟಿ ದರ ಶೇ.1.13ಕ್ಕೆ ಹೆಚ್ಚಳ*  ಹೊಸದಾಗಿ ಯಾವುದೇ ಕಂಟೈನ್ಮೆಂಟ್‌ ವಲಯ ಸೃಷ್ಟಿಯಾಗಿಲ್ಲ 

ಬೆಂಗಳೂರು(ಮೇ.26): ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದು, ಬುಧವಾರ 197 ಜನರಲ್ಲಿ ಸೋಂಕು ಪತ್ತೆಯಾಗಿದೆ. ಪಾಸಿಟಿವಿಟಿ ದರ ಶೇ.1.13ಕ್ಕೆ ಹೆಚ್ಚಾಗಿದೆ. 118 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ದಾಖಲಾಗಿಲ್ಲ.

ಕಳೆದ ಭಾನುವಾರ 161, ಶನಿವಾರ 150, ಸೋಮವಾರ 100, ಮಂಗಳವಾರ 107 ಮಂದಿಯಲ್ಲಿ ಕೊರೋನಾ ಸೋಂಕಿತರು ಪತ್ತೆಯಾಗಿತ್ತು. ಬುಧವಾರ ಈ ಸಂಖ್ಯೆ 197ಕ್ಕೆ ಏರಿಕೆಯಾಗಿದೆ. ಜತೆಗೆ ಪಾಸಿಟಿವಿಟಿ ದರವು ಶೇ.1.04ನಿಂದ 1.13ಗೆ ಏರಿಕೆಯಾಗಿರುವುದು ಆತಂಕ ಮೂಡಿಸಿದೆ.

Covid Crisis: ಬಿಎ.4, ಬಿಎ.5 ಉಪತಳಿಯ ಮೊದಲ ದೇಶಿ ಕೇಸು ಪತ್ತೆ!

ಇನ್ನು ನಗರದಲ್ಲಿ ಒಟ್ಟು 1,730 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ತೀವ್ರ ನಿಗಾ ವಿಭಾಗದಲ್ಲಿ ಒಬ್ಬ ಮತ್ತು ಸಾಮಾನ್ಯ ವಾರ್ಡ್‌ನಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.

ಬುಧವಾರ ಹೊಸದಾಗಿ ಯಾವುದೇ ಕಂಟೈನ್ಮೆಂಟ್‌ ವಲಯ ಸೃಷ್ಟಿಯಾಗಿಲ್ಲ. ನಾಲ್ಕು ಕಂಟೈನ್ಮೆಂಟ್‌ ವಲಯಗಳಿವೆ. 9,575 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 1,642 ಮಂದಿ ಮೊದಲ ಡೋಸ್‌, 4,746 ಮಂದಿ ಎರಡನೇ ಡೋಸ್‌ ಮತ್ತು 3,187 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.​​​ ಒಟ್ಟು 13,973 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 10,785 ಆರ್‌ಟಿಪಿಸಿಆರ್‌ ಹಾಗೂ 3,188 ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.