ಕಲಘಟಗಿ(ಮಾ.14): ಕೋಳಿಯಿಂದ ಕೊರೋನಾ ರೋಗ ಹರಡುತ್ತವೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಚಿಕನ್‌ ಮಾಂಸ ಖರೀದಿಸಲು ಜನ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಕಲಘಟಗಿಯಲ್ಲಿ ಸುಮಾರು 18 ಸಾವಿರ ಕೋಳಿಗಳನ್ನು ಗುಂಡಿ ತೋಡಿ ಜೀವಂತ ಹೂತು ಹಾಕಿದ್ದಾರೆ. 

ಕೋಳಿಗಳಿಗೆ ದಿನನಿತ್ಯ ಖರ್ಚು ಅಧಿಕವಾಗಿದ್ದರಿಂದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇರುವುದರಿಂದ ಒಟ್ಟಾರೆ ಮಾಲಿಕರು ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೀಗಾಗಿ ತಾಲೂಕಿನ ಬಿ. ಗುಡಿಹಾಳ ಗ್ರಾಮದ ಜಗದೀಶ ಕೋಟಿ ಹಾಗೂ ಪ್ರಕಾಶ ಹೆಬ್ಬಳ್ಳಿ ಎಂಬುವರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಫಾರ್ಮಿನಲ್ಲಿ ಇನ್ನೂ 6000 ಕೋಳಿಗಳಿದ್ದು ಅವುಗಳನ್ನು ಸಹ ಮಣ್ಣಲ್ಲಿ ಹೂತು ಹಾಕಲಾಗುವುದು ಎಂದು ತಿಳಿಸಿದ್ದಾರೆ.